ಮತ್ತೆ ಸುವರ್ಣಾವಕಾಶ ಕೈಚೆಲ್ಲಿದ ಕನ್ನಡಿಗ.. ಅಭಿಮಾನಿಗಳಿಂದ ಭಾರೀ ಆಕ್ರೋಶ..!

author-image
Ganesh
Updated On
ಮೊದಲ ಪಂದ್ಯದಲ್ಲಿ ಕರುಣ್​ ನಾಯರ್​​ ಸ್ಥಾನ ಫಿಕ್ಸ್​.. ಕನ್ನಡಿಗನ ಹಠ, ಪರಿಶ್ರಮಕ್ಕೆ ಫಲ ಸಿಗುತ್ತಾ?
Advertisment
  • ಎರಡನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​​ನಲ್ಲೂ ಕರುಣ್ ನಾಯರ್ ಫೇಲ್
  • ಕನ್ನಡಿಗ ಕರುಣ್ ನಾಯರ್ ಮೇಲಿದ್ದ ಬೆಟ್ಟದಷ್ಟು ನಿರೀಕ್ಷೆ ಹುಸಿ ಆಗ್ತಿದೆಯಾ?
  • ಆಂಗ್ಲ ಪ್ರವಾಸದೊಂದಿಗೆ ಕರುಣ್ ನಾಯರ್​​ ಕರಿಯರ್​ಗೆ ಎಂಡ್ ಕಾರ್ಡ್?

ತುಂಬಾ ವರ್ಷಗಳ ನಂತರ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದ ಕನ್ನಡಿಗ ಕರುಣ್ ನಾಯರ್ ಮೇಲೆ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ನಲ್ಲಿ ಹೀನಾಯ ಪ್ರದರ್ಶನ ನೀಡುವ ಮೂಲಕ ತಮ್ಮ ಸ್ಥಾನಕ್ಕೆ ಅಭದ್ರತೆಯನ್ನು ತಂದುಕೊಂಡಿದ್ದಾರೆ.

ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಆಡ್ತಿದೆ. ಈ ಎರಡು ಟೆಸ್ಟ್​ಗಳಲ್ಲಿ ನಾಲ್ಕು ಇನ್ನಿಂಗ್ಸ್​​ನಲ್ಲಿ ಬ್ಯಾಟ್ ಬೀಸಿರುವ ಕರುಣ್ ನಾಯರ್​, ರನ್​ಗಳಿಸಲು ಆಗದೇ ಪರದಾಟ ನಡೆಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ್ದ ಕರುಣ್​, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದರೊಂದಿಗೆ 2ನೇ ಇನ್ನಿಂಗ್ಸ್​ನಲ್ಲಿ ಆಡ್ತಾರೆ ಎಂಬ ನಿರೀಕ್ಷೆ ಇತ್ತು. ಆದ್ರೆ, 2ನೇ ಇನ್ನಿಂಗ್ಸ್​ನಲ್ಲೂ ನಿರಾಸೆ ಮೂಡಿಸಿದ ಕರುಣ್, 20 ರನ್​​ ಸಿಡಿಸಲು ಸುಸ್ತಾದರು.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ತ್ರಿಮೂರ್ತಿಗಳ ಅಮೋಘ ಆಟ.. ನಾಯಕ ಗಿಲ್ ಮತ್ತೊಮ್ಮೆ ಸೊಗಸಾದ ಸೆಂಚುರಿ..!

publive-image

ಲೀಡ್ಸ್​ನಲ್ಲಿ ಫೇಲ್ಯೂರ್ ಆಗಿದ್ದ ಕರುಣ್, ಎಡ್ಜ್​ಬಾಸ್ಟನ್​ನಲ್ಲಿ ಬ್ಲಾಕ್ ಬಾಸ್ಟರ್ ಪರ್ಫಾಮೆನ್ಸ್​ ನೀಡುವ ಚಾನ್ಸ್​ ಇತ್ತು. ನೆಚ್ಚಿನ 3ನೇ ಕ್ರಮಾಂಕದಲ್ಲೇ ಕಣಕ್ಕಿಳಿದಿದ್ದ ಕರುಣ್​ಗೆ ರನ್​​ ಗಳಿಸುವ ಸುವರ್ಣಾವಕಾಶವೂ ಇತ್ತು. ಆದ್ರೆ, ಉತ್ತಮ ಸ್ಟಾರ್ಟ್​ ನಡುವೆಯೂ ಕರುಣ್​​​, 31 ರನ್​ಗೆ ವಿಕೆಟ್ ಒಪ್ಪಿಸಿ ಮತ್ತೆ ನಿರಾಸೆ ಮೂಡಿಸಿದರು. ಎರಡನೇ ಇನ್ನಿಂಗ್ಸ್​ನಲ್ಲಿ 26 ರನ್​​ಗಳಿಸಿ ಮತ್ತೆ ನಿರಾಸೆ ಮೂಡಿಸಿದ್ದಾರೆ. ಆ ಮೂಲಕ ಕರುಣ್ ನಾಯರ್​ ನಿರೀಕ್ಷಿತ ಪ್ರದರ್ಶನ ನೀಡೋದ್ರಲ್ಲಿ ಫೇಲ್ ಆಗಿದ್ದಾರೆ. ಮುಂದಿನ ಟೆಸ್ಟ್​ಗಳಲ್ಲಿ ಅವರಿಗೆ ಸ್ಥಾನ ಸಿಗೋವ ಚಾನ್ಸ್ ಕಡಿಮೆ ಇದೆ. ಪದೇ ಪದೇ ಫೇಲ್ ಆಗ್ತಿರೋದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ ಎಲಾನ್ ಮಸ್ಕ್​​.. ಡೊನಾಲ್ಡ್ ಟ್ರಂಪ್​ಗೆ ದೊಡ್ಡ ಪೆಟ್ಟು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment