/newsfirstlive-kannada/media/post_attachments/wp-content/uploads/2024/09/tharun-sudhir6.jpg)
ಸ್ಯಾಂಡಲ್​ವುಡ್​ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ದಂಪತಿ ಹೊಸ ಹೊಸ ಕನಸುಗಳನ್ನು ಎಂಜಾಯ್ ಮಾಡ್ತಿದ್ದಾರೆ.
2024 ಆಗಸ್ಟ್​ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಅದ್ಧೂರಿಯಾಗಿ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಸಪ್ತಪದಿ ತುಳಿದಿತ್ತು. ಬೆನ್ನಲ್ಲೇ ಈ ಬ್ಯೂಟಿಫುಲ್ ಜೋಡಿ ಮತ್ತೊಮ್ಮೆ ವಿವಾಹವಾಗಿದ್ದಾರೆ.
ಆಗಸ್ಟ್​ 11ರಂದು ಹಿಂದೂ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ಮದುವೆಯಾಗಿದ್ದರು. ಈಗ ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ವಿವಾಹವಾಗಿದ್ದಾರೆ.
ಇದನ್ನೂ ಓದಿ: ತರುಣ್ ಸುಧೀರ್, ಸೋನಲ್ ಮೊಂತೆರೊ ಆರತಕ್ಷತೆ; ಯಾರೆಲ್ಲಾ ಸ್ಟಾರ್ ಬಂದ್ರು? ಫೋಟೋಗಳಲ್ಲಿ ನೋಡಿ!
ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ಉಂಗುರ ಬದಲಾಯಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಇದೇ ಫೋಟೋಸ್​ ನೋಡಿದ ಅಭಿಮಾನಿಗಳು ಸ್ಟಾರ್​ ಜೋಡಿಗೆ ಮತ್ತೊಮ್ಮೆ ಶುಭ ಹಾರೈಸುತ್ತಿದ್ದಾರೆ.
ನಟಿ ಸೋನಲ್ ಅವರು ಬಿಳಿ ಬಣ್ಣದ ಲಾಂಗ್​ ಗೌನ್​ನಲ್ಲಿ ಮಿಂಚಿದ್ದಾರೆ. ತರುಣ್ ಸುಧೀರ್ ವೈಟ್​ ಸೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೊಂದು ಫೋಟೋದಲ್ಲಿ ನವಜೋಡಿ ಲಕಲಕ ಅಂತ ಮಿಂಚಿದ್ದಾರೆ. ಮೊನ್ನೆಯಷ್ಟೇ ಇದಕ್ಕಾಗಿಯೇ ಸೋನಾಲ್ ತಮ್ಮ ನಿವಾಸದಲ್ಲಿ ರೋಸ್ ಸೆಲೆಬ್ರೆಷನ್ ಮಾಡಿದ್ದರು.
ಈ ಸೆಲೆಬ್ರೆಷನ್​​ಗೆ ಸೋನಾಲ್ ಅವರ ಸ್ನೇಹಿತರು, ಕುಟುಂಬಸ್ಥರು ಭಾಗಿಯಾಗಿದ್ದರು. ಸೆಲೆಬ್ರೆಷನ್​ನಲ್ಲಿ ನವವಧು ಸೋನಾಲ್ ಗೋಲ್ಡ್​ ಕಲರ್ ಡ್ರೆಸ್ ಧರಿಸಿ ಫಳಫಳ ಅಂತ ಹೊಳೆಯುತ್ತಿದ್ದರು. ಅಲ್ಲದೇ ಫೋಟೋಗೆ ಮಸ್ತ್​ ಮಸ್ತ್​ ಪೋಸ್​ಗಳನ್ನು ಕೊಟ್ಟಿದ್ದರು.
ಸದ್ಯ ಇದೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಚರ್ಚ್​ ವೆಡ್ಡಿಂಗ್ ಬಳಿಕ ಸ್ಟಾರ್​ ಜೋಡಿ ಮಂಗಳೂರಿನಲ್ಲಿ ಅದ್ಧೂರಿ ರೆಸೆಪ್ಷನ್ ಸಹ ಮಾಡಿಕೊಂಡಿದ್ದಾರೆ. ಈ ಅದ್ಧೂರಿ ರೆಸೆಪ್ಷನ್​ನ​ಲ್ಲಿಯೂ ತರುಣ್ ಸುಧೀರ್ ಬ್ರೌನ್ ಸೂಟ್ ಹಾಗೂ ನಟಿ ಸೋನಲ್ ಸೀರೆಯಲ್ಲಿ ಮಿಂಚಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ