/newsfirstlive-kannada/media/post_attachments/wp-content/uploads/2025/01/JOB_KEA.jpg)
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿವಿಧ ಹುದ್ದೆಗಳ ನೇಮಕಾತಿಗಾಗಿ ಸಂಕ್ಷಿಪ್ತ ಅಧಿಸೂಚನೆಯನ್ನು ಈ ಹಿಂದೆ ಹೊರಡಿಸಿತ್ತು. ಆದರೆ ವಿವರವಾದ ಅಧಿಸೂಚನೆಯನ್ನು ನಂತರ ಹೊರಡಿಸಲಾಗುವುದಾಗಿ ಈಗ ಹೇಳಿದೆ. ಯವ್ಯಾವ ಹುದ್ದೆಗಳಿಗೆ ಯಾಕೆ ಈ ವರೆಗೂ ನೋಟಿಫಿಕೆಶನ್ ಬಿಡುಗಡೆ ಮಾಡಲಾಗಿಲ್ಲ ಎಂಬುದರ ಮಾಹಿತಿಯನ್ನು ಕೆಇಎ ತಿಳಿಸಿದೆ.
ರಾಜ್ಯಾದ್ಯಂತ ಕೆಇಎ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2,609 ಉದ್ಯೋಗಗಳಿಗೆ ನೇಮಕಾತಿ ಹೊರಡಿಸಬೇಕಿತ್ತು. ಆದರೆ ವಿವಿರವಾದ ಅಧಿಸೂಚನೆ ಇದುವರೆಗೂ ಬಿಡುಗಡೆ ಮಾಡಿಲ್ಲ. ಇದಕ್ಕೆ ಕೆಇಎ ಕಾರಣಗಳನ್ನು ನೀಡಿದೆ. ಮತ್ತು ಯಾವ್ಯಾವ ಇಲಾಖೆಗಳಲ್ಲಿ ಎಷ್ಟೆಷ್ಟು ಉದ್ಯೋಗಗಳಿಗೆ ಅರ್ಜಿ ಕರೆಯಲಾಗುವುದು ಎನ್ನುವುನ್ನೂ ಮಾಹಿತಿ ನೀಡಿದೆ.
ಯಾವ್ಯಾವ ಇಲಾಖೆಗಳಲ್ಲಿ ಎಷ್ಟೆಷ್ಟು ಉದ್ಯೋಗಗಳನ್ನು ಕರೆಯಲಾಗುತ್ತದೆ?
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ- 44 ಹುದ್ದೆಗಳು
- ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ- (17 ವಿವಿಧ ವೃಂದಗಳ ಹುದ್ದೆಗಳು)- 750 ಹುದ್ದೆಗಳು
- ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ ಲಿಮಿಟೆಡ್ (14 ವಿವಿಧ ವೃಂದಗಳ ಹುದ್ದೆಗಳು)- 38 ಹುದ್ದೆಗಳು
- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ- 1752 ಹುದ್ದೆಗಳು
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)- 25 ಹುದ್ದೆಗಳು
ಇದನ್ನೂ ಓದಿ: ರಾಜ್ಯ ಸರ್ಕಾರದಡಿ ಉದ್ಯೋಗ ಬಯಸುವರಿಗೆ ಸುವರ್ಣಾವಕಾಶ.. ಇಂದೇ ಅರ್ಜಿ ಸಲ್ಲಿಸಿ
ವಿವರವಾದ ಅಧಿಸೂಚನೆ ಹೊರಡಿಸಲು ಸಾಧ್ಯವಾಗದಕ್ಕೆ ಕಾರಣಗಳೇನು?
- ಇಲಾಖೆಗಳಲ್ಲಿನ ಕೆಲವು ಹುದ್ದೆಗಳ ಮೀಸಲಾತಿ/ವರ್ಗೀಕರಣವನ್ನು ಪರಿಷ್ಕರಿಸಲು ಇಲಾಖೆ ಕೋರಿದೆ.
- ವಿವರವಾದ ಅಧಿಸೂಚನೆಯಲ್ಲಿನ ಕೆಲವು ಪರಿಷ್ಕರಣೆ ಮಾಡಲು ಇಲಾಖೆಯು ಕೋರಿದೆ.
- ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯುವ ಸಂಬಂಧ ಇಲಾಖೆಯು ತಡೆಹಿಡಿಯಲು ವಿನಂತಿಸಿದ್ದರಿಂದ ಅಧಿಸೂಚನೆ ಹೊರಡಿಸಲು ಆಗಿಲ್ಲ.
ಕೆಇಎ ಸೂಚನೆಗಳು ಏನು?
ಕೆಇಎ ಅಧಿಸೂಚನೆ ಹೊರಡಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿತ್ತು. ಈ ಮಧ್ಯೆ ಸರ್ಕಾರದ ಸುತ್ತೋಲೆ ಸಂಖ್ಯೆ ಸಿಆಸುಇ 388 ಸಿನೆನಿ 2024 ದಿನಾಂಕ 25/11/2024 ರಂತೆ ಹೊಸ ಅಧಿಸೂಚನೆ ಹೊರಡಿಸಲು ಆಗಿಲ್ಲ. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಮೇಲೆ ವಿವರಿಸಿರುವ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಬಯಸಿದಲ್ಲಿ, ಆ ಹುದ್ದೆಗಳಿಗೆ ನಿಗದಿಯಾಗಿರುವ ಪಠ್ಯಕ್ರಮದಂತೆ ಅಭ್ಯಾಸ ಮಾಡಲು ತಿಳಿಸಲಾಗಿದೆ.
ಸರ್ಕಾರದಿಂದ ನೇಮಕಾತಿ ಅಧಿಸೂಚನೆ ಹೊರಡಿಸಲು ಅನುಮತಿಸಿದ ತಕ್ಷಣ ಪ್ರಾಧಿಕಾರ ಅಧಿಸೂಚನೆ ಹೊರಡಿಸಿ ಅನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲು ಕ್ರಮವಹಿಸಲಾಗುವುದು. ಅಲ್ಲದೇ ಶೀಘ್ರವಾಗಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕೆಇಎ ಮಾಹಿತಿ ನೀಡಿದೆ.
ಪ್ರಮುಖ ಲಿಂಕ್- https://cetonline.karnataka.gov.in/keawebentry456/manpower/forthcom_exams_2024kannada.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ