CET ಯಲ್ಲಿ ಅಕ್ರಮ ತಡೆಯಲು ಹೊಸ ಪ್ಲಾನ್.. AI ಆಧಾರಿತ ಅರ್ಜಿ ಪ್ರಕ್ರಿಯೆ ಜಾರಿ

author-image
Bheemappa
Updated On
CET ಯಲ್ಲಿ ಅಕ್ರಮ ತಡೆಯಲು ಹೊಸ ಪ್ಲಾನ್.. AI ಆಧಾರಿತ ಅರ್ಜಿ ಪ್ರಕ್ರಿಯೆ ಜಾರಿ
Advertisment
  • ಸೀಟು ಬ್ಲಾಕಿಂಗ್ ಅಕ್ರಮಗಳನ್ನ ತಡೆಯಲು ಕೆಇಎ ಹೊಸ ಪ್ಲಾನ್
  • ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆಗೆ ಕೆಇಎ ಇಂದ ಹೊಸ ವಿಧಾನ ಜಾರಿ
  • ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಓದಲೇಬೇಕಾದ ಸ್ಟೋರಿ ಇದು

ಬೆಂಗಳೂರು: ಸೀಟುಗಳ ಬ್ಲಾಕಿಂಗ್ ಅಕ್ರಮಗಳನ್ನ ತಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹೊಸ ಪ್ಲಾನ್ ರೂಪಿಸಿದೆ. ಇನ್ಮುಂದೆ ವೈದ್ಯಕೀಯ, ಎಂಜಿನಿಯರಿಂಗ್‌, ಮೆಡಿಕಲ್, ದಂತ ವೈದ್ಯಕೀಯ, ಆಯುಷ್​ ಕೋರ್ಸ್​ ಸೇರಿ ವಿವಿಧ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೆಇಎ ಜಾರಿ ಮಾಡಿದೆ.

ಕೆಇಎ ನಡೆಸುತ್ತಿದ್ದ ಕೌನ್ಸಿಲಿಂಗ್‌ನಲ್ಲಿ ಅಕ್ರಮ ನಡೆದಿದೆಂದು ಆರೋಪಿಸಿ, ಸೀಟುಗಳನ್ನು ಮೊದಲೇ ಬ್ಲಾಕ್ ಮಾಡಿ, ಕರ್ನಾಟಕದ ವಿದ್ಯಾರ್ಥಿಗಳನ್ನು ಬಿಟ್ಟು ಹೊರ ರಾಜ್ಯದವರಿಗೆ ಮಾರಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇನ್ಮುಂದೆ ಈ ದೂರುಗಳು ಕೇಳಿ ಬರುವುದಿಲ್ಲ. ಏಕೆಂದರೆ ಇದಕ್ಕೆ ಕೆಇಎ ಹೊಸ ಯೋಜನೆ ರೂಪಿಸಿದ್ದು ಎಐ ಆಧಾರಿತ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಜಾರಿ ತಂದಿದೆ. ಇದರಿಂದ ಸೀಟುಗಳ ಬ್ಲಾಕಿಂಗ್ ಅಕ್ರಮ ಮಾಡಲು ಆಗಲ್ಲ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಹೆಚ್‌.ಪ್ರಸನ್ನ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: KPSC ಇಂದ ಅಧಿಸೂಚನೆ.. ಕರ್ನಾಟಕ ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ

publive-image

ಸಿಇಟಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪುಸ್ತಕವನ್ನು ಸಂಪೂರ್ಣವಾಗಿ ಓದಿ, ಮನನ ಮಾಡಿಕೊಂಡ ನಂತರವೇ ಅರ್ಜಿ ಭರ್ತಿ ಮಾಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಅವರ ಮಾಹಿತಿ ದುಬರ್ಳಕೆ ತಡೆಯುವ ಉದ್ದೇಶದಿಂದ ಎಐ ಅನ್ನು ಜಾರಿ ಮಾಡಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಪ್ರತಿ ಹಂತದಲ್ಲೂ ಓಟಿಪಿ ಹಾಗೂ ಮುಖ ಚಹರೆಯ ದೃಢೀಕರಣದ ನಂತರ ಅರ್ಜಿಗೆ ಲಾಗಿನ್‌ ಮಾಡಬೇಕಾಗುತ್ತದೆ. ಎಂಜಿನಿಯರಿಂಗ್‌ ಅಲ್ಲದೆ, ನೀಟ್‌ (ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌ ಕೋರ್ಸ್‌ಗಳ) ಮೂಲಕ ಪ್ರವೇಶ ಬಯಸುವವರು ಅರ್ಜಿ ಸಲ್ಲಿಸಬೇಕು.

ಪ್ರಮುಖ ಅಂಶಗಳು

  • ಅರ್ಜಿ ಸಲ್ಲಿಸುವಾಗ ಇತ್ತೀಚಿನ ಭಾವಚಿತ್ರ ಹಾಗೂ ಸಹಿ ಇರಬೇಕು (ಜೆಪಿಜಿ ರೂಪ). (ಯಾವುದೇ ಪ್ರಮಾಣ ಪತ್ರ, ದಾಖಲೆ ಅಪ್‌ಲೋಡ್‌ ಮಾಡಂಗಿಲ್ಲ)
  • ಅರ್ಜಿ ಭರ್ತಿ ಮಾಡುವಾಗ ಅಭ್ಯರ್ಥಿಗಳು ಯಾವ ಮೀಸಲಾತಿಗಳನ್ನು ಪಡೆಯಲು ಬಯಸುತ್ತೀರಿ ಎಂಬುದನ್ನು ಮಾತ್ರ ತಪ್ಪದೇ ಅರ್ಜಿಯಲ್ಲಿ ನಮೂದಿಸಬೇಕು
  • ಮೀಸಲಾತಿ ಪ್ರಮಾಣ ಪತ್ರದಲ್ಲಿನ ಆರ್‌.ಡಿ ಸಂಖ್ಯೆಯನ್ನು ತಪ್ಪದೆ ಬರೆದಿರಬೇಕು
  • ಅರ್ಜಿ ಭರ್ತಿಗೂ ಮುನ್ನ ಎಸ್‍ಎಸ್‍ಎಲ್‍ಸಿ ಅಂಕ ಪಟ್ಟಿ, ಮೀಸಲಾತಿ ಪ್ರಮಾಣ ಪತ್ರಗಳ ಪ್ರತಿಗಳನ್ನು ತಮ್ಮೊಡನೆ ಇರಬೇಕು
  • ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‍ಸೈಟ್- https://cetonline̤̤̤karnataka̤gov̤in̤̤/kea/ ಗೆ ಭೇಟಿ ನೀಡಿ, ಖಾಲಿ ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು ತಮ್ಮ ಪೋಷಕರೊಂದಿಗೆ ಸಮಾಲೋಚಿಸಿದ ನಂತರ ಅರ್ಜಿ ಭರ್ತಿ ಮಾಡಬೇಕು.
  • ಅರ್ಜಿ ಅಂತಿಮಗೊಳಿಸುವುದಕ್ಕೂ ಮುನ್ನ ಪ್ರಿಂಟ್​ಔಟ್‌ ತೆಗೆದುಕೊಂಡು ಒಮ್ಮೆ ಓದಬೇಕು.
  • ಸಂಪೂರ್ಣವಾದ ಮಾಹಿತಿಗೆ (ಅರ್ಹತೆ ಷರತ್ತುಗಳು, ಶೈಕ್ಷಣಿಕ ಮಾನದಂಡಗಳು ಇತ್ಯಾದಿ) ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಿರುವ ಇ-ಮಾಹಿತಿ ಪುಸ್ತಕವನ್ನು ಓದಿಕೊಳ್ಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment