/newsfirstlive-kannada/media/post_attachments/wp-content/uploads/2025/03/FIRST-TRAIN-TO-KASHMIR-1.jpg)
ಕಾಶ್ಮೀರ ಕಣಿವೆಯ ಜನರ ಹಲವು ದಶಕಗಳ ಕಾಯುವಿಕೆ ಇನ್ನೇನು ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿವೆ. ಕಾಶ್ಮೀರದ ಕಣಿವೆಯಲ್ಲಿ ಮೊದಲ ಬಾರಿ ರೈಲು ಬಂಡಿ ಓಡುವ ಕಾಲ ಸನ್ನಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಟ್ರಾ ದಿಂದ ಶ್ರೀನಗರದವರೆಗೆ ಪ್ರಯಾಣಿಸಲಿರುವ ಕಾಶ್ಮೀರದ ಮೊದಲ ರೈಲಿಗೆ ಬಾವುಟ ಬೀಸಿ ಉದ್ಘಾಟನೆ ಮಾಡಲಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ ಅಂದು ಕಟ್ರಾದಿಂದ ಶ್ರೀನಗರದವರೆಗೂ ವಂದೇ ಭಾರತ್ ರೈಲು ಓಡಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಬಾವುಟ ಬೀಸಿ ರೈಲು ಉದ್ಘಾಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಎತ್ತರದ ಚೀನಾಬ್ ಸೇತುವೆಗೆ ಭೇಟಿ ನೀಡಿ ಸಾರ್ವಜನಿಕ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಜೊತೆಗೆ ರೈಲ್ವೆ ಸಚಿವರಾಗಿರುವ ಅಶ್ವಿನಿ ವೈಷ್ಣವ್, ಸಚಿವ ಜಿತೇಂದ್ರ ಸಿಂಗ್ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ. ಸೇರಿ ಹಲವರು ಭಾಗಿಯಾಗಿಲಿದ್ದಾರೆ.
ಇದನ್ನೂ ಓದಿ: ಇದು ಭಾರತದ ಅತ್ಯಂತ ಸುದೀರ್ಘವಾಗಿ ಚಲಿಸುವ ನಾನ್ಸ್ಟಾಪ್ ಟ್ರೈನ್.. 500 ಕಿಮೀ ತಡೆರಹಿತವಾಗಿ ಓಡುತ್ತದೆ
ಆರಂಭದಲ್ಲಿ ಕಾಶ್ಮೀರದ ಮೊದಲ ರೈಲು ಕಟ್ರಾ ಶ್ರೀನಗರ ಮತ್ತು ಬಾರಾಮುಲ್ಲಾ ನಡುವೆ ಆಗಸ್ಟ್ರಂದು ಸಂಚರಿಸಲಿದೆ ಎಂದು ಹೇಳಲಾಗಿದೆ. ಸದ್ಯ ಜಮ್ಮು ರೈಲ್ವೆ ನಿಲ್ದಾಣದವರೆಗೂ ರೈಲು ಮಾರ್ಗದ ವಿಸ್ತರಣಾ ಕಾರ್ಯ ನಡೆಯುತ್ತಿದೆ. ಒಂದು ಸಂಪೂರ್ಣಗೊಂಡ ಬಳಿಕ ಜಮ್ಮುವಿನಿಂದ ಶ್ರೀನಗರ ಮತ್ತು ಬಾರಾಮುಲ್ಲಾದವರೆಗೂ ರೈಲು ಪ್ರಯಾಣ ಮಾಡುವ ಅವಕಾಶ ಅಲ್ಲಿಯ ಜನರಿಗೆ ಸಿಗಲಿದೆ. ಇನ್ನು ಇಲ್ಲಿಯವರೆಗೂ ದೆಹಲಿಯಿಂದ ಶ್ರೀನಗರಕ್ಕೆ ಯಾವುದೇ ರೈಲು ಮಾರ್ಗದ ವ್ಯವಸ್ಥೆ ಇಲ್ಲ
ಇದನ್ನೂ ಓದಿ:Saugat-e-Modi: ದೇಶದ 32 ಲಕ್ಷ ಬಡ ಮುಸ್ಲಿಮರ ಕುಟುಂಬಗಳಿಗೆ ಮೋದಿ ರಂಜಾನ್ ಕಿಟ್..!
ಈಗ ಚೀನಾಬ್ ಸೇತುವೆಯಿಂದಾಗಿ ದೇಶದ ಉಳಿದ ಭಾಗದ ಜೊತೆಗೆ ಶ್ರೀನಗರಕ್ಕೆ ರೈಲು ಸಂಪರ್ಕ ಮಾರ್ಗ ಕಲ್ಪಿಸಲು ಸಾಧ್ಯವಾಗಿದೆ. ಇನ್ನು ಚೀನಾಬ್ ರೈಲು ಸೇತುವೆಯನ್ನು ಭಾರತದ ಇಂಜನಿಯರಿಂಗ್ ಅದ್ಭುತ ಎಂದೇ ಕರೆಯಲಾಗುತ್ತದೆ. ಇಷ್ಟು ವರ್ಷ ಭಾರತದ ಮುಕುಟಮಣಿ ಕಾಶ್ಮೀರಕ್ಕೆ ದೆಹಲಿಯಿಂದ ನೇರ ರೈಲು ಮಾರ್ಗವೇ ಇರಲಿಲ್ಲ. ಆದರೆ ಮುಂದಿನ ತಿಂಗಳು ಅಂದ್ರೆ ಏಪ್ರಿಲ್ 19 ರಂದು ಪ್ರಧಾನಿ ನರೇಂದ್ರ ಮೋದಿ ಕಟ್ರಾದಿಂದ ಶ್ರೀನಗರಕ್ಕೆ ನೇರ ರೈಲು ಮಾರ್ಗ ಉದ್ಘಾಟನೆ ಮಾಡಲಿದ್ದು. ವಿಶೇಷ ವಂದೇ ಭಾರತ್ ರೈಲು ಅಂದು ಕಟ್ರಾದಿಂದ ಶ್ರೀನಗರಕ್ಕೆ ಓಡಲಿದೆ. ಈ ಮೂಲಕ ದೇಶದ ಉಳಿದ ಭಾಗದ ಜೊತೆಗೆ ಶ್ರೀನಗರಕ್ಕೆ ರೈಲು ಸಂಪರ್ಕ ಕಲ್ಪಿಸುವ ಗುರಿಯನ್ನು ಕೊನೆಗೂ ಮುಟ್ಟಲಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ