newsfirstkannada.com

VIDEO: ಹೈದರಾಬಾದ್​​ ಸೋಲುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಕಾವ್ಯಾ ಮಾರನ್​​​!

Share :

Published May 26, 2024 at 10:57pm

  ಫೈನಲ್​​ ಪಂದ್ಯದಲ್ಲಿ ಹೈದರಾಬಾದ್​​ ವಿರುದ್ಧ ಗೆದ್ದು ಬೀಗಿದ ಕೆಕೆಆರ್​ ಟೀಮ್​​

  ಐಪಿಎಲ್​​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ 3ನೇ ಬಾರಿ ಚಾಂಪಿಯನ್ ಪಟ್ಟ

  ಹೈದರಾಬಾದ್​ ಸೋಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಕಾವ್ಯಾ ಮಾರನ್​​​!

ಬಹುನಿರೀಕ್ಷಿತ 2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​​ ಮುಕ್ತಾಯವಾಗಿದೆ. ಇಂದು ಚೆನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2024ರ ಐಪಿಎಲ್ ಫೈನಲ್​​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ 3ನೇ ಬಾರಿಗೆ ಐಪಿಎಲ್​ ಟ್ರೋಫಿ ಎತ್ತಿ ಹಿಡಿದಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಹೈದರಾಬಾದ್ 18.3 ಓವರ್​ನಲ್ಲಿ ಕೇವಲ 113 ರನ್​ಗಳಿಗೆ ಆಲೌಟ್​ ಆಗಿತ್ತು. ಏಡನ್​ ಮರ್ಕ್ರಮ್​​ 20, ಪ್ಯಾಟ್​ ಕಮಿನ್ಸ್​ 24, ಬಿಟ್ಟರೆ ಮತೆಲ್ಲರೂ ಸಿಂಗಲ್​ ಡಿಜಿಟ್​​ ನಂಬರ್​ಗೆ ಔಟಾಗಿದ್ರು.

ಇನ್ನು, ಹೈದರಾಬಾದ್ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಕೆಕೆಆರ್​ ಕೇವಲ 10.3 ಓವರ್​​ನಲ್ಲಿ 114 ರನ್​ ಗಳಿಸೋ ಮೂಲಕ ಗೆದ್ದು ಬೀಗಿದೆ. ರಹ್ಮಾನುಲ್ಲಾ ಗುರ್ಬಾಜ್​ 39 ರನ್​​ ಗಳಿಸಿದ್ರು. ವೆಂಕಟೇಶ್​ ಅಯ್ಯರ್​ 26 ಬಾಲ್​ನಲ್ಲಿ 3 ಸಿಕ್ಸರ್​​, 4 ಫೋರ್​ ಸಮೇತ 52 ರನ್​ ಚಚ್ಚಿದ್ರು. ಶ್ರೇಯಸ್​ ಅಯ್ಯರ್​ 6 ರನ್​ ಗಳಿಸಿ ಕೆಕೆಆರ್​ ತಂಡವನ್ನು ಗೆಲ್ಲಿಸಿದ್ರು.

ಕೆಕೆಆರ್​ ತಂಡದ ಪರ ಸ್ಟಾರ್ಕ್​​ 2, ಹರ್ಷಿತ್​ ರಾಣಾ 2, ರಸ್ಸೆಲ್​​ 3, ವೈಭವ್​​​, ಚಕ್ರವರ್ತಿ ಮತ್ತು ಸುನೀಲ್​​ ನರೈನ್​​ ತಲಾ 1 ವಿಕೆಟ್​ ತೆಗೆದರು.

ಅತ್ತ ಹೈದರಾಬಾದ್​ ಸೋಲುತ್ತಿದ್ದಂತೆಯೇ ತಂಡದ ಓನರ್​​ ಕಾವ್ಯಾ ಮಾರನ್​​ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ದುಃಖದ ನಡುವೆಯೂ ಹೈದರಾಬಾದ್​ ತಂಡವನ್ನು ಅಪ್ರಿಷಿಯೇಟ್​ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ.

ಇದನ್ನೂ ಓದಿ: ಹೈದರಾಬಾದ್​​ಗೆ ಹೀನಾಯ ಸೋಲು; 3ನೇ ಬಾರಿಗೆ ಕೆಕೆಆರ್​​ ತಂಡಕ್ಕೆ ಚಾಂಪಿಯನ್ ಪಟ್ಟ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

VIDEO: ಹೈದರಾಬಾದ್​​ ಸೋಲುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಕಾವ್ಯಾ ಮಾರನ್​​​!

https://newsfirstlive.com/wp-content/uploads/2024/05/Kavya-Maran.jpg

Load More