/newsfirstlive-kannada/media/post_attachments/wp-content/uploads/2025/05/KARUN_NAIR-2.jpg)
ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಭರ್ಜರಿಯಾಗಿ ಬ್ಯಾಟ್ ಬೀಸಿದೆ. ಕನ್ನಡಿಗ ಕರುಣ್ ನಾಯರ್ ಅವರ 186 ರನ್ಗಳಿಂದ ಭಾರತ ಎ ತಂಡ 409 ರನ್ ಗಳಿಸಿದೆ.
ಕ್ಯಾಂಟರ್ಬರಿ ಸೇಂಟ್ ಲಾರೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ತಂಡದ ನಾಯಕ ಜೇಮ್ಸ್ ರೆವ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಭಾರತ-ಎ ತಂಡ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಅಭಿಮನ್ಯು ಈಶ್ವರನ್ ಒಳ್ಳೆಯ ಆರಂಭ ಪಡೆಯಲಿಲ್ಲ.
ಯಶಸ್ವಿ ಜೈಸ್ವಾಲ್ 24 ಹಾಗೂ ನಾಯಕ ಅಭಿಮನ್ಯು 8 ರನ್ಗೆ ಪೆವಿಲಿಯನ್ಗೆ ನಡೆದರು. ಆದರೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಕನ್ನಡಿಗ ಕರುಣ್ ನಾಯರ್, ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ಭಾರತ-ಎ ತಂಡವನ್ನು ಅದ್ಭುತ ಬ್ಯಾಟಿಂಗ್ ಮಾಡಿ ಪಾರು ಮಾಡಿದರು ಎನ್ನಬಹುದು. ಕರುಣ್ ನಾಯರ್ ಬ್ರಿಟಿಷ್ ಯುವ ಆಟಗಾರರನ್ನ ಮನಬಂದಂತೆ ಚಚ್ಚಿದರು.
ಇದನ್ನೂ ಓದಿ:ಮತ್ತೆ ಪ್ರಶಂಸೆ ಪಡೆದ ವೈಭವ್ ಸೂರ್ಯವಂಶಿ.. ಯಂಗ್ ಕ್ರಿಕೆಟರ್ಗೆ ಪ್ರಧಾನಿ ಮೋದಿ ಹೇಳಿದ್ದು ಏನು?
ಇದುವರೆಗೂ ಕ್ರೀಸ್ ಕಾಯ್ದುಕೊಂಡಿರುವ ಕರುಣ್ ನಾಯರ್ ತಂಡದಲ್ಲಿ ಅಮೋಘ ಪ್ರದರ್ಶನ ತೋರಿದರು. ಹೀಗಾಗಿ 87 ಬಾಲ್ಗಳಲ್ಲಿ ಅರ್ಧಶತಕ ಸಿಡಿಸಿದರು. ಇದಾದ ಮೇಲೆ ಬ್ಯಾಟಿಂಗ್ ಮುಂದುವರೆಸಿದ ಕನ್ನಡಿಗ 157 ಬಾಲ್ಗಳಲ್ಲಿ 14 ಫೋರ್ಗಳಿಂದ ಸೆಂಚುರಿ ಬಾರಿಸಿದರು. ಆಂಗ್ಲರು ಕನ್ನಡಿಗನ ವಿಕೆಟ್ ಪಡೆಯಲು ತಡಕಾಡಿದರು. ಆದರೆ ಕರುಣ್ ವಿಕೆಟ್ ಒಪ್ಪಿಸಲಿಲ್ಲ. 207 ಬಾಲ್ಗಳಲ್ಲಿ 21 ಬೌಂಡರಿ ಹಾಗೂ 1 ಸಿಕ್ಸರ್ನಿಂದ 150 ರನ್ ಗಳಿಸಿ ಮಹತ್ತರ ಸಾಧನೆ ಮಾಡಿದರು.
ಕರುಣ್ ನಾಯರ್ ಇನ್ನು ಕ್ರೀಸ್ನಲ್ಲಿದ್ದು ಅವರು ಕೇವಲ ಒಂದೇ ಒಂದು ಸಿಕ್ಸರ್ ಹಾಗೂ 24 ಬೌಂಡರಿಗಳಿಂದ 186 ರನ್ಗಳನ್ನು ಬಾರಿಸಿದ್ದಾರೆ. ಇಂದು ಕೂಡ ಬ್ಯಾಟಿಂಗ್ ಮುಂದುವರೆಸಲಿದ್ದಾರೆ. ಇನ್ನು ಶತಕದ ಸಮೀಪದಲ್ಲಿ ಸರ್ಫರಾಜ್ ಖಾನ್ (92) ಔಟ್ ಆಗಿರೋದು ಭಾರೀ ನಿರಾಸೆ ಮೂಡಿಸಿತು. ಕರುಣ್ ನಾಯರ್ ಜೊತೆ ವಿಕೆಟ್ ಕೀಪರ್ ಕಮ್ ಬ್ಯಾಟರ್ ಧೃವ್ ಜುರೆಲ್ ಬ್ಯಾಟಿಂಗ್ ಮಾಡುತ್ತಿದ್ದು 82 ರನ್ ಬಾರಿಸಿದ್ದಾರೆ. ಈ ಎಲ್ಲರ ಬ್ಯಾಟಿಂಗ್ನಿಂದ ಭಾರತ- ಎ ತಂಡ ಮೊದಲ ಕೇವಲ 3 ವಿಕೆಟ್ಗೆ 409 ರನ್ಗಳನ್ನು ಗಾಳಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ