/newsfirstlive-kannada/media/post_attachments/wp-content/uploads/2024/07/BeFunky-design-1-1.jpg)
ಬಳುಕುವ ಬಳ್ಳಿಯಂತ ಮೈ, ತುಳುಕುವ ವೈಯಾರ, ಹರೆಯಕ್ಕೆ ಎಂದೂ ಮುಕ್ಕು ಬರದಂತಹ, ಕಡೆ ದಿಟ್ಟ ಶಿಲೆಯಂತಹ ದೇಹ. ಬಾಲಿವುಡ್​ನ ಕತ್ರಿನಾ ಕೈಫ್ ನೋಡಿದವರ ಮನದಲ್ಲಿ ಇಂತಹದೊಂದು ಭಾವ ಸರಳವಾಗಿ ಹಾಯ್ದು ಹೋಗುತ್ತದೆ. ಸೌಂದರ್ಯಕ್ಕೆ ಸವತಿ ಅಂತ ಏನಾದ್ರೂ ಇದ್ರೆ ಅದು ಇವಳೇನಾ ಅನ್ನುವ ಸೌಂದರ್ಯದ ನುಣಪನ್ನೆಲ್ಲಾ ತನ್ನದಾಗಿಸಿಕೊಂಡಿದ್ದಾಳೆ ಕತ್ರಿನಾ.
/newsfirstlive-kannada/media/post_attachments/wp-content/uploads/2024/07/BeFunky-design-2-1.jpg)
ಪ್ರತಿಯೊಬ್ಬ ಬಾಲಿವುಡ್ ಬ್ಯೂಟಿಯೂ ಕೂಡ ಒಂದೊಂದು ಸೌಂದರ್ಯ ರಾಶಿ. ಅದರಲ್ಲಿ ಕತ್ರಿನಾ ಕೂಡ ಅಗ್ರಸಾಲಿನಲ್ಲಿ ನಿಲ್ಲುವೆ ಚೆಲುವೆ. ಸೌಂದರ್ಯವನ್ನು ಸದಾ ಕಾಲ ಒಂದೇ ರೀತಿ ಕಾಯ್ದಿಟ್ಟುಕೊಳ್ಳುವುದೇ ಒಂದು ದೊಡ್ಡ ಚಾಲೆಂಜ್​. ಆಹಾರ ಕ್ರಮದಿಂದ ಹಿಡಿದು. ವ್ಯಾಯಾಮ ಕುಡಿಯುವ ನೀರಿನಲ್ಲಿಯೂ ಅಳತೆಯಿಟ್ಟುಕೊಂಡು ಬದುಕು ಸಾಗಿಸಬೇಕು. ಹೀಗಾಗಿ ಈ ವಿಷಯದಲ್ಲಿ ನಾಯಕಿಯರು ಅದರಲ್ಲೂ ಬಾಲಿವುಡ್ ನಾಯಕಿಯರು ತುಂಬಾ ಕಟ್ಟು ನಿಟ್ಟು. ಅವರ ಸೌಂದರ್ಯ ರಾಶಿಯೇ ಅವರ ಭವಿಷ್ಯದ ಮೂಲ. ಹೀಗಾಗಿ ಡಯಟ್ ಅನ್ನೋದು ಅವರಿಗೆ ಅನಿವಾರ್ಯ ಹಾಗೂ ಬದುಕಿನ ಒಂದು ಭಾಗ. ಕತ್ರಿನಾ ಬ್ಯೂಟಿಯ ಗುಟ್ಟೊಂದನ್ನ ನ್ಯೂಟ್ರಿಯನಿಷ್ಟ್ ಶ್ವೇತಾ ಶಾ ಅವರು ಬಹಿರಂಗಗೊಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/05/katrina-kaif.jpg)
ಕತ್ರಿನಾ ಕೈಫ್ ಸೌಂದರ್ಯದ ಗುಟ್ಟೇನು?
ಕತ್ರಿನಾ ಕೈಫ್ ಅವರು ಫಿಟ್ ಮತ್ತು ಫ್ಲೆಕ್ಷಿಬಲ್ ಆಗಿರುವುದು ಎಲ್ಲರಿಗೂ ಗೊತ್ತಿದೆ. ಆ ವಿಷಯದಲ್ಲಿ ನಾನು ತುಂಬಾ ನಿರ್ದಿಷ್ಟವಾಗಿ ಡಯಟ್ ಫಾಲೋವ್ ಮಾಡ್ತೀನಿ ಅಂತ ಶ್ವೇತಾ ಶಾ ಎದುರು ಕತ್ರಿನಾ ಕೈಫ್ ಹೇಳಿದ್ದಾರೆ. ಕತ್ರಿನಾ ಸುಮ್ ಸುಮ್ನೆ ಇಂಟರ್​​ನೆಟ್​ನಲ್ಲಿ ಸಿಗುವ ಯಾವುದೇ ಡಯಟ್ ಪಾಲಿಸಿಯನ್ನು ಫಾಲೋ ಮಾಡಲ್ಲ. ಅವರಿಗೆ ಆಹಾರವೇ ಒಂದು ಔಷಧಿ ಎಂಬುದು ಗೊತ್ತು. ಫುಡ್ ಮೆಡಿಸನ್​ ಅನ್ನು ತುಂಬಾ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ.
ಅವರು ಪ್ರತಿ ಬಾರಿ ನನ್ನ ಬಳಿ ಬಂದಾಗ ನ್ಯೂಟ್ರಿಷನ್​ನ ಪರ್ಯಾಯ ಆಹಾರಗಳ ಬಗ್ಗೆ ವಿವರ ಪಡೆದಿದ್ದಾರೆ. ಜ್ಯೂಸ್​ಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಅವರಿಗೆ ಆಯುರ್ವೇದದ ಬಗ್ಗೆ ಅಪಾರ ನಂಬಿಕೆ ಇದೆ, ಸ್ವಯಂ ಕಾಳಜಿಗಾಗಿ ಅವರು ಶಪ್ತಾವಳಿಯಂತಹ ಆಯುರ್ವೇದಿಕ ಪದ್ಧತಿಯನ್ನು ಅನುಸರಿಸುತ್ತಾರೆ. ಶಪ್ತಾವಳಿ ಅಂದ್ರೆ ಊಟ ಅಥವಾ ತಿಂಡಿಯಾದ ನಂತರ ನೂರು ಹೆಜ್ಜೆಗಳನ್ನು ನಡೆಯುವುದು. ಅದು ಮಾತ್ರವಲ್ಲ ಅವರು ದಿನಕ್ಕೆ ಕೇವಲ ಎರಡು ಊಟ ಮಾತ್ರ ಮಾಡುತ್ತಾರೆ. ಪ್ರತಿ ಎರಡು ಗಂಟೆಗೊಮ್ಮೆ ಏನಾದರೂ ತಿನ್ನುವಂತ ಡಯಟ್​ನಿಂದ ಅವರು ತುಂಬಾ ದೂರವಿದ್ದಾರೆ ಎಂದು ಹೇಳಿದ್ದಾರೆ. ಕತ್ರಿನಾ ಬ್ಯೂಟಿಯ ಅಸಲಿ ಗುಟ್ಟು ಇರೋದೆ ದಿನಕ್ಕೆ ಎರಡು ಹೊತ್ತು ಊಟ ಮಾಡೋದ್ರಲ್ಲಿ ಎಂದು ಶ್ವೇತಾ ಶಾ ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗರೇ.. ನಿಮ್ಮ ಸ್ಕೂಟರನ್ನು ಎಲೆಕ್ಟ್ರಿಕ್​ ಸ್ಕೂಟರನ್ನಾಗಿ ಪರಿವರ್ತಿಸಬಹುದು! ಬಹಳ ಸುಲಭ!
ಎರಡು ಹೊತ್ತು ಊಟದ ಪ್ರಯೋಜನವೇನು?
ದಿನಕ್ಕೆ ಎರಡೇ ಹೊತ್ತು ಊಟ ಮಾಡುವುದರಿಂದ ನಮ್ಮ ದೇಹದ ಜೀರ್ಣಕ್ರಿಯೆ ಹಾಗೂ ದೇಹ ನ್ಯೂಟ್ರಿಷನ್​ಗಳನ್ನು ಹೀರಿಕೊಳ್ಳುವಿಕೆಯ ಮಟ್ಟ ಬೇರೆಯದ್ದೇ ಎತ್ತರಕ್ಕೆ ಹೋಗುತ್ತದೆ. ಅದರ ಜೊತೆಗೆ ಆಯುರ್ವೇದದ ಕೆಲವು ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ದೇಹ ಸೌಂದರ್ಯವನ್ನು ಇನ್ನುಷ್ಟು ಚೆಂದವಾಗಿ ಕಾಪಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಆಯುರ್ವೇದ ಸದಾ ದಿನಕ್ಕೆ ಎರಡು ಹೊತ್ತಿನ ಊಟದ ಬಗ್ಗೆಯೇ ಹೆಚ್ಚು ಹೇಳುತ್ತದೆ. ಮೊದಲನೇ ಊಟ ಹಾಗೂ ಎರಡನೇ ಊಟದ ನಡುವೆ ಕನಿಷ್ಠ 6 ಗಂಟೆಗಳಷ್ಟು ಅಂತರವಿದ್ದರೆ ಜೀರ್ಣಕ್ರಿಯೆಗೆ ತುಂಬಾ ಸಹಾಯಕಾರಿ. ಈ ಅವಧಿಯಲ್ಲಿ ನೀವು ಸೇವಿಸಿರುವ ಪೌಷ್ಠಿಕಾಂಶ ಆಹಾರಗಳು ಸಂಪೂರ್ಣವಾಗಿ ಜೀರ್ಣಗೊಳ್ಳುವುದಕ್ಕೆ ಸಹಾಯವಾಗುತ್ತದೆ ಎಂದು ಆಯುರ್ವೇದಿಕ ಪರಿಣಿತರಾದ ಪ್ರದೀಪ್ ಶ್ರೀವಾತ್ಸವ್ ಹೇಳುತ್ತಾರೆ. ದಿನಕ್ಕೆ ಎರಡು ಹೊತ್ತು ಊಟದ ಡಯಟ್​ನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ಕಾರಣದಿಂದಾಗಿಯೇ ಕ್ಯಾಟ್ ಇಷ್ಟೊಂದು ಚೆಲುವುತನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us