/newsfirstlive-kannada/media/post_attachments/wp-content/uploads/2025/06/KWR_BANK.jpg)
ಉತ್ತರ ಕನ್ನಡ: ಶ್ರೀ ದುರ್ಗಾಮಾತಾ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ 56 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಗ್ರಾಹಕರು ಹಣ ಕೇಳಿದರೆ ಬ್ಯಾಂಕ್ನಲ್ಲಿ ಹಣವಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.
ಕಾರವಾರ ತಾಲೂಕಿನ ಸದಾಶಿವಗಡ ನಗರದಲ್ಲಿನ ಶ್ರೀ ದುರ್ಗಾಮಾತಾ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ ಜಿಲ್ಲೆಯಾದ್ಯಂತ 12 ಶಾಖೆಗಳನ್ನ ಹೊಂದಿದೆ. ಹೀಗಾಗಿ ಸುಮಾರು 600 ಗ್ರಾಹಕರು ನಂಬಿಕೆಯ ಮೇಲೆಯೇ ಬ್ಯಾಂಕ್ನಲ್ಲಿ ಹಣವನ್ನ ಹೂಡಿಕೆ ಮಾಡಿದ್ದರು. ಈಗ ಗ್ರಾಹಕರು ತಮ್ಮ ಹಣವನ್ನು ವಾಪಸ್ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಇದಕ್ಕೆ ಬ್ಯಾಂಕ್ ಸಿಬ್ಬಂದಿ ಹಣವಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಹಣ ಕಳೆದುಕೊಂಡ ಗ್ರಾಹಕರು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ:RCB ಬೌಲರ್ ವಿರುದ್ಧ ಸಿಎಂಗೆ ದೂರು.. ಒಬ್ರಲ್ಲ, ಇಬ್ರಲ್ಲ ಹಲವು ಯುವತಿಯರಿಗೆ ವಂಚಿಸಿದ್ರಾ ಯಶ್ ದಯಾಳ್?
ಏಪ್ರಿಲ್ 30ರೊಳಗೆ ಎಲ್ಲರಿಗೂ ಹಣ ನೀಡುತ್ತೇನೆ ಎಂದು ಗ್ರಾಹಕರಿಗೆ ಬ್ಯಾಂಕಿನ ಎಂಡಿ ಲಿಂಗರಾಜ್ ಕಲ್ಗುಟ್ಕರ್ ಹೇಳಿದ್ದರು. ಈ ದಿನ ಮುಗಿದೇ ಹೋದರೂ ಹಣ ನೀಡಲಿಲ್ಲ. ಹೀಗಾಗಿ ಇದಾದ ಬಳಿಕ ಜೂನ್ 25ರಂದು ಗ್ರಾಹಕರಿಗೆ ದುಡ್ಡು ಕೊಡುವುದಾಗಿ ಹೇಳಿದ್ದರು. ಈಗ ಜೂನ್ 25 ಮುಗಿದು 4 ದಿನ ಕಳೆಯುತ್ತ ಬಂದರೂ ಎಂಡಿ ಲಿಂಗರಾಜ್ ಕಲ್ಗುಟ್ಕರ್ ನಾಪತ್ತೆ ಆಗಿದ್ದಾರೆ. ಈ ಕುರಿತು ಬ್ಯಾಂಕ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರನ್ನು ಕೇಳಿದರೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಚಿತ್ತಾಕುಲ ಠಾಣೆಯಲ್ಲಿ ಗ್ರಾಹಕರು ದೂರು ದಾಖಲು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ