newsfirstkannada.com

ಕೆಸಿಆರ್​​​ಗೆ ಬಿಗ್​ ಶಾಕ್​​.. ಇಂದು 10ಕ್ಕೂ ಹೆಚ್ಚು TRS ನಾಯಕರು ಕಾಂಗ್ರೆಸ್​ ಸೇರ್ಪಡೆ

Share :

Published June 26, 2023 at 6:57pm

Update June 26, 2023 at 7:41pm

    ಸದ್ಯದಲ್ಲೇ ನಡೆಯಲಿದೆ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ

    ಸಿಎಂ ಕೆಸಿಆರ್​​ಗೆ ಟಕ್ಕರ್​ ಕೊಡಲು ಮಲ್ಲಿಕಾರ್ಜುನ್​ ಖರ್ಗೆ ಬಿಗ್​​ ಪ್ಲಾನ್​

    ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಿಎಂ ಕೆಸಿಆರ್​ಗೆ ಮಾಸ್ಟರ್​ ಸ್ಟ್ರೋಕ್​​​

ಹೈದರಾಬಾದ್​: ಸದ್ಯದಲ್ಲೇ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಮೂರನೇ ಬಾರಿಗೆ ಗೆದ್ದು ಅಧಿಕಾರಕ್ಕೆ ಬರಲು ಸಿಎಂ ಕೆ. ಚಂದ್ರಶೇಖರ್​ ರಾವ್​ ನೇತೃತ್ವದ ಟಿಆರ್​ಎಸ್​​ ಪಾರ್ಟಿ ಮುಂದಾಗಿದೆ. ಈ ಮಧ್ಯೆ ಸಿಎಂ ಕೆಸಿಆರ್​​ಗೆ ಆಘಾತವೊಂದು ಎದುರಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ ಟಿಆರ್​ಎಸ್​​ ಪಕ್ಷದ ಹಲವರು ಕಾಂಗ್ರೆಸ್​ ಸೇರ್ಪಡೆ ಆಗಿದ್ದಾರೆ. ಇನ್ನೂ ಹಲವರು ಸದ್ಯದಲ್ಲೇ ಸೇರಲಿದ್ದಾರೆ ಎಂದು ವರದಿಯಾಗಿದೆ.

ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ವರಿಷ್ಠ ರಾಹುಲ್​ ಗಾಂಧಿ ಸಮ್ಮುಖದಲ್ಲೇ ಮಾಜಿ ಸಚಿವ ಪೊಂಗುಲೇಟಿ ಶ್ರೀನಿವಾಸ್​​ ರೆಡ್ಡಿ, ಜುಪಲ್ಲಿ ಕೃಷ್ಣಾ ರಾವ್ ನೇತೃತ್ವದಲ್ಲಿ ಹಲವು ಟಿಆರ್​ಎಸ್​ ನಾಯಕರು ಕಾಂಗ್ರೆಸ್​ ಸೇರಿದ್ದಾರೆ. ಮುಂದಿನ ತಿಂಗಳು ಜುಲೈನ ಮೊದಲ ವಾರದಲ್ಲೇ ಟಿಆರ್​ಎಸ್​​ ಪಕ್ಷದ ಇನ್ನೂ ಕೆಲವು ನಾಯಕರು, ಬಿಜೆಪಿಯ ಹಲವರು ಕಾಂಗ್ರೆಸ್​​ ಸೇರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಈಗಾಗಲೇ ರಾಹುಲ್​ ಗಾಂಧಿ, ಮಲ್ಲಿಕಾರ್ಜುನ್​ ಖರ್ಗೆ ಅವರೊಂದಿಗೆ ಪೊಂಗುಲೇಟಿ ಶ್ರೀನಿವಾಸ್​​ ರೆಡ್ಡಿ, ಜುಪಲ್ಲಿ ಕೃಷ್ಣಾ ರಾವ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಜುಲೈನ ಮೊದಲ ವಾರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್​ ಸೇರಿಸಿ, ಮುಂದಿನ ಚುನಾವಣೆಯಲ್ಲಿ ಹೇಗಾದರೂ ಟಿಆರ್​ಎಸ್​ ಪಕ್ಷವನ್ನು ಸೋಲಿಸಲೇಬೇಕು ಎಂದು ಜಿದ್ದಿಗೆ ಬಿದ್ದಿದ್ದಾರೆ ಎನ್ನುತ್ತಿವೆ ಮೂಲಗಳು.

ತೆಲಂಗಾಣ ಎಲೆಕ್ಷನ್​​ ಮೇಲೆ ಕಾಂಗ್ರೆಸ್​ ಕಣ್ಣು

ಐದು ಗ್ಯಾರಂಟಿಗಳನ್ನು ಘೋಷಿಸಿ ಕರ್ನಾಟಕದಲ್ಲಿ ಗೆದ್ದಿರುವ ಕಾಂಗ್ರೆಸ್​, ಇಡೀ ದೇಶಾದ್ಯಂತ ಇದೇ ತಂತ್ರವನ್ನು ಬಳಸಲು ಮುಂದಾಗಿದೆ. ಮುಂದಿನ ಲೋಕಸಭಾ ಚುನಾವಣೆ ಗೆಲ್ಲವು ಹಲವು ಮಹತ್ವದ ಗ್ಯಾರಂಟಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಎದುರಾಗೋ ತೆಲಂಗಾಣ ಚುನಾವಣೆಯಲ್ಲೂ ಇದೇ ಗ್ಯಾರಂಟಿಗಳನ್ನು ಘೋಷಿಸಿ ಗೆಲ್ಲುವುದು ಕಾಂಗ್ರೆಸ್​ ಪ್ಲಾನ್​​. ಅದಕ್ಕಾಗಿಯೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ರಾಜ್ಯದಲ್ಲಿ ಸಮಪರ್ಕವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಸ್​ ಮಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಸಿಆರ್​​​ಗೆ ಬಿಗ್​ ಶಾಕ್​​.. ಇಂದು 10ಕ್ಕೂ ಹೆಚ್ಚು TRS ನಾಯಕರು ಕಾಂಗ್ರೆಸ್​ ಸೇರ್ಪಡೆ

https://newsfirstlive.com/wp-content/uploads/2023/06/CM-KCR.jpg

Load More