/newsfirstlive-kannada/media/post_attachments/wp-content/uploads/2025/05/rishma.jpg)
ಕನ್ನಡದ ನಟಿ ರೀಷ್ಮಾ ನಾಣಯ್ಯ ನಿವಾಸದಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಇಂದು ಸ್ಯಾಂಡಲ್ವುಡ್ ನಟಿ ರೀಷ್ಮಾ ನಾಣಯ್ಯ ಅವರ ಅಕ್ಕನ ಮದುವೆ ನಡೆದಿದೆ.
ಅಕ್ಕನ ಅದ್ಧೂರಿ ಮದುವೆ ಕಾರ್ಯಕ್ರಮದಲ್ಲಿ ತಂಗಿ ರೀಷ್ಮಾ ನಾಣಯ್ಯ ಲಕ ಲಕ ಅಂತ ಮಿಂಚಿದ್ದಾರೆ. ಹಳದಿ ಬಣ್ಣದ ಸೀರೆಯನ್ನು ತೊಟ್ಟು ಕ್ಯೂಟ್ ಆಗಿ ನಗುತ್ತಿದ್ದಾರೆ.
ಸದ್ಯ ಅಕ್ಕನ ಮದುವೆ ಸಂಭ್ರಮದಲ್ಲಿ ರೀಷ್ಮಾ ನಾಣಯ್ಯ ಬ್ಯುಸಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇದನ್ನೂ ಓದಿ: ‘ನನ್ನ ಮಗಳು..’ ಬೇಹುಗಾರಿಕೆ ಆರೋಪ ಹೊತ್ತ ಜ್ಯೋತಿ ಮಲ್ಹೋತ್ರ ಬಗ್ಗೆ ತಂದೆ ಏನಂದ್ರು..?
ಇನ್ನೂ, ಮೂಲತಃ ಕೊಡಗಿ ಕುವರಿಯಾಗಿರೋ ನಟಿ ರೀಷ್ಮಾ ನಾಣಯ್ಯ ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ಮೂಲಕ ರೀಷ್ಮಾ ನಾಣಯ್ಯ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.
ಏಕ್ ಲವ್ ಯಾ ಚಿತ್ರದಲ್ಲಿ ನಟಿಸುವಾಗ ಅವರಿಗಿನ್ನು 17 ವರ್ಷವಾಗಿಯತ್ತು. ಸಿನಿಮಾ ಬಿಡುಗಡೆಯಾದಾಗ 18 ವರ್ಷವಾಗಿತ್ತು. ಬಳಿಕ ರಾಣಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ನಂತರ ಗೋಲ್ಡ್ ಸ್ಟಾರ್ ಗಣೇಶ್ ನಟನೆಯ ಬಾನ ದಾರಿಯಲ್ಲಿ ಚಿತ್ರದಲ್ಲಿ ನಟಿಸಿದ್ದರು.
ಚಿಕ್ಕವಯಸ್ಸಿನಲ್ಲೇ ಕನ್ನಡದ ಸ್ಟಾರ್ ನಟರ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿರುವ ರೀಷ್ಮಾ, ಸ್ಟಾರ್ ನಟ ಉಪೇಂದ್ರ ಜೊತೆಗೆ ಯುಐ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದಲ್ಲದೇ ಜೋಗಿ ಪ್ರೇಮ್ ಹಾಗೂ ಧ್ರುವಾ ಸರ್ಜಾ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಕೆಡಿ- ದಿ ಡೆವಿಲ್' ಚಿತ್ರದಲ್ಲಿ 'ಮಚ್ಚುಲಕ್ಷ್ಮೀ' ಎಂಬ ಖಡಕ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ನಟನೆಯ ಅಣ್ಣ From Mexico ಹಾಗೂ ಧನ್ವೀರ್ ನಟನೆಯ ವಾಮನ ಸಿನಿಮಾಗಳಲ್ಲೂ ಅಭಿನಯ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ