newsfirstkannada.com

ಕಾಟೇರ ಸಕ್ಸಸ್​​.. ಕಲಾವಿದರಿಗೆ ಕಾರ್​ ಗಿಫ್ಟ್​ ಕೊಟ್ಟ ನಟ ದರ್ಶನ್​, ರಾಕ್​ಲೈನ್​ ವೆಂಕಟೇಶ್​​

Share :

Published May 3, 2024 at 6:05am

Update May 3, 2024 at 6:06am

  ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅಭಿನಯದ ಕಾಟೇರ ಸಿನಿಮಾ ಸೂಪರ್​ ಹಿಟ್​​

  ನಟ ದರ್ಶನ್ ಕರಿಯರ್​​ನಲ್ಲೇ ಅತ್ಯುತ್ತಮ ಸಿನಿಮಾ ಎಂದರೆ ಅದು ಕಾಟೇರ

  ಸುದ್ದಿಗೋಷ್ಠಿಯಲ್ಲಿ ರಾಕ್ ಲೈನ್ ವೆಂಕಟೇಶ್, ದರ್ಶನ್, ತರುಣ್ ಸುಧೀರ್ ಭಾಗಿ

ಚಾಲೆಂಜಿಂಗ್ ಸ್ಟಾರ್​ ದರ್ಶನ್ ಕರಿಯರ್​​ನಲ್ಲೇ ಅತ್ಯುತ್ತಮ ಸಿನಿಮಾ ಎಂದರೆ ಕಾಟೇರ. ಇತ್ತೀಚೆಗೆ ರಿಲೀಸ್​​ ಆದ ಕಾಟೇರ ಸಿನಿಮಾಗೆ ಫ್ಯಾನ್ಸ್​​ ಫುಲ್​ ಫಿದಾ ಆಗಿದ್ದರು. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಕಾಟೇರ ಬಾಕ್ಸಾಫೀಸ್​​ನಲ್ಲಿ ಧೂಳೆಬ್ಬಿಸಿದೆ.

ಇದನ್ನೂ ಓದಿ: ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ದರ್ಶನ್; ಕಾಟೇರ 1 ವಾರದ ಕಲೆಕ್ಷನ್​ ಕೇಳಿದ್ರೆ ಶಾಕ್​ ಆಗ್ತೀರಾ!

ಇದೀಗ ಕಾಟೇರ ಸಿನಿಮಾ 100 ದಿನಗಳನ್ನು ಪೂರೈಸಿದ ಖುಷಿಯಲ್ಲಿರೋ ಚಿತ್ರತಂಡ ದಿಢೀರ್​ ಸುದ್ದಿಗೋಷ್ಠಿ ನಡೆಸಲಾಗಿತ್ತು. ಈ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್, ಡೈಲಾಗ್ ರೈಟರ್ ಮಾಸ್ತಿ, ಕಥೆಗಾರ ಜಡೇಶ್ ಕೆ ಹಂಪಿ ಭಾಗಿಯಾಗಿದ್ದರು.

ಇದೇ ವೇಳೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್, ಕಾಟೇರಗೆ ದೊಡ್ಡ ಗೆಲುವು ಸಿಕ್ಕಿದೆ. ಕಾಟೇರ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದೆ. ಈ ಸಿನಿಮಾದ ಗೆಲುವಿಗೆ ಎಲ್ಲಾ ತಂತ್ರಜ್ಞರು ಕಾರಣ. ವರ್ಷದ ಬ್ಲಾಕ್ ಬಸ್ಟರ್ ಹಿಟ್ ಅನಿಸಿಕೊಂಡಿದೆ ನಮ್ಮ ಕಾಟೇರ. ಈ ವೇಳೆ ರಾಕ್ ಲೈನ್​ ವೆಂಕಟೇಶ್ ಅವರು ದರ್ಶನ್ ನೀನು ಮಾಡಿರೋದೆ ಸಾಕು ಅಂತಾ ದರ್ಶನ್ ಕಾಲೆಳೆದಿದ್ದಾರೆ.

ವಿಶೇಷ ಎಂದರೆ ಕಾಟೇರ ಸಿನಿಮಾ 100 ದಿನ ಪೂರೈಕೆ ಹಿನ್ನಲೆಯಲ್ಲಿ ಚಿತ್ರತಂಡದ ಕೆಲವರಿಗೆ ಭರ್ಜರಿ ಗಿಫ್ಟ್ ನೀಡಲಾಗಿದೆ. ಕಾಟೇರ ಚಿತ್ರಕಥೆ ಬರೆದ ಜಡೇಶ್ ಹಂಪಿ, ಸಂಭಾಷಣೆಗಾರ ಮಾಸ್ತಿ, ಹಾಗೂ ನಟ ಸೂರಜ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಾಟೇರ ಚಿತ್ರದಲ್ಲಿ ನಟಿಸಿದ್ದ ಸೂರಜ್ ಅವರಿಗೆ​ ಸಿನಿಮಾ ರಿಲೀಸ್ ಆಗುವ ವೇಳೆಗೆ ಆಕ್ಸಿಡೆಂಟ್ ಆಗಿತ್ತು. ಅಪಘಾತದಲ್ಲಿ ನಟ ಕಾಲು ಕಳೆದುಕೊಂಡಿದ್ದ ಸೂರಜ್ ಅವರಿಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾರ್ ಗಿಫ್ಟ್ ಮಾಡಿದ್ದಾರೆ. ಇದೇ ವಿಚಾರವಾಗಿ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಅವರು, ನಿರ್ಮಾಪಕ ರಾಕ್ ಲೈನ್ ಸರ್​ ಅವರು ಮಾಡಿರೋ ಈ ಕೆಲಸ ಇಡೀ ಇಂಡಸ್ಟ್ರಿಗೆ ಒಂದು ಲೆಸೆನ್ ಇದ್ದ ಹಾಗೆ. ಬೇರೆ ಅವರು ಇದೇ ರೀತಿ ಮಾಡಿದರೇ ನಮ್ಮಂತ ಕಲಾವಿದರಿಗೆ ಹುಮ್ಮಸು ಜಾಸ್ತಿ ಬರುತ್ತೆ. ಕಾರು ಗಿಫ್ಟ್​ ಆಗಿ ನೀಡಿದ ರಾಕ್ ಲೈನ್ ಸರ್​ಗೆ ತುಂಬಾ ಥ್ಯಾಂಕ್ಸ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಟೇರ ಸಕ್ಸಸ್​​.. ಕಲಾವಿದರಿಗೆ ಕಾರ್​ ಗಿಫ್ಟ್​ ಕೊಟ್ಟ ನಟ ದರ್ಶನ್​, ರಾಕ್​ಲೈನ್​ ವೆಂಕಟೇಶ್​​

https://newsfirstlive.com/wp-content/uploads/2024/05/katera4.jpg

Load More