ಸಿಹಿ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ​​ ಸರ್ಕಾರ.. ದಸರಾ ಮುಗಿದ ಬಳಿಕ 110 ಹಳ್ಳಿಗಳಿಗೆ ಹರಿಯಲಿದ್ದಾಳೆ ಕಾವೇರಿ

author-image
AS Harshith
Updated On
ಸಿಹಿ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ​​ ಸರ್ಕಾರ.. ದಸರಾ ಮುಗಿದ ಬಳಿಕ 110 ಹಳ್ಳಿಗಳಿಗೆ ಹರಿಯಲಿದ್ದಾಳೆ ಕಾವೇರಿ
Advertisment
  • 110 ಹಳ್ಳಿಗಳಲ್ಲಿ ಹರಿಯಲು ರೆಡಿಯಾದ ಕಾವೇರಿ
  • ಈ ಯೋಜನೆಗೆ ಸಿಎಂ, ಡಿಸಿಎಂ‌ನಿಂದ ಸಿಗಲಿದೆ ಚಾಲನೆ
  • ₹4,336 ಕೋಟಿ ವೆಚ್ಚದ ಯೋಜನೆ ಕಾಮಗಾರಿಯಿದು

ಕಾವೇರಿ ಐದನೇ ಹಂತದ ಯೋಜನೆ ಚಾಲನೆಗೆ ಡೇಟ್ ಫಿಕ್ಸ್ ಆಗಿದೆ. ಅಕ್ಟೋಬರ್ 16ರಂದು 110 ಹಳ್ಳಿಗಳಲ್ಲಿ ಕಾವೇರಿ ಹರಿಯಲಿದ್ದಾಳೆ. ದಸರಾ ಮುಗಿದ ಬೆನ್ನಲ್ಲೇ 110 ಹಳ್ಳಿ ಜನರ ದಾಹವನ್ನು ಕಾವೇರಿ ನೀಗಿಸಲಿದ್ದಾಳೆ.

ಕಾವೇರಿ ಐದನೇ ಹಂತದ ಯೋಜನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ‌ ಡಿ.ಕೆ ಶಿವಕುಮಾರ್​​​ ಅವರಿಂದ ಚಾಲನೆ ದೊರಕಲಿದೆ. ಈಗಾಗಲೇ ಬೆಂಗಳೂರು ಜಲಮಂಡಳಿಯಿಂದ ₹4,336 ಕೋಟಿ ವೆಚ್ಚದ ಯೋಜನೆ ಕಾಮಗಾರಿ ಮುಗಿದಿದ್ದು, ಯೋಜನೆ ಕಾಮಗಾರಿ ಮುಗಿದಿರುವ ಹಿನ್ನಲೆ ಅಕ್ಟೋಬರ್16ರಂದು ಯೋಜನೆಗೆ ಚಾಲನೆ ದೊರಕಿಲಿದೆ.

publive-image

110 ಹಳ್ಳಿಗಳಿಗೆ ಬರಲಿದ್ದಾಳೆ ಕಾವೇರಿ

ಟಿಕೆ ಹಳ್ಳಿಯ ಜಲಮಂಡಳಿ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿಯವರು​ ಉದ್ಘಾಟನೆ ಮಾಡಲಿದ್ದಾರೆ. ಅಕ್ಟೋಬರ್ 16 ರಿಂದಲೇ 110 ಹಳ್ಳಿಗಳ ಮನೆ ಮನೆಗೆ ಕಾವೇರಿ ನೀರು ಬರಲಿದೆ. ಈಗಾಗಲೇ 110 ಹಳ್ಳಿ ವ್ಯಾಪ್ತಿಯಲ್ಲಿ 50 ಸಾವಿರ ನೀರಿನ ಸಂಪರ್ಕವನ್ನು ನಿವಾಸಿಗಳು ಪಡೆದಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ತವರಲ್ಲೇ ದಲಿತ ಸಚಿವರ ರಹಸ್ಯ ಸಭೆ; ಜಾರಕಿಹೊಳಿ ನಡೆ ಮತ್ತಷ್ಟು ಆಳ..!

publive-image

ಮೊದಲ ಹಂತದಲ್ಲಿ ಜಲಮಂಡಳಿ 175 ಎಂಎಲ್ಡಿ ನೀರು ಪೂರೈಕೆ ಮಾಡಲಿದೆ. ಕಾವೇರಿ ಐದನೇ ಹಂತದ ಮೂಲಕ 775 MLD ನೀರು ಸಪ್ಲೈ ಮಾಡಲಿದೆ. ಉಳಿದ ನೀರನ್ನು ಹಂತ ಹಂತವಾಗಿ ಪೂರೈಸಲು ನಿರ್ಧಾರ ಮಾಡಿದೆ.

ಸಾಲ ಪಡೆದು ಕೈಗೆತ್ತಿಕೊಂಡ ಕಾಮಗಾರಿ

ಜಲಮಂಡಳಿಯು 2019 ರಿಂದ ಕಾವೇರಿ ಐದನೇ ಹಂತ ಯೋಜನೆ ಕಾಮಗಾರಿ ಆರಂಭ ಮಾಡಿತ್ತು. ಜೈಕಾ ಮೂಲಕ ಸಾಲ ಪಡೆದು ಕಾವೇರಿ ಐದನೆಯ ಹಂತ ಯೋಜನೆ ಕಾಮಗಾರಿ ಕೈಗೆತ್ತಿಕೊಂಡಿತ್ತು.

publive-image

ಇದನ್ನೂ ಓದಿ: ಹರಿಯಾಣ ಸೋಲು ಒಪ್ಪಿಕೊಳ್ಳದ ಕಾಂಗ್ರೆಸ್; ಬೇರೆಯದ್ದೇ ಆರೋಪ ಮಾಡಿದ ನಾಯಕರು..!

ಬಿಬಿಎಂಪಿ ಗೆ ಹೊಸದಾಗಿ ಸೇರ್ಪಣೆಯಾಗಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಬರಲಿದೆ. ಮೊದಲ ಬಾರಿಗೆ ನೀರು ಹರಿಯಲಿದೆ. ಈವರೆಗೆ ಕಾವೇರಿ ನೀರಿಲ್ಲದೆ ಬೋರ್​ವೆಲ್ ನೀರಿಗೆ 110 ಹಳ್ಳಿಗಳ ಜನರು ಅವಲಂಬಿಸಿದ್ದರು. ಆದರೀಗ ಅವರ ಆತಂಕ ದೂರವಾಗಿದೆ.  ಯಶವಂತಪುರ, ದಾಸರಹಳ್ಳಿ,ಬೊಮ್ಮನಹಳ್ಳಿ, ಮಹಾದೇವಪುರ, ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment