Advertisment

ಕಾರವಾರದ ಮುದಗಾ ಬಂದರಿನಲ್ಲಿ ಹೂಳಿನ ಸಮಸ್ಯೆ..ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ಮೀನುಗಾರರು!

author-image
Gopal Kulkarni
Updated On
ಕಾರವಾರದ ಮುದಗಾ ಬಂದರಿನಲ್ಲಿ ಹೂಳಿನ ಸಮಸ್ಯೆ..ಸಾಕಷ್ಟು ಸಂಕಷ್ಟ ಎದುರಿಸುತ್ತಿರುವ ಮೀನುಗಾರರು!
Advertisment
  • ಹೂಳಿನಿಂದ ತುಂಬಿರುವ ಕರಾವಳಿ ಬಂದರುಗಳಿಂದ ಮೀನುಗಾರರಿಗೆ ಸಂಕಷ್ಟ
  • 25 ವರ್ಷಗಳ ಹಿಂದೆ ನಿರಾಶ್ರೀತ ಮೀನುಗಾರರಿಗೆ ನಿರ್ಮಿಸಿದ್ದ ಸೀಬರ್ಡ್ ಬಂದರು
  • ಹೂಳಿನ ಸಮಸ್ಯೆಯಿಂದಾಗಿ ಬೂಟುಗಳಿಗೆ ಆಗುತ್ತಿವೆ ಅನೇಕ ರೀತಿಯ ಹಾನಿಗಳು

ಕರಾವಳಿಯ ಬಂದರು ಪ್ರದೇಶಗಳಲ್ಲಿ ತುಂಬಿದ ಹೂಳಿನಿಂದಾಗಿ ಮೀನುಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರದ ನೌಕಾನೆಲೆ ನಿರಾಶ್ರಿತರ ಮುದಗಾ ಬಂದರಿನಲ್ಲಿ ವ್ಯಾಪಕ ಪ್ರಮಾಣದ ಹೂಳು ತುಂಬಿ ಯಾಂತ್ರಿಕ ದೋಣಿ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರೀ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಸ್ಟೋರಿ ಇಲ್ಲಿದೆ ನೋಡಿ.

Advertisment

ಹೂಳಿನಿಂದಾಗಿ ಯಂತ್ರಿಕ ಮೀನುಗಾರಿಕೆಗೆ ಸಂಕಷ್ಟ
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮುದಗಾ ಬಂದರಿನಲ್ಲಿ ಹೂಳಿನಿಂದಾಗಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.. ಕಳೆದ 25 ವರ್ಷಗಳ ಹಿಂದೆ ಸೀಬರ್ಡ್ ನಿರಾಶ್ರಿತ ಮೀನುಗಾರರಿಗಾಗಿ ಈ ಬಂದರನ್ನ ನಿರ್ಮಿಸಿತ್ತು. ಆರಂಭದಲ್ಲಿ ಬೋಟುಗಳ ಸಂಖ್ಯೆ ಕಡಿಮೆಯಿತ್ತು. ಈಗ ಕಾರವಾರದ ಜೊತೆಗೆ ಅಂಕೋಲಾ ತಾಲೂಕಿನ ಕೇಣಿ, ಬೆಳಂಬಾರ, ಬೇಲೆಕೇರಿ ಸೇರಿದಂತೆ ಇತರ ಭಾಗಗಳ ಯಾಂತ್ರಿಕ ದೋಣಿಗಳು ಇಲ್ಲಿ ವ್ಯವಹಾರ ನಡೆಸುತ್ತಿವೆ. ಆದ್ರೆ ಸಮಸ್ಯೆ ಏನೆಂದ್ರೆ ಬಂದರಿನ ಸಮೀಪ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದ್ದು, ಮೀನುಗಾರಿಕೆಗೆ ಪೆಟ್ಟು ನೀಡಿದೆ.

ಇದನ್ನೂ ಓದಿ:ಹುಡುಗರು ಸಿನಿಮಾದಲ್ಲಿ ತಂಗಿ ಪಾತ್ರದಲ್ಲಿ ನಟಿಸಿದ್ದ ಅಭಿನಯ ನಿಶ್ಚಿತಾರ್ಥ.. ಹುಡುಗ ಯಾರು?

publive-image

ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿರೋದ್ರಿಂದ ದೋಣಿಗಳು ಬಂದರಿಗೆ ಆಗಮಿಸಲು ಮತ್ತು ನಿರ್ಗಮಿಸಲು ತೊಂದರೆಯಾಗುತ್ತಿದೆ. ನೀರಿನ ಲೋ ಟೈಡ್ ಸಂದರ್ಭದಲ್ಲಿ ಬೋಟುಗಳು ಕೆಳಕ್ಕೆ ತಾಗಿ ಹಾನಿಗೊಳಗಾಗ್ತಿವೆ. ಇದಷ್ಟೇ ಅಲ್ಲ, ಹೂಳಿನ ಸಮಸ್ಯೆಯಿಂದ ಐದಾರು ತಾಸುಗಳ ಕಾಲ ಸಮುದ್ರದಲ್ಲಿ ಲಂಗರು ಹಾಕಿ ನಿಲ್ಲಿಸುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ರೂ ಪ್ರಯೋಜನ ಆಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

Advertisment

ಇದನ್ನೂ ಓದಿ:ಜನನ, ಮರಣ ಪ್ರಮಾಣ ಪತ್ರಕ್ಕೂ ತಟ್ಟಿದ ಬೆಲೆ ಏರಿಕೆಯ ಬಿಸಿ.. ಸರ್ಟಿಫಿಕೆಟ್​ ಕೊಡಲು ಎಷ್ಟು ಹಣ ಪೀಕಲಾಗುತ್ತಿದೆ?

publive-image

ಒಂದು ಕಡೆ ಮತ್ಸ್ಯಕ್ಷಾಮದಿಂದ ಕಂಗಾಲಾಗಿರುವ ಮೀನುಗಾರರಿಗೆ ಬಂದರು ಪ್ರದೇಶದಲ್ಲಿ ಹೂಳು ತುಂಬಿ ಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಸರ್ಕಾರ ಮುದಗಾ ಬಂದರಿನಲ್ಲಿ ತುಂಬಿರುವ ಹೂಳನ್ನ ತೆರವು ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು.. ಇದರ ಜೊತೆಗೆ ಬಂದರಿನ ಜಟ್ಟಿ ಸಹ ಚಿಕ್ಕದಾಗಿದ್ದು, ಇದನ್ನು ಮತ್ತೆ ಇನ್ನೂರು ಮೀಟರನಷ್ಟು ವಿಸ್ತರಣೆ ಮಾಡಬೇಕೆಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ. ಮುದಗಾ ಬಂದರಿನ ಪರಿಸ್ಥಿತಿಯನ್ನ ಅರಿತು ಸರ್ಕಾರ ತುರ್ತಾಗಿ ಹೂಳು ತೆಗೆಯುವ ಕೆಲಸ ಮಾಡಿಸಬೇಕಾಗಿದೆ. ಇಲ್ಲದಿದ್ದಲ್ಲಿ ಮೀನುಗಾರರು ಮತ್ತಷ್ಟು ಸಂಕಷ್ಟ ಸಿಲುಕೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment