ಹೆರಿಗೆಗಾಗಿ ಲಂಡನ್​ನಲ್ಲಿರುವ​ ಕತ್ರಿನಾ ಕೈಫ್​? ಮೊದಲ ಮಗುವಿಗೆ ತಂದೆಯಾಗುವ ನಿರೀಕ್ಷೆಯಲ್ಲಿ ವಿಕ್ಕಿ ಕೌಶಲ್​

author-image
AS Harshith
Updated On
ದಿನಕ್ಕೆ ಎರಡೇ ಹೊತ್ತು ಊಟ.. ಕತ್ರಿನಾ ಕೈಫ್ ಸೌಂದರ್ಯದ ಗುಟ್ಟು ಬಿಚ್ಚಿಟ್ಟ ಖ್ಯಾತ ನ್ಯೂಟ್ರಿಷನಿಸ್ಟ್‌; ಹೇಳಿದ್ದೇನು?
Advertisment
  • 2021ರಲ್ಲಿ ವಿವಾಹವಾಗಿದ್ದ ಸ್ಟಾರ್​ ಜೋಡಿಗಳು
  • ತಾಯಿಯಾಗುತ್ತಿರುವ ಖುಷಿಯಲ್ಲಿ ಬಾಲಿವುಡ್​ ನಟಿ ಕತ್ರೀನಾ ಕೈಫ್​?
  • ಲಂಡನ್​ನಲ್ಲಿರುವ ವಿಕ್ಕಿ ಮತ್ತು ಕತ್ರೀನಾ ಕೈಫ್​.. ಸಿಹಿ ಸುದ್ದಿ ನಿರೀಕ್ಷೆಯಲ್ಲಿ ಫ್ಯಾನ್ಸ್​

ಬಾಲಿವುಡ್​ ಸ್ಟಾರ್​ ಜೋಡಿಗಳಾದ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ ಎಂಬ ಮಾತುಗಳು ಬಾಲಿವುಡ್​ನಲ್ಲಿ ಜೋರಾಗಿ ಕೇಳಿಬರುತ್ತಿದೆ. ಅದಕ್ಕಾಗಿ ಈ ಜೋಡಿ ಲಂಡನ್​ನಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ವಿಕ್ಕಿ ಕೌಶಲ್​ ಮತ್ತು ಕತ್ರೀನಾ 2021ರಲ್ಲಿ ವಿವಾಹವಾದರು. ಸದ್ಯ ಈ ಜೋಡಿ ವಿವಾಹವಾಗಿ 3 ವರ್ಷ ಕಳೆದಿದೆ. ನಟಿ ಕತ್ರೀನಾ ಗರ್ಭಿಣಿ ಎಂಬದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಸದ್ಯ ಹೆರಿಗೆಗಾಗಿ ಕತ್ರೀನಾ ಲಂಡನ್​ನಲ್ಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ವಿಕ್ಕಿ ಕೂಡ ಕತ್ರೀನಾ ಜೊತೆ ಇದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ಗಟ್ಟಿಮೇಳ ಖ್ಯಾತಿಯ ರೌಡಿ ಬೇಬಿ ನಿಶಾ.. ಏನದು ಗೊತ್ತಾ?

ಇನ್ನು ಈ ಸ್ಟಾರ್​ ಜೋಡಿಗಳು ಲಂಡನ್​ ಬೀದಿಯಲ್ಲಿ ಸುತ್ತಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅದಲ್ಲದೇ ಇದೇ ತಿಂಗಳ 16ನೇ ತಾರೀಖು ಕತ್ರೀನಾ ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದರು. ಆದರೀಗ ನಟಿ ತಾಯಿಯಾಗುವ ನಿರೀಕ್ಷೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

ಸದ್ಯ ಈ ಸ್ಟಾರ್​ ಜೋಡಿ ಪೋಷಕರಾಗುವ ಸುದ್ದಿಯನ್ನು ಕೇಳಲು ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment