/newsfirstlive-kannada/media/post_attachments/wp-content/uploads/2024/11/KL-Rahul-Test.jpg)
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಬಿಸಿಸಿಐ ಬಲಿಷ್ಠ ಟೀಂ ಇಂಡಿಯಾ ಪ್ರಕಟಿಸಿದೆ. ವಿಶೇಷ ಅಂದರೆ ಈ ಬಾರಿಯ ಟೆಸ್ಟ್ ತಂಡದಲ್ಲಿ ಮೂವರು ಕನ್ನಡಿಗರು ಸ್ಥಾನ ಪಡೆದುಕೊಂಡಿದ್ದಾರೆ.
ವಿಕೆಟ್ ಕೀಪರ್ ಅಂಡ್ ಬ್ಯಾಟ್ಸಮನ್ ಕೆ.ಎಲ್.ರಾಹುಲ್, ಕರುಣ್ ನಾಯರ್, ವೇಗಿ ಪ್ರಸಿದ್ಧ್ ಕೃಷ್ಣ ಅವರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು, ತಂಡದಲ್ಲಿ ಶುಭ್ಮನ್ ಗಿಲ್ (ನಾಯಕ), ರಿಷಬ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಸಾಯಿ ಸುಧರ್ಶನ್, ಅಭಿಮನ್ಯು ಈಶ್ವರನ್, ನಿತಿಶ್ ಕುಮಾರ್ ರೆಡ್ಡಿ, ಧ್ರುವ್ ಜುರೇಲ್, ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ, ವಾಷಿಗ್ಟಂನ್ ಸುಂದರ್. ಶಾರ್ದೂಲ್ ಠಾಕೂರ್ ಸ್ಥಾನ ಪಡೆದ್ರೆ, ವೇಗಿಗಳ ಕೋಟಾದಲ್ಲಿ ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಕುಲ್ ದೀಪ್ ಯಾದವ್, ಆರ್ಶ್ದೀಪ್ ಸಿಂಗ್ಗೆ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಏಕಾನಾ ಸ್ಟೇಡಿಯಂನಲ್ಲಿ RCB ಎಡವಿದ್ದು ಎಲ್ಲಿ? ನಾಯಕ ಜಿತೇಶ್ ಶರ್ಮಾ ಹೊಣೆ ಮಾಡಿದ್ದು ಯಾರನ್ನ?
ಜೂನ್ 20 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಟೆಸ್ಟ್ ಲೀಡ್ಸ್ನಲ್ಲಿ ನಡೆಯಲಿದ್ದು, ಜುಲೈ 20 ರಿಂದ ಆರಂಭವಾಗಿ, 25ಕ್ಕೆ ಮುಗಿಯಲಿದೆ. ಎರಡನೇ ಟೆಸ್ಟ್ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿದ್ದು, ಜುಲೈ 2 ರಿಂದ ಶುರುವಾಗಿ ಜುಲೈ 7 ರಂದು ಕೊನೆಯಾಗಲಿದೆ.
ಮೂರನೇ ಟೆಸ್ಟ್ ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ಜುಲೈ 10 ರಿಂದ ಆರಂಭವಾಗಲಿದೆ. ನಾಲ್ಕನೇ ಟೆಸ್ಟ್ ಮ್ಯಾಚೆಂಸ್ಟರ್ನಲ್ಲಿ ಜುಲೈ 23 ರಿಂದ ನಡೆಯಲಿದೆ. ಕೊನೆಯ ಟೆಸ್ಟ್ ಪಂದ್ಯವು ಜುಲೈ 31 ರಂದು ಲಂಡನ್ನಲ್ಲಿ ನಡೆಯಲಿದೆ.
ಇದನ್ನೂ ಓದಿ: BNYS, ನರ್ಸಿಂಗ್ನಲ್ಲಿ ಫಸ್ಟ್.. ಅಗ್ರಿಕಲ್ಚರ್ನಲ್ಲಿ 6ನೇ ರ್ಯಾಂಕ್.. ಈ ಸಾಧನೆ ಬಗ್ಗೆ ಹರೀಶ್ ರಾಜ್ ಹೇಳಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್