/newsfirstlive-kannada/media/post_attachments/wp-content/uploads/2024/09/JOBS_AGRCULTUR.jpg)
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸದ್ಯದಲ್ಲೇ ಕರ್ನಾಟಕ ಕೃಷಿ ಮಾರಾಟ ಇಲಾಖೆಯಲ್ಲಿನ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದರ ಜೊತೆಗೆ ಪೂರ್ವ ತಯಾರಿ ಮಾಡಿಕೊಳ್ಳಬಹುದು. ಖಾಲಿ ಇರುವಂತ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಸಂಪೂರ್ಣ ವಿವರ ಈ ಕೆಳಗೆ ಇದೆ.
ಕರ್ನಾಟಕ ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ, ಕಿರಿಯ ಅಭಿಯಂತರ (ಇಂಜಿನಿಯರ್), ಪ್ರಥಮ ದರ್ಜೆ ಸಹಾಯಕರು, ಮಾರುಕಟ್ಟೆ ಮೇಲ್ವಿಚಾರಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಮಾರಾಟ ಸಹಾಯಕರು ಹುದ್ದೆಗಳು ಖಾಲಿ ಇವೆ. ಒಟ್ಟು 180 ಕೆಲಸಗಳಿಗೆ ಕೆಇಎ ಶೀಘ್ರದಲ್ಲೇ ಅಧಿಸೂಚನೆ ರಿಲೀಸ್ ಮಾಡಲಿದೆ.
ಇದನ್ನೂ ಓದಿ:SBIನಲ್ಲಿ 13,735 ಉದ್ಯೋಗಗಳು.. ಕೆಲವೇ ದಿನಗಳು ಬಾಕಿ, ಈ ಕೂಡಲೇ ಅಪ್ಲೇ ಮಾಡಿ
ದ್ವಿತೀಯ ಪಿಯುಸಿ, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ನಲ್ಲಿ ಸಿವಿಲ್, ತಾಂತ್ರಿಕ ಅಥವಾ ಯಾವುದೇ ಪದವಿ, ಬಿಎಸ್ಸಿ, ಬಿಎಸ್ಸಿ ಆನರ್ಸ್ ಈ ಕೋರ್ಸ್ ಮಾಡಿದವರು ಈ ಕೆಲಸಗಳಿಗೆ ಅಪ್ಲೇ ಮಾಡಬಹುದಾಗಿದೆ. ಅರ್ಜಿ ಶುಲ್ಕ, ಅರ್ಜಿ ಆರಂಭದ ದಿನಾಂಕ, ಕೊನೆ ದಿನಾಂಕ ಇತ್ಯಾದಿ ಮಾಹಿತಿ ಕೆಇಎ ಅಧಿಸೂಚನೆ ರಿಲೀಸ್ ಮಾಡಿದ ಬಳಿಕ ಅಪ್ಡೇಟ್ ಮಾಡಲಾಗುತ್ತದೆ.
ಸಹಾಯಕ, ಕಿರಿಯ ಅಭಿಯಂತರರು, ಪ್ರಥಮ ದರ್ಜೆ ಸಹಾಯಕ, ಮಾರುಕಟ್ಟೆ ಮೇಲ್ವಿಚಾರಕ ಈ ಹುದ್ದೆಗಳಿಗೆ ಎರಡು ಪರೀಕ್ಷೆಗಳು ಇರುತ್ತವೆ. ಇದರಲ್ಲಿ ಒಂದು ಪತ್ರಿಕೆ- 1 ಸಾಮಾನ್ಯ ಜ್ಞಾನ ಒಳಗೊಂಡಿದ್ದರೆ, ಪತ್ರಿಕೆ- 2 ನಿರ್ದಿಷ್ಟ ಪತ್ರಿಕೆ ಇರುತ್ತದೆ. ಇನ್ನು ದ್ವಿತೀಯ ದರ್ಜೆ, ಮಾರಾಟ ಸಹಾಯಕ ಕೆಲಸಗಳಿಗೆ ಅರ್ಜಿ ಸಲ್ಲಿಸುವವರಿಗೂ ಎರಡು ಪರೀಕ್ಷೆಗಳು ಇರುತ್ತವೆ. ಪತ್ರಿಕೆ-1 ಸಾಮಾನ್ಯ ಜ್ಞಾನದ ಬಗ್ಗೆ ಪತ್ರಿಕೆ- 2 ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಬಗೆಗಿನ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಇನ್ನು ವಯೋಮಿತಿಯನ್ನು ವರ್ಗವಾರು 18 ರಿಂದ 43 ವರ್ಷದ ಒಳಗೆ ನಿಗಧಿ ಮಾಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ