/newsfirstlive-kannada/media/post_attachments/wp-content/uploads/2024/12/kavitha-gowda-1.jpg)
ಕಿರುತೆರೆಯ ಮುದ್ದಾದ ಜೋಡಿ ಎಂದರೆ ಕವಿತಾ ಚಂದನ್​. ಈ ಜೋಡಿ ಲವ್​ ಸ್ಟೋರಿ ಬಗ್ಗೆ ಬಹುತೇಕ ವೀಕ್ಷಕರಿಗೆ ಗೊತ್ತಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್​ ಮಾಡೋವಾಗ ಇಬ್ಬರಿಗೂ ಸ್ನೇಹ ಶುರುವಾಗಿತ್ತು. ಆ ಸ್ನೇಹ ಪ್ರೀತಿಗೆ ಬುನಾದಿಯಾಯ್ತು.
ಇದನ್ನೂ ಓದಿ:VIDEO: 8 ಬಾರಿ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ ಶಪಥ; ಕಾರಣ ಡಿಎಂಕೆ ಸರ್ಕಾರ!
/newsfirstlive-kannada/media/post_attachments/wp-content/uploads/2024/10/kavitha-gowda1.jpg)
ಸೀರಿಯಲ್​ನಲ್ಲಿ ಪತಿ-ಪತ್ನಿ ಆಗಿದ್ದ ಲಚ್ಚಿ-ಚಂದುಗೆ ರಿಯಲ್​ ಲೈಫ್​ನಲ್ಲೂ ಮದುವೆ ಯೋಗ ಕೂಡಿ ಬಂದಿತ್ತು. ಸಿಂಗಲ್​ ಆಗಿಯೇ ಅಪಾರ ಫ್ಯಾನ್ಸ್​ ಪಡೆದಿದ್ದ ಇಬ್ಬರೂ ಮಿಂಗಲ್​ ಆದ್ಮೇಲೆ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಯ್ತು. ಇದೀಗ ಈ ಸ್ಟಾರ್ ದಂಪತಿ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮುದ್ದಾದ ಮಗನ ಜೊತೆಗೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/12/kavitha-gowda-2.jpg)
ಹೌದು, ಕವಿತಾ ಗೌಡ ಹಾಗೂ ಚಂದನ್​ ಕುಮಾರ್ ಮಗನಿಗೆ 3 ತಿಂಗಳು ತುಂಬಿವೆ. ಇದೇ ಖುಷಿಯಲ್ಲಿ ಕವಿತಾ ಗೌಡ ಹಾಗೂ ಚಂದನ್​ ಕುಮಾರ್ ಮಗುವಿನ ಜೊತೆಗೆ ಕಾಲ ಕಳೆದ ವಿಡಿಯೋ ಕ್ಲಿಪ್​ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ದಂಪತಿ ಮುದ್ದಾದ ಮಗನನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ನೋಡಿ ಅಭಿಮಾನಿಗಳು 6 ತಿಂಗಳವರೆಗೂ ಮಗುವನ್ನು ಆಚೆ ಕರೆದುಕೊಂಡು ಹೋಗಬೇಡಿ, ಎಲ್ಲ ವಾತಾವರಣ ಚೆನ್ನಾಗಿ ಇರೋದಿಲ್ಲ ಅಂತ ಸಲಹೆ ಕೊಟ್ಟಿದ್ದಾರೆ.
View this post on Instagram
ಇನ್ನೂ, ಕವಿತಾ ಗೌಡ ಅವರು ಕನ್ನಡ ಕಿರುತೆರೆ ನಟಿ. ಚಂದನ್​ ಕುಮಾರ್​ ಅವರು ಕಿರುತೆರೆ, ಬೆಳ್ಳಿತೆರೆಯಲ್ಲಿ ಮುಂಚಿದ ನಟ. ಕವಿತಾ ಗೌಡ ಹಾಗೂ ಚಂದನ್ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ತದನಂತರ ಲಾಕ್‌ಡೌನ್ ಸಮಯದಲ್ಲಿ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಬಳಿಕ 2021 ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us