newsfirstkannada.com

‘ಹಾವೇರಿ ಟಿಕೆಟ್ ಮುಗಿದ ಅಧ್ಯಾಯ, ಆದರೆ..’ ಈಶ್ವರಪ್ಪ ಪುತ್ರ ಕಾಂತೇಶ್ ಕೊಟ್ರು ಸುಳಿವು..!

Share :

Published March 15, 2024 at 6:37pm

    ಹಾವೇರಿ ಟಿಕೆಟ್ ನೀಡದಿದ್ದಕ್ಕೆ ಈಶ್ವರಪ್ಪ ನೇತೃತ್ವದಲ್ಲಿ ಸಭೆ

    ಸಮಾಜದ ಮುಖಂಡರು, ಬೆಂಬಲಿಗರು ಭಾಗಿಯಾಗಿದ್ದಾರೆ

    ಈಶ್ವರಪ್ಪ ಚುನಾವಣೆ ಸ್ಪರ್ಧೆ ಸಂಬಂಧ ಮಹತ್ವದ ಚರ್ಚೆ

ಶಿವಮೊಗ್ಗ: ಹಾವೇರಿ ಟಿಕೆಟ್ ಕೈತಪ್ಪಿದೆ, ಅದು ಈಗ ಮುಗಿದ ಅಧ್ಯಾಯ ಎಂದು ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್ ಹೇಳಿದ್ದಾರೆ.

ಹಾವೇರಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಇವತ್ತು ಕೆ.ಎಸ್​.ಈಶ್ವರಪ್ಪ ಬೆಂಬಲಿಗರು ಮಹತ್ವದ ಸಭೆ ನಡೆಸುತ್ತಿದ್ದಾರೆ. ಈ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿರುವ ಕಾಂತೇಶ್.. ಕೆಲವೇ ಕ್ಷಣದಲ್ಲಿ ಸಭೆ ಆರಂಭ ಆಗಲಿದೆ. ಈ ಸಭೆಯಲ್ಲಿ ಎಲ್ಲಾ ಸಮಾಜದ ಮುಖಂಡರು ಬೆಂಬಲಿಗರು ಭಾಗಿಯಾಗಲಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ತೆಗೆದುಕೊಳ್ತೇವೆ ಎಂದಿದ್ದಾರೆ.

ರಮೇಶ್ ಜಾರಕಿಹೋಳಿ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರ ಬೆಂಬಲ ಈಶ್ವರಪ್ಪಗೆ ಇದೆ. ಈಶ್ವರಪ್ಪ ಸ್ಪರ್ಧೆ ಕುರಿತು ಈಗಲೇ ನಾನು ಏನೂ ಹೇಳುವುದಿಲ್ಲ. ಇದು ತಂದೆ-ಮಗನ ನಿರ್ಧಾರವಲ್ಲ. ಅವರ ಬೆಂಬಲಿಗರು, ಮುಖಂಡರು ಮುಂದಿನ ನಿರ್ಧಾರ ಮಾಡಲಿದ್ದಾರೆ. ಕಳೆದ ಒಂದು ವರ್ಷಗಳಿಂದ ನಡೆದ ಬೆಳವಣಿಗೆಗಳು ನನ್ನ ತಂದೆಗೆ ಆಘಾತ ಆಗಿದೆ. ಜನರ ಆಶೀರ್ವಾದ ಮಾಡಿದರು. ಪಕ್ಷಕ್ಕೆ ಈಶ್ವರಪ್ಪ ಆಗಲಿ, ಈಶ್ವರಪ್ಪ ಕುಟುಂಬವಾಗಲಿ, ಪಕ್ಷಕ್ಕೆ ಮುಜುಗರ ತಂದಿಲ್ಲ. ಒಂದು ವೇಳೆ ಅವರು ತಂದಿದ್ದರೆ ನೀವು ಹೇಳಿದ ಹಾಗೆ ನಾನು ಕೇಳ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹಾವೇರಿ ಟಿಕೆಟ್ ಮುಗಿದ ಅಧ್ಯಾಯ, ಆದರೆ..’ ಈಶ್ವರಪ್ಪ ಪುತ್ರ ಕಾಂತೇಶ್ ಕೊಟ್ರು ಸುಳಿವು..!

https://newsfirstlive.com/wp-content/uploads/2024/03/KE-KANTESH.jpg

Load More