42 ವಿಮಾನ ಪ್ರಯಾಣಿಕರ ದುರಂತ ಅಂತ್ಯ.. ಕೊನೇ ಕ್ಷಣದ ವಿಡಿಯೋ ಎದೆ ಝಲ್ ಅನ್ನಿಸುತ್ತೆ!

author-image
admin
Updated On
42 ವಿಮಾನ ಪ್ರಯಾಣಿಕರ ದುರಂತ ಅಂತ್ಯ.. ಕೊನೇ ಕ್ಷಣದ ವಿಡಿಯೋ ಎದೆ ಝಲ್ ಅನ್ನಿಸುತ್ತೆ!
Advertisment
  • ವಿಮಾನವನ್ನ ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಮನವಿ ಮಾಡಿದ ಪೈಲಟ್
  • ವಿಮಾನ ಅಪಘಾತಗಳಲ್ಲಿ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ
  • ವಿಮಾನದಲ್ಲಿದ್ದ 42 ಪ್ರಯಾಣಿಕರು ಕ್ಷಣ ಮಾತ್ರದಲ್ಲಿ ಸುಟ್ಟು ಭಸ್ಮ!

ಕಜಕಿಸ್ತಾನದ ಅಕಟು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘನ ಘೋರ ದುರಂತವೊಂದು ಸಂಭವಿಸಿದೆ. 72 ಮಂದಿ ಪ್ರಯಾಣಿಕರಿದ್ದ ಅಜರ್ ಬೈಜಾನ್ ಏರ್‌ಲೈನ್ಸ್ J2-8243 ವಿಮಾನ ಪತನವಾಗಿದ್ದು, 42 ಪ್ರಯಾಣಿಕರು ಕ್ಷಣ ಮಾತ್ರದಲ್ಲಿ ಸುಟ್ಟು ಭಸ್ಮವಾಗಿದ್ದಾರೆ. ವಿಮಾನ ಪತನವಾಗುವ ಕೊನೇ ಕ್ಷಣದ ದೃಶ್ಯ ಸೆರೆಯಾಗಿದ್ದು, ಮೈಜುಮ್ಮೆನ್ನಿಸುವಂತಿದೆ.

ಕಜಕಿಸ್ತಾನದ ಭಯಾನಕ ವಿಮಾನ ದುರಂತಕ್ಕೆ ಇಂದು ಇಡೀ ವಿಶ್ವವೇ ಮರುಗಿದೆ. ಅಜರ್ ಬೈಜಾನ್ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಕಜಕಿಸ್ತಾನದ ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನ್ಯ್ ಹೋಗುತ್ತಿತ್ತು. ಮಂಜು ಕವಿದ ವಾತಾವರಣದ ಹಿನ್ನೆಲೆಯಲ್ಲಿ ಪೈಲಟ್‌ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಲು ಮನವಿ ಮಾಡಿದ್ದಾರೆ. ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಮನವಿ ಮಾಡಿದ ಕೆಲವೇ ಹೊತ್ತಿನಲ್ಲಿ ವಿಮಾನ ಪತನವಾಗಿದೆ.

ಇದನ್ನೂ ಓದಿ: VIDEO: 72 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ; ಕಜಕಿಸ್ತಾನದಲ್ಲಿ ಭಾರೀ ದುರಂತ 


">December 25, 2024

ಕಜಕಿಸ್ತಾನದ ವಿಮಾನದಲ್ಲಿ ಒಟ್ಟು 72 ಪ್ರಯಾಣಿಕರಿದ್ದರು. ವಿಮಾನ ಪತನದಲ್ಲಿ ಅದೃಷ್ಟವಶಾತ್ 28 ಮಂದಿ ಪ್ರಯಾಣಿಕರು ಬಚಾವ್ ಆಗಿದ್ದಾರೆ. ವಿಮಾನ ಅಪಘಾತಗಳಲ್ಲಿ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ. ಆದರೆ ಕಜಕಿಸ್ತಾನದ ಈ ವಿಮಾನ ಪತನದ ಬಳಿಕ 28 ಪ್ರಯಾಣಿಕರು ಪ್ರಾಣಾಪಾಯದಿಂದ ಬದುಕಿರೋದು ಪವಾಡವೇ ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ ವಿಮಾನ ಪತನದಿಂದ 42ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment