newsfirstkannada.com

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾವ್ಯ ಗೌಡ; ಹೇಗಿದೆ ನಟಿಯ ಸೀಮಂತ ಕಾರ್ಯಕ್ರಮ..?

Share :

Published January 16, 2024 at 6:16am

Update January 16, 2024 at 10:50am

    ಶಾಸ್ತ್ರೋಕ್ತವಾಗಿ ನಡೆಯಿತು ಕಾವ್ಯ ಗೌಡ ಸೀಮಂತ ಕಾರ್ಯಕ್ರಮ

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಶುಭ ವಿವಾಹ​ ಧಾರಾವಾಹಿ ನಟಿ

    ಉದ್ಯಮಿ ಸೋಮಶೇಖರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ

ಕನ್ನಡ ಕಿರುತೆರೆ ನಟಿ ಕಾವ್ಯ ಗೌಡ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಶುಭ ವಿವಾಹ, ಗಾಂಧಾರಿ, ರಾಧಾ ರಮಣ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಕಾವ್ಯ ಗೌಡ ಅವರು ತಮ್ಮ ಮಗುವಿನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಹೀಗಾಗಿ ನಟಿ ಕಾವ್ಯ ಗೌಡ ಅವರು ಈಗ ಶಾಸ್ತ್ರೋಕ್ತವಾಗಿ ತಮ್ಮ ಸೀಮಂತ ಕಾರ್ಯಕ್ರಮ ನೆರವೇರಿಸಿಕೊಂಡಿದ್ದಾರೆ.

2021 ಡಿಸೆಂಬರ್ 1 ರಂದು ನಟಿ ಕಾವ್ಯ ಗೌಡ ಅವರು ಉದ್ಯಮಿ ಸೋಮಶೇಖರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು, ಮದುವೆಯ ಬಳಿಕ ನಟನೆಯಿಂದ ಕಾವ್ಯ ಗೌಡ ದೂರ ಉಳಿದುಕೊಂಡಿದ್ದರು. ಇದೀಗ ನಟಿ ಕಾವ್ಯ ಅವರ ಸೀಮಂತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಇದನ್ನು ಓದಿ: PHOTOS: ಸಿಹಿ ಸುದ್ದಿ ಹಂಚಿಕೊಂಡ ನಟಿ ಕಾವ್ಯಾ ಗೌಡ; ಅಭಿಮಾನಿಗಳಿಂದ ಶುಭಾಶಯ

ಇನ್ನು, ಸೀಮಂತ ನಟಿ ಕಾವ್ಯ ಸೀಮಂತ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಮಜಾ ಟಾಕೀಸ್​ ಶೋ ಖ್ಯಾತಿಯ ರೆಮೋ ಅವರು ಭಾಗಿಯಾಗಿದ್ದರು. ಜೊತೆಗೆ ನಟಿ ಕಾವ್ಯ ಗೌಡ ಅವರ ಇಡೀ ಕುಟುಂಬಸ್ಥರು ಭಾಗಿಯಾಗಿದ್ದರು. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾವ್ಯ ಗೌಡ; ಹೇಗಿದೆ ನಟಿಯ ಸೀಮಂತ ಕಾರ್ಯಕ್ರಮ..?

https://newsfirstlive.com/wp-content/uploads/2024/01/kavya-3.jpg

Load More