Advertisment

12 ದಿನ ಕಳೆದರೂ ಪತ್ತೆ ಆಗಲೇ ಇಲ್ಲ.. ಪ್ರಯತ್ನ ಕೈಬಿಡುವ ಮಾತಾಡಿದ ಅಧಿಕಾರಿಗಳು..!

author-image
Ganesh
Updated On
ಶಿರೂರು: 14 ದಿನವಾದರೂ ಅರ್ಜುನ್​ ಸುಳಿವಿಲ್ಲ.. ಜಿಲ್ಲಾಡಳಿತದ ಮುಂದಿನ ನಡೆಯೇನು?
Advertisment
  • ಇಂದು ಶಿರೂರು ಗುಡ್ಡಕುಸಿತ ಕಾರ್ಯಾಚರಣೆ ಮುಕ್ತಾಯ
  • ಇದು ಕೊನೆಯ ಪ್ರಯತ್ನ ಎಂದ ಎಸ್‌ಪಿ ನಾರಾಯಣ್
  • 20 ಮೀಟರ್ ದೂರದಲ್ಲಿ ಲಾರಿ ಮಾದರಿಯ ಮೆಟಲ್ ಪತ್ತೆ?

ಉತ್ತರ ಕನ್ನಡ ಗುಡ್ಡ ಕುಸಿತದ ದುರಂತಕ್ಕೆ 11ಕ್ಕೂ ಅಧಿಕ ಮಂದಿ ಪ್ರಾಣ ಚೆಲ್ಲಿದ್ದಾರೆ. ಅದರಲ್ಲಿ ಹಲವರು ನಾಪತ್ತೆಯಾಗಿದ್ದಾರೆ. ಕಳೆದ 12 ದಿನಗಳಿಂದ ಶೋಧಕಾರ್ಯ ನಡೆಸುತ್ತಿದ್ರೂ ಲಾರಿಯಾಗಲಿ ಅದರ ಚಾಲಕನ ಮೃತದೇಹವಾಗಲಿ ಸಿಕ್ಕಿಲ್ಲ. ಹೀಗಾಗಿ ಇಂದು ಕೊನೆಯ ಪ್ರಯತ್ನ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

Advertisment

ಇಂದು ಶಿರೂರು ಗುಡ್ಡಕುಸಿತ ಕಾರ್ಯಾಚರಣೆ ಮುಕ್ತಾಯ
ಗುಡ್ಡ ಕುಸಿತದಲ್ಲಿ ಕೇರಳದ ಲಾರಿ ಚಾಲಕ ಅರ್ಜುನ್‌ ಪತ್ತೆಗಾಗಿ ತೀವ್ರ ಶೋಧ ನಡೆಯುತ್ತಲೇ ಇದೆ. ನಿನ್ನೆ ಎರಡು ಪೋಕ್‌ಲೈನ್‌ಗಳು ಹುಡುಕಾಟ ನಡೆಸಿದ್ರೂ ಮೇಲೆತ್ತುವಲ್ಲಿ ವಿಫಲವಾಗಿವೆ. ಗೋಕಾಕ್‌ನಿಂದ ಬಂದಿದ್ದ ಪೋಕ್‌ ಲೈನ್‌ ವಾಪಸ್ ತೆರಳಿದೆ. ಅಲ್ಲದೇ ಗಂಗಾವಳಿ ನದಿಯಲ್ಲಿ ನೀರಿನ ವೇಗ ಹೆಚ್ಚಾಗಿದ್ದು, ನೌಕಾದಳದ ಮುಳುಗು ತಜ್ಞರು ನೀರಿಗೆ ಇಳಿಯಲು ಹಿಂದೇಟು ಹಾಕಿದ್ದಾರೆ. ಬಳಿಕ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಎಂಟ್ರಿ ಕೊಟ್ಟಿದ್ದಾರೆ. ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದಾಗ ಸುಮಾರು 5 ಮೀಟರ್ ಆಳ, 20 ಮೀಟರ್ ದೂರದಲ್ಲಿ ಲಾರಿ ಮಾದರಿಯ ಮೆಟಲ್ ಇರೋದು ತಿಳಿದುಬಂದಿದೆ. ಹೀಗಾಗಿ ಇಂದು ಕೊನೆಯ ಬಾರಿಗೆ ಕಾರ್ಯಾಚರಣೆ ನಡೆಸಲಾಗುತ್ತದೆ.

ಇದನ್ನೂ ಓದಿ:ಸ್ಟಾರ್​ ಬೌಲರ್ಸ್ ನಾಚುವಂತೆ ಬೌಲಿಂಗ್.. ಕೇವಲ 14 ಬಾಲ್​​ನಲ್ಲಿ ಲಂಕಾ ಪಡೆಯ ಬೆನ್ನೆಲುಬು ಮುರಿದ ಪರಾಗ್..!

publive-image

ಸೇನೆ ಹಾಗೂ ದೆಹಲಿ ತಂಡ ನೀಡಿದ್ದ 4ರ ಪೈಕಿ 3 ಜಾಗದಲ್ಲಿ ಶೋಧಕಾರ್ಯ ನಡೆಸಲಾಗಿದ್ದು ಈ ವೇಳೆ ಕಲ್ಲು, ಮಣ್ಣು, ಮರದ ತುಂಡು ಪತ್ತೆಯಾಗಿದೆ. ಗಂಗಾವಳಿ ನದಿಯಲ್ಲಿ ಈವರೆಗಿನ ಪರಿಶೀಲನೆಯಲ್ಲಿ ಯಾವುದೇ ಮೆಟಲ್ ಪತ್ತೆಯಾಗಿಲ್ಲ. ಇಂದು ಉಳಿದ ಒಂದು ಪ್ರದೇಶದ ಪರಿಶೀಲನೆ ನಡೆಯಲಿದೆ. ಈ ವೇಳೆ ತಜ್ಞರು ಹೇಳುವ ವಿಚಾರದ ಆಧಾರದ ಮೇಲೆ ಮುಂದಿನ ನಡೆ ತೀರ್ಮಾನಿಸಲಾಗುತ್ತದೆ. ಇದು ನಮ್ಮ ಕೊನೆಯ ಪ್ರಯತ್ನ ಅಂತ ಉತ್ತರ ಕನ್ನಡ ಎಸ್‌ಪಿ ನಾರಾಯಣ್ ಕಳೆದ ರಾತ್ರಿ ಹೇಳಿದ್ದಾರೆ.

Advertisment

ಒಟ್ಟಾರೆ ಉತ್ತರ ಕನ್ನಡ ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಕೇರಳದ ಲಾರಿ ಚಾಲಕ ಅರ್ಜುನ್‌ಗಾಗಿ ಇಂದು ಕೊನೆಯದಾಗಿ ಪ್ರಯತ್ನ ನಡೆಸಲಾಗುತ್ತೆ. 4ನೇ ಪಾಯಿಂಟ್​ನಲ್ಲಾದ್ರೂ ಮೃತದೇಹ ಸಿಕ್ರೆ ಅವರ ಕುಟುಂಬಕ್ಕೆ ಕೊನೆಯ ದರ್ಶನವಾದ್ರೂ ಸಿಕ್ಕಂತಾಗುತ್ತದೆ.

ಇದನ್ನೂ ಓದಿ:ಬೂಮ್ರಾಗೆ ಬಿಗ್ ಶಾಕ್.. ಟೆಸ್ಟ್​ ತಂಡದ ಉಪನಾಯಕನ ಪಟ್ಟದಿಂದ ಕೊಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment