/newsfirstlive-kannada/media/post_attachments/wp-content/uploads/2024/03/KAVYA-MARAN.jpg)
ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ನಿನ್ನೆ ಸಖತ್ ಜೋಶ್ನಲ್ಲಿದ್ದರು. ಅದಕ್ಕೆ ಕಾರಣ ಅವರ ತಂಡದ ಬ್ಯಾಟ್ಸ್ಮನ್ಗಳ ಸ್ಫೋಟಕ ಬ್ಯಾಟಿಂಗ್. ಅಮೋಘ ಬ್ಯಾಟಿಂಗ್ ಕಣ್ತುಂಬಿಕೊಂಡ ಕಾವ್ಯ ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ:ಮುಂಬೈಗೆ ‘ಅವಮಾನ’ದ ಸೋಲು; ಸೋತ ಬಳಿಕ ಕ್ಯಾಪ್ಟನ್ ಪಾಂಡ್ಯ ಸಮರ್ಥನೆ ಹೀಗಿದೆ..!
ಎಸ್ಆರ್ಹೆಚ್ ತಂಡದ ಹೆಡ್, ಅಭಿಷೇಕ್ ಶರ್ಮಾ, ಮಾರ್ಕ್ರಂ ಹಾಗೂ ಕ್ಲಾಸೆನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೌಂಡರಿ, ಸಿಕ್ಸರ್ಗಳನ್ನು ಬಾರಿಸುತ್ತಿದ್ದಂತೆಯೇ ಸಣ್ಣ ಮಕ್ಕಳಂತೆ ಎದ್ದುನಿಂತು ಕುಣಿದು ಸಂಭ್ರಮಿಸಿದ್ದಾರೆ ಕಾವ್ಯ. ಸದ್ಯ ಅವರು ಸಂಭ್ರಮಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.
ಅಂದ್ಹಾಗೆ ನಿನ್ನೆ ಸನ್ರೈಸರ್ಸ್ ಹೈದ್ರಾಬಾದ್ ತಂಡವು ಟಾಸ್ ಸೋತು ಮೊದಲು ಬ್ಯಾಟ್ ಮಾಡಿತ್ತು. ಮೂರು ವಿಕೆಟ್ ಕಳೆದುಕೊಂಡ ಎಸ್ಆರ್ಹೆಚ್ 20 ಓವರ್ಗಳ ಅಂತ್ಯದಲ್ಲಿ 277 ರನ್ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್, 5 ವಿಕೆಟ್ ಕಳೆದುಕೊಂಡು 246 ರನ್ಗಳಿಸಿ ಸೋಲು ಒಪ್ಪಿಕೊಳ್ತು.
https://twitter.com/mrfaisu721847/status/1773136120626204709
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ