ಕಾಶ್ಮೀರ ಕೇಸರಿ ಈಗ ಸಿಕ್ಕಾಪಟ್ಟೆ ದುಬಾರಿ; 1 KG ಸಫ್ರಾನ್​ ಲಕ್ಷ ಲಕ್ಷ ರೂಪಾಯಿ

author-image
Veena Gangani
ಕಾಶ್ಮೀರ ಕೇಸರಿ ಈಗ ಸಿಕ್ಕಾಪಟ್ಟೆ ದುಬಾರಿ; 1 KG ಸಫ್ರಾನ್​ ಲಕ್ಷ ಲಕ್ಷ ರೂಪಾಯಿ
Advertisment
  • ಕೇಸರಿ, ಡ್ರೈಫ್ರೂಟ್ಸ್ ದರ ರಸೆಲ್ ಮಾರ್ಕೆಟ್​ನಲ್ಲಿ ಏಕಾಏಕಿ ಏರಿಕೆ
  • ಕಾಶ್ಮೀರದ ಒಂದು ಗ್ರಾಂ ಕೇಸರಿಗೆ ಎಷ್ಟು ರೂಪಾಯಿ ಕೊಡಬೇಕು?
  • ಕ್ಯಾನ್ಸರ್​ಗೆ ಔಷಧೀಯ ಗುಣಗಳನ್ನು ಹೊಂದಿರೋ ಕಾಶ್ಮೀರ ಕೇಸರಿ

ʻಆಪರೇಷನ್‌ ಸಿಂಧೂರʼ ಎಫೆಕ್ಟ್‌ ಬಳಿಕ ಭಾರತ ಹಾಗೂ ಪಾಕಿಸ್ತಾನ ಎರಡು ದೇಶಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ಆದ್ರೆ ಈಗ ಎರಡು ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಸಂಘರ್ಷ ಇರುವಾಗ ಕಾಶ್ಮೀರ ಕೃಷಿ ಭೂಮಿಗೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಇದು ಬೆಂಗಳೂರಿಗರಿಗೂ ಎಫೆಕ್ಟ್​ ಆಗಿತ್ತು. ಕೇಸರಿ ಅಂದ್ರೆ ಮೊದಲು ನೆನಪು ಆಗೋದು ಜಮ್ಮು ಕಾಶ್ಮೀರದಲ್ಲಿ ತಯಾರು ಆಗುವ ಕೇಸರಿ ಅಲ್ವಾ.

ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ?

publive-image

ಆದ್ರೆ ಕಾಶ್ಮೀರದಿಂದ ಬೆಂಗಳೂರಿಗೆ ರಫ್ತು ಆಗುವ ಕಾಶ್ಮೀರ ಕೇಸರಿ ಈಗ ಬಲು ದುಬಾರಿ ಆಗಿದೆ. ಕೆಜಿಗೆ ಒಂದೂವರೆ ಲಕ್ಷದಿಂದ 2 ಲಕ್ಷದಷ್ಟು ಹೆಚ್ಚಾಗಿದೆ. ಕೆಜಿ ಕೇಸರಿಯಲ್ಲಿ ಒಂದೂವರೆಯಿಂದ 2 ಲಕ್ಷ ರೂಪಾಯಿ ಏರಿಕೆ ಕಂಡು ಬಂದಿದೆ. ಕಾಶ್ಮೀರದಿಂದ ಬೆಂಗಳೂರಿನ ರಸೆಲ್ ಮಾರ್ಕೆಟ್ ಸೇರಿದಂತೆ, ನಗರದ ಹಲವು ಮಾರ್ಕೆರ್ಟ್​​ಗಳಿಗೆ ಬರ್ತಿದ್ದ ಕಾಶ್ಮೀರ ಕೇಸರಿ, ಈ ಹಿಂದೆ ಒಂದು ಗ್ರಾಂ ಕಾಶ್ಮೀರ ಕೇಸರಿಗೆ ₹250 ಇತ್ತು. ಇದೀಗ ಕಾಶ್ಮೀರ ಕೇಸರಿ ಒಂದು ಗ್ರಾಂಗೆ ₹450 ಆಗಿದೆ. ಕಾಶ್ಮೀರ ಕೇಸರಿ ಕ್ಯಾನ್ಸರ್​ಗೆ ಔಷಧೀಯ ಗುಣಗಳನ್ನು ಹೊಂದಿದೆ. ಕೇಸರಿ ಜೊತೆ ಡ್ರೈ ಫ್ರೂಟ್ಸ್ ದರ ಕೂಡ ಗಗನಕ್ಕೆ ಏರಿದೆ.

ಟ್ರರ್ಕ್​ನಲ್ಲಿ ಬರ್ತಿದ್ದ ಐಟಮ್ಸ್ ಇದೀಗ ಬ್ಯಾಗ್​ನಲ್ಲಿ ಬರ್ತಿದೆ. ಮುಂದಿನ ದಿನದಲ್ಲಿ ಕಾಶ್ಮೀರ ಕೇಸರಿ ಸಂಪೂರ್ಣ ಬಂದ್ ಆಗುವ ಭೀತಿ ಎದುರಾಗಿದೆ. ಕಾಶ್ಮೀರದಲ್ಲಿ ಕೃಷಿ ಚಟುವಟಿಕೆ ಕೂಡ ಸದ್ಯಕ್ಕೆ ಸ್ತಬ್ಧವಾಗಿದ್ದು, ಕೃಷಿ ಭೂಮಿಗೂ ರೆಡ್ ಅಲರ್ಟ್, ಬ್ಯಾರಿ ಕೇಡ್ ಹಾಕಿ ರೈತರು ಮುಚ್ಚಿಡುತ್ತಿದ್ದಾರೆ. ಬೆಂಗಳೂರಿನ ಮಾರ್ಕೆಟ್‌ಗಳಿಗೆ ಬೇಡಿಕೆಯಷ್ಟು ಪೂರೈಕೆಯಾಗದ ಕಾಶ್ಮೀರ ಕೇಸರಿ, ಡ್ರೈಫ್ರೂಟ್ಸ್, ರಸೆಲ್ ಮಾರ್ಕೆಟ್​ನಲ್ಲಿ ಏಕಾಏಕಿ ಹೆಚ್ಚಾಗಿದೆ. ಕಾಶ್ಮೀರಿ ಕೇಸರಿ ಬೆಲೆ ಕೇಳಿಯೇ ಗ್ರಾಹಕರು ಫುಲ್​ ಶಾಕ್ ಆಗಿದ್ದಾರೆ.

publive-image

ಕಾಶ್ಮೀರ ಕೇಸರಿ ವರ್ಷದಲ್ಲಿ ಒಮ್ಮೆ ಮಾತ್ರ ಹೂ ಬಿಡುತ್ತೆ. ಅದು ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ. ಬಳಿಕ ವಾರದಲ್ಲಿ ಹೂ ಖಾಲಿಯಾದರೆ ಮತ್ತೆ ಕೇಸರಿ ಹೂ ಬರುವುದು ಮುಂದಿನ ವರ್ಷಕ್ಕೆ. ಏಪ್ರಿಲ್ ತಿಂಗಳಲ್ಲಿ ಕೇಸರಿ ಗಡ್ಡೆಯನ್ನು ನಾಟಿ ಮಾಡಲಾಗುತ್ತದೆ. ಅದು ಸೆಪ್ಟೆಂಬರ್ ತಿಂಗಳಲ್ಲಿ ಮೊಳಕೆ ಬಿಡಲು ಶುರು ಮಾಡಿ, ಅಕ್ಟೋಬರ್ -ನವೆಂಬರ್ ತಿಂಗಳಲ್ಲಿ ಹೂ ಬಿಡುತ್ತೆ. ಈ ಹೂ ಬಿಡುವ ಸಮಯ ಅಂದರೆ ಎರಡು ಮೂರು ತಿಂಗಳು ಮಾತ್ರ ಈ ಕೋಲ್ಡ್ ಸ್ಟೋರೇಜ್ ಅವಶ್ಯಕತೆ ಇರುತ್ತೆ. ಹೂ ಬಿಟ್ಟಾಗ ಹೂವಿನಿಂದ ಶಲಾಕೆಯ ರೂಪದಲ್ಲಿ ಕೇಸರಿ ಹೊರಗಡೆ ಬರುತ್ತೆ.

publive-image

ಕಾಶ್ಮೀರ ಕೇಸರಿಯನ್ನು ಅಡುಗೆಗೆ ಮಾತ್ರವಲ್ಲದೇ ವೈದ್ಯಕೀಯ, ಸೌಂದರ್ಯವರ್ಧಕ ಇವುಗಳಲ್ಲಿ ಸಹ ಬಳಸಲಾಗುತ್ತದೆ. ಪಾನೀಯ, ಮಿಠಾಯಿ, ಡೈರಿ ಉತ್ಪನ್ನಗಳಲ್ಲಿ ಕೇಸರಿ ಇಲ್ಲ ಅಂದ್ರೆ ರುಚಿ ಬರಲ್ಲ. ಹೀಗಾಗಿ ಪ್ರತಿ ಅಡುಗೆ, ಸಿಹಿ ತಿನ್ನಿಸು ಮಾಡುವಾಗ ಕಾಶ್ಮೀರ ಕೇಸರಿಯನ್ನು ಬಳಕೆಯಾಗುತ್ತದೆ. ಕ್ಯಾನ್ಸರ್ ಕಾರಕ ಅಂಶ ಇರೋದರಿಂದ ವೈದ್ಯಕೀಯ ಲೋಕದಲ್ಲೂ ಸಹ ಇದನ್ನು ಬಳಕೆ ಮಾಡುತ್ತಾರೆ.

ಯಾವುದರ ದರ ಎಷ್ಟೆಷ್ಟು..?

ಜೇನು ತುಪ್ಪ 1KG ₹800, ಈಗ  ₹1400
ಶಿಲಾಜಿತ್ (10 grm) ₹700, ಈಗ ₹1400
ಆಪ್ರಿಕಾಟ್ ₹600, ಈಗ ₹1200
ವಾಲ್ನೆಟ್ ₹1200 ಈಗ ₹1800
ಕಾಶ್ಮೀರಿ ಗಾರ್ಲಿಕ್ ₹ 2000 ಈಗ ₹2800

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment