ಪಹಲ್ಗಾಮ್‌ ದಾಳಿಗೂ ಮುನ್ನ ‘ಪ್ರೇಮ’ ಕಾಶ್ಮೀರ.. ಈಗ ಯಾವ ದುಸ್ಥಿತಿಗೆ ಬಂದಿದೆ ಗೊತ್ತಾ?

author-image
admin
Updated On
ಪಹಲ್ಗಾಮ್‌ ದಾಳಿಗೂ ಮುನ್ನ ‘ಪ್ರೇಮ’ ಕಾಶ್ಮೀರ.. ಈಗ ಯಾವ ದುಸ್ಥಿತಿಗೆ ಬಂದಿದೆ ಗೊತ್ತಾ?
Advertisment
  • ಜಮ್ಮು ಆರ್ಥಿಕತೆಯಲ್ಲಿ ಪ್ರವಾಸೋದ್ಯಮಕ್ಕೆ ಬಹಳ ಪ್ರಮುಖವಾದ ಸ್ಥಾನ
  • ಕಣಿವೆ ರಾಜ್ಯದಲ್ಲಿ ಈಗ ಪಾಕಿಸ್ತಾನ ಉಗ್ರರ ದಾಳಿಗೆ ಪ್ರತೀಕಾರದ ಕಿಚ್ಚು!
  • ಕಾಶ್ಮೀರದ ವಿಶ್ವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಅಭದ್ರತೆಯ ಕರಿನೆರಳು

ಕಳೆದ ಏಪ್ರಿಲ್ 22 ಮಂಗಳವಾರ. ಈ ದಿನ ಅಕ್ಷರಶಃ ಭಾರತೀಯರ ಪಾಲಿಗೆ ಕರಾಳ ದಿನ. ಖುಷ್ ಖುಷಿಯಿಂದ ಕಾಲ ಕಳೆಯೋಣ, ಒಂದೆರೆಡು ದಿನ ರಿಲ್ಯಾಕ್ಸ್ ಮಾಡೋಣ ಅಂತ ಕಾಶ್ಮೀರಕ್ಕೆ ಬಂದಿದ್ದ ಪ್ರವಾಸಿಗರನ್ನ ದುಷ್ಟ ಉಗ್ರರು, ಕರ್ನಾಟಕದ ಮೂವರನ್ನು ಸೇರಿಕೊಂಡು 27 ಜನರನ್ನ ಗುಂಡಿಟ್ಟು ಕೊಂದಿದ್ದಾರೆ.

ಪಾಕಿಸ್ತಾನ ಉಗ್ರರ ಈ ಕೃತ್ಯಕ್ಕೆ ಪ್ರತಿಯೊಬ್ಬ ಭಾರತೀಯನು ಪ್ರತೀಕಾರದ ಮಾತುಗಳನ್ನ ಆಡುತ್ತಿದ್ದಾನೆ. ಹೇಗಾದ್ರೂ ಮಾಡಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇಬೇಕು ಅನ್ನೋ ಒತ್ತಾಯದ ಒತ್ತಡ ಕೇಂದ್ರ ಸರ್ಕಾರಕ್ಕೆ ಹಾಕಲಾಗ್ತಿದೆ. ಊಹಿಸೋಕೆ ಆಗದೇ ಇರೋ ರೀತಿ, ಹುಡುಕಿ ಹುಡುಕಿ ಹೊಡೆದಾಕ್ತೀವಿ ಅನ್ನೋ ಪ್ರಧಾನಿ ನರೇಂದ್ರ ಮೋದಿ ಅವರ ಮಾತು, ಆದಷ್ಟೂ ಬೇಗ ವಾಸ್ತವಕ್ಕೆ ಬರಲಿ ಅನ್ನೋ ಮಾತು ಶುರುವಾಗಿದೆ.

publive-image

ಇದೆಲ್ಲದರ ನಡುವೆ, ಸಮ್ಮರ್ ಹಾಲಿಡೇಸ್, ಕಾಶ್ಮೀರದ ಮಂಜಲ್ಲಿ ತೇಲಾಡೋಣ ಅಂತ ಪ್ರವಾಸಿಗರು ಬರ್ತಾರೆ ಅನ್ನೋ ಕಾರಣಕ್ಕೆ ಎಲ್ಲಾ ಹೌಸ್‌ಬೋಟ್‌ಗಳು, ಹೋಂ ಸ್ಟೇಗಳು, ಗೆಸ್ಟ್ ಹೌಸ್​​, ಹೋಟೆಲ್‌ಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಜೊತೆಗೆ ಸಂಪೂರ್ಣವಾಗಿ ಬುಕ್ ಕೂಡ ಆಗಿದವು. ಆದ್ರೆ ಉಗ್ರರ ಅಟ್ಟಹಾಸದಿಂದ ಅತ್ಯಂತ ಸುಂದರ ಹಾಗೂ ವಿಶ್ವ ಪ್ರಸಿದ್ಧ ತಾಣಗಳಲ್ಲಿ ಒಂದಾಗಿರೋ ಕಾಶ್ಮೀರಕ್ಕೆ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಕರಿ ನೆರಳು ಬಿದ್ದೋಗಿದೆ.

ಸದ್ಯ ಊಹಿಸೋಕೆ ಆಗದೇ ಇರೋ ರೀತಿ ಪ್ರವಾಸಿಗರು ಬಾರದ ಲೋಕಕ್ಕೆ ಹೋಗಿದ್ದಾರೆ. ತಲೆ ಒಡೆದುರುಳಿಸೋ ಆ ದುಷ್ಟರ ಸಂಹಾರ ಆಗಬೇಕು ಅನ್ನೋದು ಸದ್ದಾಗ್ತಿದೆ. ಇನ್ನೊಂದು ಕಡೆ, ಪ್ರವಾಸೋದ್ಯಮದ ಆದಾಯದಿಂದಲೇ ಕಾಶ್ಮೀರದಲ್ಲಿ ವಾಸ ಮಾಡೋ ಅದೆಷ್ಟೋ ಜನರು, ಕುಟುಂಬಗಳು ಬೀದಿಗೆ ಬೀಳ್ತಿದೆ. ಜಮ್ಮು ಹಾಗೂ ಕಾಶ್ಮೀರದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮಕ್ಕೆ ಬಹಳ ಅಂದ್ರೆ ಬಹಳ ನಿರ್ಣಾಯಕ ಪಾತ್ರ ವಹಿಸುತ್ತೆ. ಕೇಂದ್ರಾಡಳಿತ ಪ್ರದೇಶದ GDPಗೆ 8.47% ಕೊಡುಗೆ ಕೊಡುತ್ತೆ. ಆದ್ರೆ ಉಗ್ರರ ದಾಳಿಯಿಂದ ಎಲ್ಲವೂ ತಲೆಕೆಳಗೆ ಮಾಡಿಸಿಬಿಟ್ಟಿದೆ.

publive-image

ದಾಳಿಗೂ ಮುಂಚೆ, ಕಾಶ್ಮೀರದ ಪ್ರವಾಸೋದ್ಯಮದ ಡೇಟಾ ಪ್ರಕಾರ, ಮಾರ್ಚ್ 26ನೇ ತಾರೀಖಿನಿಂದ 26 ದಿನಗಳ ಕಾಲ, ಶ್ರೀನಗರದ ಟುಲಿಪ್ ಉದ್ಯಾನವನಕ್ಕೆ 8.14 ಲಕ್ಷ ಪ್ರವಾಸಿಗರು ಬಂದಿದ್ರು ಅಂತ ವರದಿಯಾಗಿದೆ. 2023ರಲ್ಲಿ 37 ಸಾವಿರ, 2024ರಲ್ಲಿ 43 ಸಾವಿರ ವಿದೇಶಿ ಪ್ರವಾಸಿಗರನ್ನು ಅಟ್ರ್ಯಾಕ್ಟ್ ಮಾಡಿತ್ತು. ಆದರೆ ಈಗ, ಸಂಪೂರ್ಣವಾಗಿ ಕಾಶ್ಮೀರ ಸೂತಕದ ವಾತಾವರಣ ಸೃಷ್ಟಿ ಮಾಡಿಬಿಟ್ಟಿದೆ.

ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಪ್ರಾಣ ಪಣಕ್ಕಿಟ್ಟು ಮಗು ರಕ್ಷಿಸಿದ ಟೂರಿಸ್ಟ್ ಗೈಡ್.. ಇದು ಮನಮಿಡಿಯುವ ಸ್ಟೋರಿ! 

ಕೋವಿಡ್ ಸಂಕಷ್ಟ ಆದ್ಮೇಲೆ, ಕಾಶ್ಮೀರಕ್ಕೆ ಪ್ರವಾಸಿಗರನ್ನ ಮತ್ತೆ ಅಟ್ರ್ಯಾಕ್ಟ್ ಮಾಡೋಕೆ ಸಾಕಷ್ಟೂ ಪ್ರಯತ್ನ ಮಾಡಲಾಗಿತ್ತು. ಇದ್ರ ಜೊತೆಗೆ, 2019ರಲ್ಲಿ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನದ 370ನೇ ವಿಧಿಯಿಂದ ರದ್ದುಗೊಳಿಸಿದ್ದ ಎಫೆಕ್ಟ್ ಕೂಡ ಕಾಶ್ಮೀರಕ್ಕೆ ಕರಿನೆರಳು ಬಿದ್ದಿತ್ತು. ಹೆಚ್ಚಿನ ಭದ್ರತೆ ಕೊಟ್ಟಾದ್ಮೇಲೆ ಹಾಗೂ ಹೀಗೂ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಾ ಹೋಯ್ತು.

publive-image

ಆದ್ರೆ ಈಗ, ಮುಗ್ಧ ಮನಸ್ಸುಗಳ ಮೇಲೆ ಉಗ್ರರ ದಾಳಿಯಿಂದ ಕಾಶ್ಮೀರಕ್ಕೆ ಹೋಗೋದು ಬೇಡ ಅಂತ ಅದೆಷ್ಟೋ ಪ್ರವಾಸಿಗರಲ್ಲಿ ಭಾವನೆಗಳು ವ್ಯಕ್ತವಾಗ್ತಿದೆ. ಮಂಜಿನ ಹನಿಗಳಲ್ಲಿ ಕಾಲ ಕಳೆಯಬೇಕಿದ್ದ ಪ್ರವಾಸಿಗರು, ಭಯದಿಂದ ಕಾಶ್ಮೀರದ ಸಹವಾಸವೇ ಬೇಡ ಅಂತ ತೀರ್ಮಾನ ಮಾಡ್ತಿದ್ದಾರೆ. ಇನ್ನೊಂದು ಕಡೆ, ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯೋ ಪವಿತ್ರ ಯಾತ್ರಾ ಸ್ಥಳವಾದ ಅಮರನಾಥ ಗುಹೆಗೆ ಹೋಗೋ ಎರಡು ಪ್ರಮುಖ ಮಾರ್ಗಗಳಲ್ಲಿ ಪಹಲ್ಗಾಮ್ ಕೂಡ ಒಂದು. ಈಗ ಈ ಅಮರನಾಥ ಯಾತ್ರೆ ಮಾಡೋದಕ್ಕಿಂತ ನಮ್ ಜೀವ ಮುಖ್ಯ ಅಂತ ಕಾಶ್ಮೀರದ ಕಡೆಗೆ ಗುಡ್​ಬೈ ಹೇಳ್ತಿದ್ದಾರೆ.

publive-image

ಪ್ರವಾಸೋದ್ಯಮಕ್ಕೆ ಇನ್ವೆಸ್ಟ್ ಮಾಡಿರೋರು, ವ್ಯಾಪಾರಸ್ಥರು, ಶಾಲೆಗಳು ಉಗ್ರರ ಹಿಂಸಾಚಾರ ಖಂಡಿಸಿ ಸ್ವಯಂಪ್ರೇರಿತವಾಗಿ ಸದ್ಯ ಬಂದ್​ ಮಾಡ್ತಿದ್ದಾರೆ. ಒಂದು ಹೊತ್ತು ಊಟ ಮಾಡಬೇಕಂದ್ರೂ ಪ್ರವಾಸೋದ್ಯಮವನ್ನೇ ನಂಬಿಕೊಂಡಿರೋ ವ್ಯಾಪಾರಸ್ಥರು, ಈಗ ನರಕ ಅನುಭವಿಸುತ್ತಾ ಇದ್ದಾರೆ. ಮೃತರಾದ ಅಮಾಯಕರಿಗೆ ನ್ಯಾಯ ಸಿಗಬೇಕು. ಸಂಕಷ್ಟದಲ್ಲಿರೋ ವ್ಯಾಪಾರಸ್ಥರಿಗೆ ಕಾಶ್ಮೀರ ಮತ್ತೆ ಸಹಜ ಸ್ಥಿತಿಗೆ ಬರಬೇಕು ಅನ್ನೋ ಭಾವನೆಯಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment