/newsfirstlive-kannada/media/post_attachments/wp-content/uploads/2025/05/S_Sreesanth.jpg)
ಟೀಮ್ ಇಂಡಿಯಾದ ಮಾಜಿ ಪೇಸ್ ಬೌಲರ್ ಎಸ್ ಶ್ರೀಶಾಂತ್ ಅವರನ್ನು ಕ್ರಿಕೆಟ್ಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಂದ ಕೇರಳ ಕ್ರಿಕೆಟ್ ಅಸೋಷಿಯೇಷನ್ (ಕೆಸಿಎ) ಹೊರಗಿಟ್ಟಿದೆ. ಸುಳ್ಳು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೆಸಿಎ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
2025ರ ಚಾಂಪಿಯನ್ ಟ್ರೋಫಿ ವೇಳೆ ಭಾರತ ತಂಡದಿಂದ ಕೇರಳದ ಯುವ ಪ್ಲೇಯರ್ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಡಲಾಗಿತ್ತು. ಈ ಸಂಬಂಧ ಕೆಸಿಎ ವಿರುದ್ಧ ಎಸ್.ಶ್ರೀಶಾಂತ್ ಅವರು ಸುಳ್ಳು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ತಿಳಿದು ಬಂದಿತ್ತು. ಇದೇ ಕಾರಣದಿಂದ ಶ್ರೀಶಾಂತ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:RCB ಗೆಲುವಿನ ಹಿಂದಿನ ಹೀರೋಗಳು ಯಾರು..? ಕಿಂಗ್ ಕೊಹ್ಲಿ, ಫಿಲ್ ಸಾಲ್ಟ್ ಅಲ್ಲವೇ ಅಲ್ಲ!
ಕೇರಳ ಕ್ರಿಕೆಟ್ ಲೀಗ್ನಲ್ಲಿ ಎಸ್.ಶ್ರೀಶಾಂತ್ ಅವರು ಅರಿಯಾಸ್ ಕೊಲ್ಲಂ ಸೈಲಾರ್ಸ್ ಫ್ರಾಂಚೈಸಿಯ ಸಹ ಮಾಲೀಕತ್ವ ಹೊಂದಿದ್ದಾರೆ. ಶ್ರೀಶಾಂತ್ ಅವರು ನೀಡಿದ ಹೇಳಿಕೆ ಸಂಬಂಧ ಕೆಸಿಎ ಏಪ್ರಿಲ್ 30 ರಂದು ಸಾಮಾನ್ಯ ಸಭೆಯನ್ನು ಕೈಗೊಂಡಿತ್ತು. ಇದೇ ಸಭೆಯಲ್ಲಿ ಎಸ್.ಶ್ರೀಶಾಂತ್ ಅವರನ್ನು 3 ವರ್ಷಗಳ ಕಾಲ ಕೆಸಿಎ ಸಂಬಂಧಿಸಿದ ಕ್ರಿಕೆಟ್‌ನ ಎಲ್ಲ ಚಟುವಟಿಕೆಗಳಿಂದ ಹೊರಗಿಡಲಾಗಿದೆ ಎನ್ನುವ ನಿರ್ಣಯ ತೆಗೆದುಕೊಳ್ಳಲಾಗಿದೆ.
ಯುವ ಕ್ರಿಕೆಟರ್ ಸಂಜು ಸ್ಯಾಮ್ಸನ್ ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್, ರೇಜಿ ಲುಕೊಸ್ ಹಾಗೂ ಟ್ವಿಂಟಿ ಫೋರ್ ನ್ಯೂಸ್ ಚಾನೆಲ್ ನಿರೂಪಕ ಯಾವುದೇ ಆಧಾರ ಇಲ್ಲದೇ ಕೆಸಿಎ ವಿರುದ್ಧ ಆರೋಪಿಸಿದ್ದಾರೆ. ಹೀಗಾಗಿ ಕಾನೂನು ಕ್ರಮದ ಮೂಲಕ ಪರಿಹಾರ ಕೇಳಲಾಗುತ್ತದೆ ಎಂದು ಕೆಸಿಎ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ