/newsfirstlive-kannada/media/post_attachments/wp-content/uploads/2024/07/KEA.jpg)
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪೋರ್ಟಲ್ನಲ್ಲಿ ಪ್ರಕಟಿಸಿರುವ ಯುಜಿಸಿಇಟಿ-2024 ಅಭ್ಯರ್ಥಿಗಳ ಮಾಹಿತಿಯಲ್ಲಿ ಕಂಡು ಬಂದಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕೆಇಎ ಅವಕಾಶ ನೀಡಿದೆ. ಕೆಇಎ ಆರಂಭಿಸಿರುವ 3 ದಿನಗಳ ಉಪಕ್ರಮಕ್ಕೆ ಮೊದಲ ದಿನವಾದ ಇಂದು ನಿರೀಕ್ಷೆಗೂ ಮೀರಿದ ಸ್ಪಂದನೆ ಕಂಡು ಬಂದಿತು. ಕೆಇಎ ಅಧಿಕಾರಿಗಳ ಅಂದಾಜು ಮೀರಿ ಸುಮಾರು 2,400 ಅಭ್ಯರ್ಥಿಗಳು ಮಲ್ಲೇಶ್ವರದಲ್ಲಿರುವ ಕಚೇರಿಗೆ ಖುದ್ದು ಹಾಜರಾಗಿ ದೋಷಗಳನ್ನು ಸರಿಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅಬ್ಬಾ.. ಅಂಬಾನಿ ಸೊಸೆ ಧರಿಸಿದ್ದ ಲೆಹೆಂಗಾವೆಲ್ಲ ಅಪ್ಪಟ ಚಿನ್ನ.. ಚಿನ್ನ; ಇದರಲ್ಲಿರೋ ಶ್ಲೋಕದ ವಿಶೇಷತೆ ಏನು?
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ನೇತೃತ್ವ ಪ್ರಕ್ರಿಯೆ
ಅಭ್ಯರ್ಥಿಗಳು ಅರ್ಜಿಯಲ್ಲಿ ಸಲ್ಲಿಸಿದ್ದ ವಿವರಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ವೆಬ್ ಸರ್ವೀಸ್ ಮೂಲಕ ಪಡೆದ ಮಾಹಿತಿಯನ್ನು ತನ್ನ ಪೋರ್ಟಲ್ನಲ್ಲಿ ಜೂ.29ರಂದು ಪ್ರಕಟಿಸಿದ್ದ ಕೆಇಎ, ಅದರಲ್ಲಿ ಯಾವುದೇ ತಪ್ಪು ಕಂಡುಬಂದರೆ ಅಂಥವರು ಜುಲೈ 4 ರಿಂದ 6ರ ಒಳಗೆ ಕೆಇಎ ಕಚೇರಿಗೆ ಖುದ್ದು ಹಾಜರಾಗಿ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಆ ಪ್ರಕಾರ, 1 ಲಕ್ಷಕ್ಕಿಂತ ಕಡಿಮೆ ಱಂಕ್‌ನವರು ಮೊದಲ ದಿನ ಹಾಜರಾಗಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರ ನೇತೃತ್ವದಲ್ಲಿ ಈ ಪ್ರಕ್ರಿಯೆ ನಡೆಯಿತು.
ಇದನ್ನೂ ಓದಿ: 9 ಕಿ.ಮೀ ವರ್ಲ್ಡ್‌ಕಪ್ ಟ್ರೋಫಿ ಮೆರವಣಿಗೆ.. ವಾಂಖೇಡೆಗೆ ಹರಿದು ಬಂದ ಜನಸಾಗರ; ಉಚಿತ ಪ್ರವೇಶ!
ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಯುಜಿಸಿಇಟಿ ಅರ್ಜಿಯಲ್ಲಿ ತಪ್ಪುಗಳನ್ನು ಎಸಗಿದ್ದನ್ನು ಗಣನೆಗೆ ತೆಗೆದುಕೊಂಡು ಈ ಅಂತಿಮ ಆವಕಾಶ ನೀಡಲಾಗಿತ್ತು. ಗ್ರಾಮೀಣ ವಿದ್ಯಾಭ್ಯಾಸ, ಕನ್ನಡ ಮಾಧ್ಯಮದಲ್ಲಿ ಕಲಿಕೆ, ಹೈದರಾಬಾದ್ ಕರ್ನಾಟಕ ಕೋಟಾ, ಪ್ರವರ್ಗಗಳ ಉಲ್ಲೇಖದಲ್ಲಿ ಬದಲಾವಣೆ ಸೇರಿದಂತೆ ಹಲವು ಬಗೆಯ ತಪ್ಪುಗಳನ್ನು ಅಭ್ಯರ್ಥಿಗಳು ಎಸಗಿದ್ದರು. ಈ ತಪ್ಪುಗಳ ತಿದ್ದುಪಡಿ ಸಾಧ್ಯವಾಗುವ ಬಗ್ಗೆ ಅಭ್ಯರ್ಥಿಗಳಿಗಿದ್ದ ಆತಂಕ ಕೆಇಎ ಹಮ್ಮಿಕೊಂಡಿರುವ ಉಪಕ್ರಮದಿಂದಾಗಿ ನಿವಾರಣೆ ಆಗಿರುವುದು ಮೊದಲ ದಿನ ಕಂಡುಬಂತು.
ವೇಳಾಪಟ್ಟಿಯ ಪ್ರಕಾರ ಖುದ್ದು ಹಾಜರಾಗಬೇಕು
ಅಭ್ಯರ್ಥಿಗಳಿಗೆ ತಿದ್ದುಪಡಿ ಮಾಡಲು ಅನುವು ಮಾಡಿಕೊಡುವುದಕ್ಕಾಗಿ ಕಚೇರಿ ಆವರಣದಲ್ಲಿ ಎರಡು ದೊಡ್ಡ ಅಳತೆಯ ಎಲ್ಇಡಿ ಪರದೆಗಳನ್ನು ಹಾಕಲಾಗಿತ್ತು. ಕ್ಯುಆರ್ ಕೋಡ್ ನೆರವಿನಿಂದ ಅದರಲ್ಲಿ ಅಭ್ಯರ್ಥಿಗಳಿಗೆ ತಿದ್ದುಪಡಿಗೆ ಅನುಸರಿಸಬೇಕಾದ ವಿಧಾನದ ಬಗ್ಗೆ ತಿಳಿಸಿಕೊಡಲಾಯಿತು. 1.8 ಲಕ್ಷಕ್ಕಿಂತ ಒಳಗಿನ ರ‍್ಯಾಂಕ್‌ನವರು ಜುಲೈ 5ರಂದು ಹಾಗೂ 1.8 ಲಕ್ಷಕ್ಕಿಂತ ಮೇಲ್ಪಟ್ಟ ರ‍್ಯಾಂಕ್‌ನವರು ಜುಲೈ 6ರಂದು ವೆಬ್ ಸೈಟಿನಲ್ಲಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಖುದ್ದು ಹಾಜರಾಗಬೇಕು ಎಂದು ವಿವರಿಸಲಾಗಿದೆ.
ಇದನ್ನೂ ಓದಿ: BREAKING: ನಟ ದರ್ಶನ್‌ಗೆ ಮತ್ತೆ ಜೈಲೇ ಗತಿ.. ನ್ಯಾಯಾಂಗ ಬಂಧನ ವಿಸ್ತರಣೆ; ಎಷ್ಟು ದಿನ?
ಮಾಹಿತಿ ತಿದ್ದುಪಡಿಗೆ ಮೊದಲ ದಿನ ಹೆಚ್ಚಿನ ಸ್ಪಂದನದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಹೆಚ್.ಪ್ರಸನ್ನ ಅವರು, ಶುಕ್ರವಾರ ಮತ್ತು ಶನಿವಾರವೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವ ನಿರೀಕ್ಷೆ ಇದೆ. ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು ಬೆಳಗ್ಗೆ 8ರಿಂದಲೇ ಪರಿಶೀಲನೆ ಆರಂಭಿಸಲಾಗುವುದು. ಅರ್ಜಿಗಳಲ್ಲಿ ದೋಷ ಇಲ್ಲದವರು ಕೂಡ ಇಂದು ಬಂದಿದ್ದು ಅದರಿಂದ ಅನಾನುಕೂಲ ಆಗುತ್ತದೆ. ಅಂತಹವರು ಕೆಇಎಗೆ ಬರುವುದು ಬೇಡ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ