ಮುದ್ದು ಮಗನ ಜೊತೆಗೆ ಮುದ್ದಾದ ಕುಟುಂಬ.. ಕವಿತಾ ಗೌಡ ದಂಪತಿ ಗುಂಡಪ್ಪನ ಬಗ್ಗೆ ಏನಂದ್ರು?

author-image
Veena Gangani
Updated On
ಮುದ್ದು ಮಗನ ಜೊತೆಗೆ ಮುದ್ದಾದ ಕುಟುಂಬ.. ಕವಿತಾ ಗೌಡ ದಂಪತಿ ಗುಂಡಪ್ಪನ ಬಗ್ಗೆ ಏನಂದ್ರು?
Advertisment
  • ಕಿರುತೆರೆಯ ಕ್ಯೂಟೆಸ್ಟ್​ ಪೇರ್​ಗಳಲ್ಲಿ ಚಂದನ್ -ಕವಿತಾ ಕೂಡ ಒಬ್ಬರು
  • 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟ ಚಂದನ್, ಕವಿತಾ ಗೌಡ
  • ಅತ್ಯಂತ ಸಿಹಿ ಉಡುಗೊರೆ ನೀನೇ ಕಂದ ಎಂದು ಬರೆದಿಕೊಂಡ ದಂಪತಿ

ಕನ್ನಡ ಕಿರುತೆರೆಯ ಮುದ್ದಾದ ಜೋಡಿ ಎಂದರೆ ಅದು ಕವಿತಾ ಚಂದನ್​. ಈ ಜೋಡಿ ಲವ್​ ಸ್ಟೋರಿ ಬಗ್ಗೆ ಬಹುತೇಕ ವೀಕ್ಷಕರಿಗೆ ಗೊತ್ತಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್​ ಮಾಡೋವಾಗ ಇಬ್ಬರಿಗೂ ಸ್ನೇಹ ಶುರುವಾಗಿತ್ತು. ಆ ಸ್ನೇಹ ಪ್ರೀತಿಗೆ ಬುನಾದಿಯಾಯ್ತು.

ಇದನ್ನೂ ಓದಿ:ಹಾವಿನಿಂದ ಮನೆ ಮಾಲೀಕರ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ.. ಹಾಸನದಲ್ಲಿ ಮನಮಿಡಿಯುವ ದೃಶ್ಯ ಸೆರೆ!

ಸೀರಿಯಲ್​ನಲ್ಲಿ ಪತಿ-ಪತ್ನಿ ಆಗಿದ್ದ ಲಚ್ಚಿ-ಚಂದುಗೆ ರಿಯಲ್​ ಲೈಫ್​ನಲ್ಲೂ ಮದುವೆ ಯೋಗ ಕೂಡಿ ಬಂದಿತ್ತು. ಸಿಂಗಲ್​ ಆಗಿಯೇ ಅಪಾರ ಫ್ಯಾನ್ಸ್​ ಪಡೆದಿದ್ದ ಇಬ್ಬರೂ ಮಿಂಗಲ್​ ಆದ್ಮೇಲೆ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಯ್ತು.

ಇದೀಗ ಈ ಸ್ಟಾರ್ ದಂಪತಿ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮುದ್ದಾದ ಮಗನ ಜೊತೆಗೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯುತ್ತಿದ್ದಾರೆ. ಹೌದು, ಕವಿತಾ ಗೌಡ ಹಾಗೂ ಚಂದನ್​ ಕುಮಾರ್ ಮಗನಿಗೆ 6 ತಿಂಗಳು ತುಂಬಿವೆ. ಇದೇ ಖುಷಿಯಲ್ಲಿ ಕವಿತಾ ಗೌಡ ಹಾಗೂ ಚಂದನ್​ ಕುಮಾರ್ ಮಗುವಿನ ಜೊತೆಗೆ ಒಂದು ಸುಂದರವಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

publive-image

ಅದೇ ಪೋಸ್ಟ್​ ಜೊತೆಗೆ ಹೊಸ ಜೀವನದ 6 ತಿಂಗಳುಗಳು. ಗುಂಡಪ್ಪ. ಆರು ತಿಂಗಳ ಹಿಂದೆ, ನಮ್ಮ ಹೃದಯಗಳು ನಾವು ಎಂದಿಗೂ ಊಹಿಸದ ರೀತಿಯಲ್ಲಿ ಬೆಳೆದವು. ಇಂದು, ನಾವು ನಿಮ್ಮೊಂದಿಗೆ ಅರ್ಧ ವರ್ಷವನ್ನು ಆಚರಿಸುತ್ತಿರುವಾಗ, ನಿನ್ನ ತಂದೆ ತಾಯಿಯಾಗಲು ನಾವು ಎಷ್ಟು ಅದ್ಭುತ ಅದೃಷ್ಟಶಾಲಿಗಳು ಮತ್ತು ಅಂತ್ಯವಿಲ್ಲದ ಸಂತೋಷವನ್ನು ಹೊಂದಿದ್ದೇವೆ ಎಂಬುದನ್ನು ನಮಗೆ ನೆನಪಿಸುತ್ತದೆ. ನಮ್ಮ ದಿನಗಳನ್ನು ಪ್ರೀತಿ, ನಗು ಮತ್ತು ಆಶ್ಚರ್ಯದಿಂದ ತುಂಬುವ ಅತ್ಯಂತ ಸಿಹಿ ಉಡುಗೊರೆ ನೀನು ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment