Advertisment

ಕರುಣ್ ನಾಯರ್ ದ್ವಿಶತಕ, ಟೀಕೆಗಳಿಗೆ ಉತ್ತರ ಕೊಟ್ಟ ಕನ್ನಡಿಗ.. ಬೃಹತ್‌ ಮೊತ್ತ ಪೇರಿಸಿದ ಭಾರತ!

author-image
Bheemappa
Updated On
ಆಂಗ್ಲರ ಕಾಡಲು ದೋಸ್ತಿಗಳು ರೆಡಿ.. ರೋಹಿತ್ ಸ್ಥಾನಕ್ಕೆ ರಾಹುಲ್, ಕೊಹ್ಲಿ ಸ್ಲಾಟ್​ಗೆ ಮತ್ತೊಬ್ಬ ಕನ್ನಡಿಗ..!
Advertisment
  • ಓಪನರ್ಸ್​ ವಿಫಲ, ಮಧ್ಯಮ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್
  • ಭಾರತ ತಂಡದಲ್ಲಿ ಎರಡು ಶತಕಗಳು ಮಿಸ್ ಆಗಿದ್ದು ಬೇಸರ
  • ಇಂಗ್ಲೆಂಡ್​ನ ಬೌಲರ್​ಗಳಿಗೆ ಕರುಣ್ ಬೌಂಡರಿಗಳ ದರ್ಶನ

ಕನ್ನಡಿಗ ಕರುಣ್ ನಾಯರ್ ಅವರ ದ್ವಿಶತಕದಿಂದ ಇಂಗ್ಲೆಂಡ್​ ಲಯನ್ಸ್​ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ- ಎ ತಂಡ 557 ರನ್​ಗಳ ಬೃಹತ್​ ಮೊತ್ತ ಕಲೆಹಾಕಿದೆ.

Advertisment

ಕ್ಯಾಂಟರ್ಬರಿ ಸೇಂಟ್ ಲಾರೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​ ಲಯನ್ಸ್​ ತಂಡದ ನಾಯಕ ಜೇಮ್ಸ್ ರೆವ್, ಫೀಲ್ಡಿಂಗ್ ತೆಗೆದುಕೊಂಡರು. ಭಾರತ-ಎ ತಂಡ ಮೊದಲ ಬ್ಯಾಟಿಂಗ್ ಮಾಡಿತು. ಓಪನರ್​ ಆಗಿ ಕ್ರೀಸ್​​ಗೆ ಆಗಮಿಸಿದ್ದ ಯಶಸ್ವಿ ಜೈಸ್ವಾಲ್ 24, ನಾಯಕ ಅಭಿಮನ್ಯು ಈಶ್ವರನ್​ 8 ರನ್​ಗೆ ಔಟ್ ಆದರು.

ಇದಾದ ಮೇಲೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಕನ್ನಡಿಗ ಕರುಣ್ ನಾಯರ್ ಬ್ರಿಟಿಷರ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದರು. ಇಂಗ್ಲೆಂಡ್​ನ ಯುವ ಬೌಲರ್​ಗಳಿಗೆ ಬೌಂಡರಿಗಳ ದರ್ಶನ ಮಾಡಿಸಿದರು. ಮೊದಲ ದಿನವೇ 186 ರನ್​ ಗಳಿಸಿದ್ದ ಕರುಣ್ ನಾಯರ್ 2ನೇ ದಿನ ಬ್ಯಾಟಿಂಗ್ ಮುಂದುವರೆಸಿ, ಸ್ವಲ್ಪ ಸಮಯ ಮಾತ್ರ ಕ್ರೀಸ್​ನಲ್ಲಿದ್ದರು.

ಇದನ್ನೂ ಓದಿ: ಭಾರೀ ಮಳೆಯಿಂದ ಭೂಕುಸಿತ, ಹಠಾತ್ ಪ್ರವಾಹ.. ಕೇವಲ 2 ದಿನದಲ್ಲಿ ಪ್ರಾಣ ಬಿಟ್ಟ 30 ಜನ!

Advertisment

publive-image

2ನೇ ದಿನದಾಟದಲ್ಲಿ ಎರಡು ಬೌಂಡರಿ ಸಿಡಿಸಿದ ಕರುಣ್ ನಾಯರ್​ ಡಬಲ್​ ಹಂಡ್ರೆಡ್​ ಬಾರಿಸಿ ಸಂಭ್ರಮಿಸಿದರು. ಪಂದ್ಯದಲ್ಲಿ ಒಟ್ಟು 281 ಎಸೆತಗಳನ್ನು ಎದುರಿಸಿದ ಕನ್ನಡಿಗ ಕೇವಲ ಒಂದೇ ಒಂದು ಸಿಕ್ಸರ್​ ಜೊತೆಗೆ 26 ಬೌಂಡರಿಗಳಿಂದ 204ರನ್​ಗಳನ್ನು ಬಾರಿಸಿ ಜೇಮ್ಸ್​ ರಿವ್ಯೂಗೆ ಕ್ಯಾಚ್​ ಕೊಟ್ಟರು. ವಿಕೆಟ್​ ಕೀಪರ್​ ಧೃವ್ ಜರೇಲ್ ಅವರು 94 ರನ್​ ಗಳಿಸಿ ಇರುವಾಗ ಅಜೀತ್ ಡೇಲ್ ಬೌಲಿಂಗ್​ನಲ್ಲಿ ಕ್ಯಾಚ್​ಗೆ ಬಲಿಯಾದರು. ಇದರಿಂದ ಶತಕ ವಂಚಿತರಾದರು. ಅಲ್ಲದೇ ನಿನ್ನೆ ಸರ್ಫರಾಜ್​ ಕೂಡ 92 ರನ್​ ಗಳಿಸಿ ಆಡುವಾಗ ಔಟ್ ಆಗಿ ಸೆಂಚುರಿ ಮಿಸ್ ಮಾಡಿಕೊಂಡಿದ್ದರು.

ಭಾರತ-ಎ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಒಟ್ಟು 125.1 ಓವರ್​ ಆಡಿ ಆಲೌಟ್ ಆಗಿದ್ದು 557 ರನ್​ಗಳ ದೊಡ್ಡ ರನ್​ ಸಂಗ್ರಹಿಸಿದೆ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿರುವ ಇಂಗ್ಲೆಂಡ್ ಟೀಮ್, 2 ವಿಕೆಟ್​ಗೆ 237 ರನ್​ಗಳನ್ನು ಗಳಿಸಿದೆ. ಟಾಮ್ ಹೈನ್ಸ್ 103 ರನ್​ ಗಳಿಸಿದ್ದು ಇಂದಿಗೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment