/newsfirstlive-kannada/media/post_attachments/wp-content/uploads/2024/10/Kaveri-tirthodbhav-3.jpg)
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿ ಕ್ಷೇತ್ರದಲ್ಲಿ ನಾಳೆ ಬೆಳಗ್ಗೆಯಿಂದ ವರ್ಷಕ್ಕೊಮ್ಮೆ ನಡೆಯುವ ಪವಿತ್ರ ತೀರ್ಥೋದ್ಭವದ ಸಂಭ್ರಮ ಕಳೆಗಟ್ಟಲಿದೆ. ತುಲಾ ಸಂಕ್ರಮಣದ ವೇಲೆ ಒಂದು ತಿಂಗಳು ನಡೆಯಲಿರುವ ಜಾತ್ರಮಹೋತ್ಸವಕ್ಕೆ, ನಾಳೆಯಿಂದ ವಿದ್ಯುಕ್ತ್ ಚಾಲನೆ ದೊರಕಲಿದೆ.
ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಾತ್ರವಲ್ಲದೇ ತಮಿಳುನಾಡು ಹಾಗೂ ಕೇರಳದಿಂದಲೂ ಕೂಡ ಭಕ್ತರು ಆಗಮಿಸಿ ತೀರ್ಥೋದ್ಭದ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ. ಈ ಬಾರಿ ಅಕ್ಟೋಬರ್ 17ರ ಮುಂಜಾನೆ 7 ಗಂಟೆ 40 ನಿಮಿಷಕ್ಕೆ ತುಲಾ ಲಗ್ನದಲ್ಲಿ ತೀರ್ಥೋದ್ಭವ ಆಗಲಿದೆ. ಮುಂಜಾನೆಯಿಂದಲೇ ವಿವಿಧ ಹೋಮ ಹವನಗಳು ನಡೆಯಲಿದ್ದು. ತೀರ್ಥೋದ್ಭವಕ್ಕೂ ಎರಡು ಗಂಟೆ ಮೊದಲು ಮಹಾ ಸಂಕಲ್ಪ ಪೂಜೆ ನೆರವೇರಲಿದೆ. ಈ ಸಂಕಲ್ಪ ಪೂಜೆಯಲ್ಲಿಯೂ ಕೂಡ ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಅಗಸ್ತ್ಯ ಮಹರ್ಷಿಗಳನ್ನು ಮದುವೆಯಾದ ಕಾವೇರಿ ನದಿಯಾಗಿ ಹರಿದಿದ್ದೇಕೆ? ಏನಿದೇ ಆ ಪೌರಾಣಿಕ ಕಥೆಯಲ್ಲಿ?
ಮಹಾಸಂಕಲ್ಪ ಪೂಜೆ ನಡೆದ ಬಳಿಕ ಕುಂಡಿಕೆಯ ಪವಿತ್ರ ಜಲ ತನ್ನಷ್ಟಕ್ಕೆ ತಾನೇ ನಿಧಾನವಾಗಿ ಒಂದೆರಡು ಬಾರಿ ತೊಟ್ಟಿಲು ತೂಗಿದಂತೆ ಆಗುತ್ತದೆ. ಇದೇ ಕಾವೇರಿ ಮಾತೆ ತೀರ್ಥಸ್ವರೂಪಿಣಿಯಾಗಿ ದರ್ಶನ ಕೊಡುವ ಮುನ್ಸೂಚನೆ ಎಂದು ಹೇಳಲಾಗುತ್ತದೆ. ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಕ್ಷಣಕ್ಕೆ ಕಾತರದಿಂದ ಕಾಯುತ್ತಿರುತ್ತಾರೆ. ತೀರ್ಥೋದ್ಭವದ ಸಮಯದಲ್ಲಿ ಜೈ ಜೈ ಮಾತೆ ಕಾವೇರಿ, ಗೋವಿಂದಾ ಎಂಬ ಉದ್ಘೋಷಗಳು ಮೊಳಗುತ್ತವೆ. ಬಿಂದಿಗೆ ಕ್ಯಾನ್​ಗಳಲ್ಲಿ ಪವಿತ್ರ ತೀರ್ಥವನ್ನು ಮನೆಗೆ ಕೊಂಡೊಯ್ಯಲಲು ಭಕ್ತರು ನೂಕುನುಗ್ಗಲಿನಲ್ಲಿ ನಿಂತಿರುತ್ತಾರೆ.
ಈ ಬಾರಿ ಮುಂಜಾನೆಯೇ ತೀರ್ಥೋದ್ಭವ ಆಗುತ್ತಿರುವುದರಿಂದ ಸಹಜವಾಗಿಯೇ ಭಕ್ತರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ದರ್ಶನ್‌ಗಾಗಿ ಬಂತು ಮೆಡಿಕಲ್ ಬೆಡ್, ದಿಂಬು; ಮೆಡಿಕಲ್ ರಿಪೋರ್ಟ್‌ನಲ್ಲಿ ಇರೋದೇನು?
ತಲಕಾವೇರಿಗೆ ಆಗಮಿಸುವ ಪ್ರತಿಯೊಬ್ಬರೂ ಮೊದಲಿಗೆ ಭಾಗಮಂಡಲದಲ್ಲಿ ಭಗಂಢೇಶ್ವರನಿಗೆ ಪೂಜೆ ಸಲ್ಲಿಸಿ ಬಳಿಕ ಕಾವೇರಿ ಮಾತೆಯ ದರ್ಶನ ಪಡೆಯುತ್ತಾರೆ. ಈ ಬಾರಿ ಭಕ್ತರ ಸಂಖ್ಯೆ ಜಾಸ್ತಿಯಾಗುವ ನಿರೀಕ್ಷೆ ಇರುವುದರಿಂದ ಕೊಡಗು ಜಿಲ್ಲಾಡಳಿತ ಹಾಗೂ ತಲಕಾವೇರಿ-ಭಾಗಮಂಡಲ ದೇವಾಲಯ ಸಮಿತಿಯಿಂದ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಿಸಿ ಕ್ಯಾಮರಾ ಅಳವಡಿಕೆ ಜೊತೆಗೆ ಅಗತ್ಯ ಕಾರ್ಯಗಳಿಗಾಗಿ ಸ್ವಯಂ ಸೇವಕರನ್ನು ಕೂಡ ನೇಮಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us