/newsfirstlive-kannada/media/post_attachments/wp-content/uploads/2025/04/KARUN_NAIR_BUMRHA.jpg)
ದೆಹಲಿಯಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಕನ್ನಡಿಗ ಕರುಣ್ ನಾಯರ್ ವೇಗದ ಅರ್ಧಶತಕ ಸಿಡಿಸಿದರು. ಆದರೂ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 12 ರನ್ಗಳಿಂದ ಡೆಲ್ಲಿ ಸೋಲುಂಡಿತು. ಐಪಿಎಲ್ನಲ್ಲಿ ಬರೋಬ್ಬರಿ 7 ವರ್ಷದ ಬಳಿಕ ಕರುಣ್ ನಾಯರ್ ಹಾಫ್ಸೆಂಚುರಿ ಬಾರಿಸಿದ್ರೆ ಇದರ ಜೊತೆಗೆ ಅವರು 2022ರಲ್ಲಿ ಮಾಡಿದ್ದ ಅದೊಂದು ಟ್ವೀಟ್ ಈಗ ವೈರಲ್ ಆಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇದ್ದರೂ ಕರುಣ್ ನಾಯರ್ಗೆ ಮೊದಲು 4 ಪಂದ್ಯಗಳಲ್ಲಿ ಬೆಂಚ್ಗೆ ಮೀಸಲು ಮಾಡಲಾಗಿತ್ತು. ಆದರೆ ದೆಹಲಿಯಲ್ಲಿ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಕರುಣ್ ನಾಯರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮುಖೇಶ್ ಕುಮಾರ್ ಬದಲಿಗೆ ಸ್ಥಾನ ಪಡೆದಿದ್ದರು. ಕೊಟ್ಟ ಅವಕಾಶವನ್ನು ಬಳಸಿಕೊಂಡು ಕರುಣ್ ನಾಯರ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತೋರಿಸಿದರು.
ಅರ್ಧಶತಕದ ಬಳಿಕವು ಭರ್ಜರಿ ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ 40 ಎಸೆತದಲ್ಲಿ 12 ಫೋರ್, 5 ಸಿಕ್ಸರ್ನಿಂದ 89 ರನ್ಗಳಿಸಿದ್ದರು. ವಿಶ್ವದ ಶ್ರೇಷ್ಠ ಬೌಲರ್ ಎನಿಸಿಕೊಂಡಿದ್ದ ಬೂಮ್ರಾಗೂ ಸಿಕ್ಸರ್ ಸಿಡಿಸಿದರು. ಈ ವೇಳೆ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಬೋಲ್ಡ್ ಆಗಿ ಕೇವಲ 11 ರನ್ಗಳಿಂದ ಸೆಂಚುರಿ ಮಿಸ್ ಮಾಡಿಕೊಂಡರು. ಆದರೆ ಕರಣ್ ನಾಯರ್ ಬರೋಬ್ಬರಿ 7 ವರ್ಷದ ಬಳಿಕ ಐಪಿಎಲ್ನಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಹಿಂದೆ ಅವರು 2018ರಲ್ಲಿ ಚೆನ್ನೈ ತಂಡದ ವಿರುದ್ಧ 8 ಬೌಂಡರಿ, 2 ಸಿಕ್ಸರ್ನಿಂದ 54 ರನ್ ಗಳಿಸಿದ್ದರು.
ಕರುಣ್ ನಾಯರ್ ಅವರು 2022ರಲ್ಲಿ ರಾಜಸ್ಥಾನ್ ತಂಡದಲ್ಲಿದ್ದಾಗ ಕೊನೆಯದಾಗಿ ಕೆಕೆಆರ್ ವಿರುದ್ಧ ಬ್ಯಾಟ್ ಬೀಸಿದ್ದರು. ಅಂದಿನಿಂದ 2025ರ ಡೆಲ್ಲಿ ಪರವಾಗಿ ಮುಂಬೈ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ದೇಶಿಯ ಪಂದ್ಯಗಳಲ್ಲಿ ಅಬ್ಬರಿಸಿದ್ದರಿಂದ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಫ್ರಾಂಚೈಸಿ ಸೇರಿಸಿಕೊಂಡು ಅವಕಾಶ ನೀಡಿದೆ. ಸದ್ಯ ಕರಣ್ ನಾಯರ್ಗೆ 33 ವರ್ಷಗಳು ಆಗಿವೆ.
ಇದನ್ನೂ ಓದಿ: ವಿರಾಟ್ ಫ್ಯಾನ್ಸ್ಗೆ ಬಿಗ್ ಶಾಕ್; ಕಿಂಗ್ ಕೊಹ್ಲಿಗೆ ಹಾರ್ಟ್ ಸಮಸ್ಯೆನಾ, ಪಿಚ್ನಲ್ಲಿ ಏನಾಯಿತು?
ಡೆಲ್ಲಿ ಕ್ಯಾಪಿಟಲ್ಸ್ 2025ರ ಮೆಗಾ ಆಕ್ಷನ್ನಲ್ಲಿ ಕೇವಲ 50 ಲಕ್ಷ ರೂಪಾಯಿಗಳಿಗೆ ಮಾತ್ರ ಕರಣ್ ನಾಯರ್ ಅವರನ್ನು ಖರೀದಿ ಮಾಡಿದೆ. ಕರುಣ್ ನಾಯರ್ ಅವರು 2022 ಡಿಸೆಂಬರ್ 10 ರಂದು ಟ್ವೀಟ್ ಮಾಡಿದ್ದರು. Dear cricket, give me one more chance (ಪ್ರೀತಿಯ ಕ್ರಿಕೆಟ್ ಮತ್ತೊಂದು ಅವಕಾಶ ಕೊಡು) ಎಂದು ಬರೆದುಕೊಂಡಿದ್ದರು. ಅಂದು ಮಾಡಿದ್ದ ಟ್ವೀಟ್ ಈಗ ವೈರಲ್ ಆಗುತ್ತಿದೆ. ಸದ್ಯ ಇದಕ್ಕೆ ಸಾಕಷ್ಟು ಜನರು ಕಮೆಂಟ್ಸ್ ಮಾಡುತ್ತಿದ್ದಾರೆ.
Dear cricket, give me one more chance.🤞🏽
— Karun Nair (@karun126)
Dear cricket, give me one more chance.🤞🏽
— Karun Nair (@karun126) December 10, 2022
">December 10, 2022
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ