ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಓಡೋಡಿ ಬಂದ ಬಾಲಿವುಡ್​ ದಂಡು.. ದೈವದ ಬಳಿ ನಟಿ ಕತ್ರಿನಾ ಕೈಫ್ ಬೇಡಿಕೊಂಡಿದ್ದೇನು?

author-image
AS Harshith
Updated On
ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಓಡೋಡಿ ಬಂದ ಬಾಲಿವುಡ್​ ದಂಡು.. ದೈವದ ಬಳಿ ನಟಿ ಕತ್ರಿನಾ ಕೈಫ್ ಬೇಡಿಕೊಂಡಿದ್ದೇನು?
Advertisment
  • ತುಳುನಾಡಿನ ಆರಾಧ್ಯ ದೈವವನ್ನು ಕಾಣಲು ಬಂದ ಬಾಲಿವುಡ್ ನಟಿ
  • ಕೊರಗಜ್ಜನ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಹಾಂಗ್​ ಕಾಂಗ್ ಮೂಲದ ನಟಿ
  • ಟೀಂ ಇಂಡಿಯಾದ ಆಟಗಾರನ ಫ್ಯಾಮಿಲಿ ಜೊತೆ ಮಂಗಳೂರಿಗೆ ಕತ್ರೀನಾ ಆಗಮನ

ಮಂಗಳೂರು: ಇತ್ತೀಚೆಗೆ ವಿಶ್ವಕಪ್​ ಗೆದ್ದ ಬಳಿಕ ಟೀಂ ಇಂಡಿಯಾದ ಆಟಗಾರ ಸೂರ್ಯ ಕುಮಾರ್​ ಯಾದವ್​ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಉಡುಪಿಯ ಕಾಪು ಶ್ರೀ ಮಾರಿಗುಡಿಗೆ ಭೇಟಿ ನೀಡಿದ್ದರು. ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್ ದಂಡೇ ಆಗಮಿಸಿದೆ. ನಟಿ ಕತ್ರಿನಾ ಕೈಫ್​ ಕೂಡ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ತುಳುನಾಡಿನ ಕಾರ್ಣಿಕ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ ಹಾಗೂ ಕ್ರಿಕೆಟರ್ ಕೆ.ಎಲ್.ರಾಹುಲ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ಕೋಲ ಸೇವೆಯಲ್ಲೂ ಭಾಗ ವಹಿಸಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​ ಆಪ್ತ ಸ್ನೇಹಿತನ ಮಗಳು ಈಗ ಮಹಾನಟಿ ವಿನ್ನರ್​​; ಯಾರಿದು ಪ್ರಿಯಾಂಕ ಆಚಾರ್​?

ರಾತ್ರಿ ನಡೆದ ಕೋಲದಲ್ಲಿ ಪುರಷರಿಗಷ್ಟೇ ಅವಕಾಶ ಇದ್ದ ಕಾರಣ ಕತ್ರಿನಾ ಕೈಫ್ ಮತ್ತು ಆತಿಯಾ ಶೆಟ್ಟಿ ಕೋಲ ಸೇವೆಯಲ್ಲಿ ಪಾಲ್ಗೊಂಡಿಲ್ಲ. ಕ್ಷೇತ್ರಕ್ಕೆ ಆಗಮಿಸಿದ ವೇಳೆ ಕಚೇರಿಯಲ್ಲಿ ಕತ್ರಿನಾ ಕೈಫ್ ಕ್ಷೇತ್ರದ ಮಹಿಮೆ ಬಗ್ಗೆ ತಿಳಿದು ಕೊಂಡರು.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ.. ಬೆಚ್ಚಿ ಬೀಳಿಸಿದ 20 ವರ್ಷದ ಯುವಕನ ಅಟ್ಯಾಕ್‌; ಅಸಲಿ ಕಾರಣವೇನು?

ಬಾಲಿವುಡ್ ದೊಡ್ಡ ತಂಡವೇ ಆಗಮಿಸಿದ ಕಾರಣಕ್ಕೆ ಕ್ಷೇತ್ರದಲ್ಲಿ ಯಾರಿಗೂ ಫೋಟೋ ವಿಡಿಯೋಗೆ ಅವಕಾಶವನ್ನು ನೀಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment