ನವರಾತ್ರಿ ಕೊನೆ ದಿನ ಮಗುವಿನ ಮುಖ ರಿವೀಲ್.. ಚಂದನ್, ಕವಿತಾ ದಂಪತಿ ಮಗ ಹೇಗಿದ್ದಾನೆ ನೋಡಿ!

author-image
Veena Gangani
Updated On
Photo: ಕವಿತಾ, ಚಂದು ಮಡಿಲಲ್ಲಿ ಮುದ್ದಾದ ಕಂದಮ್ಮ.. ಮೊದಲು ದೃಷ್ಟಿ ತೆಗಿರಿ ಮೇಡಂ ಎಂದ ಅಭಿಮಾನಿಗಳು​!
Advertisment
  • ಲಕ್ಷ್ಮೀ ಬಾರಮ್ಮ ಸೀರಿಯಲ್​ನಿಂದ ಖ್ಯಾತಿ ಪಡೆದ ಸ್ಟಾರ್​ ದಂಪತಿ
  • ಸೆ.18ರಂದು ಮುದ್ದಾದ ಮಗುವಿಗೆ ವೆಲ್‌ಕಮ್ ಹೇಳಿದ ದಂಪತಿ
  • 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚಂದನ್, ಕವಿತಾ ಗೌಡ

ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ದಂಪತಿ ತಮ್ಮ ಮುದ್ದಾದ ಗಂಡು ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ವಿಶೇಷ ಎಂದರೆ ನವರಾತ್ರಿ ಕೊನೆಯ ದಿನವೇ ಮುದ್ದಾದ ಮಗನ ಮುಖವನ್ನು ರಿವೀಲ್​ ಮಾಡಿದ್ದಾರೆ.

ಇದನ್ನೂ ಓದಿ: ವಿಷ್ಣುವರ್ಧನ್ ಹುಟ್ಟಿದ ದಿನ ಮಗು ಜನನ.. ಕವಿತಾ ಗೌಡ, ಚಂದನ್‌ಗೆ ಶುಭಾಶಯಗಳ ಮಹಾಪೂರ

ಕಳೆದ ಮೇ 5ರಂದು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮುದ್ದಾದ ಫೋಟೋವನ್ನು ಶೇರ್​ ಮಾಡಿಕೊಳ್ಳುವ ಮೂಲಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ತಿಳಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಕಿರುತೆರೆ ನಟ ನಟಿಯರು ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್​ಗೆ ಶುಭ ಹಾರೈಸಿದ್ದರು. ಆಗಾಗ ನಟಿ ಕವಿತಾ ಗೌಡ ತಮ್ಮ ಮುದ್ದಾದ ಬೇಬಿ ಬಂಪ್​ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಿದ್ದರು.

ಇದಾದ ಬಳಿಕ ಸೆಪ್ಟೆಂಬರ್ 18ರಂದು ದಂಪತಿ ಮುದ್ದಾದ ಮಗುವಿಗೆ ವೆಲ್‌ಕಮ್ ಹೇಳಿದ್ದರು. ಆ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಮುದ್ದಾದ ಮಗನ ಮುಖವನ್ನು ದಂಪತಿ ರಿವೀಲ್ ಮಾಡಿದ್ದಾರೆ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಮುದ್ದಾದ ಚಂದು ಹಾಗೂ ಕವಿತಾ ಗೌಡ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಯಲ್ಲಿ ಅತಿ ದೊಡ್ಡ ಎಡವಟ್ಟು.. ರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕೆ ಕಠಿಣ ಶಿಕ್ಷೆ; ಏನಾಯ್ತು?

ಒಂದೇ ಸೀರಿಯಲ್​ನಲ್ಲಿ ದಂಪತಿ ಅಭಿನಯ

ಕವಿತಾ ಗೌಡ ಅವರು ಕನ್ನಡ ಕಿರುತೆರೆ ನಟಿ. ಚಂದನ್​ ಕುಮಾರ್​ ಅವರು ಕಿರುತೆರೆ, ಬೆಳ್ಳಿತೆರೆಯಲ್ಲಿ ಮುಂಚಿದ ನಟ. ಕವಿತಾ ಗೌಡ ಹಾಗೂ ಚಂದನ್ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ತದನಂತರ ಲಾಕ್‌ಡೌನ್ ಸಮಯದಲ್ಲಿ ಜೋಡಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಬಳಿಕ 2021 ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಸ್ಟಾರ್ ದಂಪತಿ ಮೊದಲ ಮಗುವಿನ ಜೊತೆ ಕಾಲ ಕಳೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment