newsfirstkannada.com

VIDEO: ‘ಈಗ ಅರ್ಧ ಆಗಿದೆ, ಇನ್ನೊಂದು ವರ್ಷದಲ್ಲಿ ಪೂರ್ಣ ಆಗುತ್ತೆ’- ಡಿಕೆಶಿಗೆ ಕೇದಾರನಾಥ ಮಠದ ಸ್ವಾಮೀಜಿ ಕೊಟ್ಟ ಅಭಯ ಏನು?

Share :

02-07-2023

  ಜಗದ್ಗುರು ಭೀಮಾಶಂಕರ ಲಿಂಗ ಶಿವಾಚಾರ್ಯ ಶ್ರೀ ಆಶೀರ್ವಾದ

  ಡಿಸಿಎಂಗೆ ಇನ್ನೊಂದು ವರ್ಷದಲ್ಲಿ ಸಿಎಂ ಯೋಗ ಕೂಡಿ ಬರುತ್ತಾ?

  ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಸಿಎಂ ಗಾದಿಯ ಚರ್ಚೆ ಜೋರು

ಬೆಂಗಳೂರು: ಗ್ಯಾರಂಟಿ ಅಲೆಯಲ್ಲಿ ಎಲ್ಲವೂ ತಣ್ಣಗಾಯ್ತು ಅನ್ನುವಷ್ಟರಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಸಿಎಂ ಗಾದಿಯ ಚರ್ಚೆ ಶುರುವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೇದಾರನಾಥ ಮಠದ ಜಗದ್ಗುರು ಭೀಮಾಶಂಕರ ಲಿಂಗ ಶಿವಾಚಾರ್ಯ ಶ್ರೀ ಅಭಯ ನೀಡಿದ್ದು, ಮತ್ತೆ ಸಿಎಂ ಕುರ್ಚಿಯ ಮಹದಾಸೆ ಚಿಗುರೊಡೆಯುವಂತೆ ಮಾಡಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಮೇಲೆ ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿದ್ರು. ಆದರೆ ಶಾಸಕರ ಬೆಂಬಲ, ಹೈಕಮಾಂಡ್‌ನ ರಾಜಕೀಯ ಲೆಕ್ಕಾಚಾರ ಸಿಎಂ ಕನಸು ಕನಸಾಗುವಂತೆ ಉಳಿಯುವಂತೆ ಮಾಡಿತ್ತು. ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ ಶಿವಕುಮಾರ್ ಅವರು ಮುಂದೊಂದು ದಿನ ಶುಭಕಾಲ ಕೂಡಿ ಬರಬಹುದು ಎಂದು ಕಾಯುತ್ತಿದ್ದಾರೆ.

ಸಿಎಂ ಕನಸು, ಕನವರಿಕೆಯ ಮಧ್ಯೆ ಕೇದಾರನಾಥ ಸ್ವಾಮೀಜಿ ಡಿಕೆ ಶಿವಕುಮಾರ್ ಅವರಿಗೆ ಒಂದು ಅಭಯ ನೀಡಿದ್ದಾರೆ. ಈ ಆಶೀರ್ವಾದದ ನುಡಿಗಳು ರಾಜ್ಯ ಕಾಂಗ್ರೆಸ್​ನಲ್ಲಿ ಮತ್ತೆ ಮುಖ್ಯಮಂತ್ರಿ ಗಾದಿಯ‌ ಚರ್ಚೆ ಹುಟ್ಟು ಹಾಕಿರೋದಂತೂ ಸುಳ್ಳಲ್ಲ.

ಇದನ್ನೂ ಓದಿ: ವಿಪಕ್ಷ ನಾಯಕನಾಗಲು ಬೊಮ್ಮಾಯಿಗೆ ಶಾಸಕರ ವಿರೋಧ; ದೆಹಲಿಗೆ ಹೊರಟ ಯಡಿಯೂರಪ್ಪ; ಇವತ್ತೇ ಕ್ಲೈಮ್ಯಾಕ್ಸ್‌!

ಇತ್ತೀಚೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಕೇದಾರನಾಥ ಮಠದ ಜಗದ್ಗುರು ಭೀಮಾಶಂಕರ ಲಿಂಗ ಶಿವಾಚಾರ್ಯ ಶ್ರೀ ಭೇಟಿ ಪಡೆದರು. ಈ ವೇಳೆ ಡಿಕೆಶಿಗೆ ಆಶೀರ್ವಚನ ನೀಡಿದ ಸ್ವಾಮೀಜಿ, ಈಗ ಅರ್ಧ ಆಗಿದೆ, ಇನ್ನೊಂದು ವರ್ಷದಲ್ಲಿ ಪೂರ್ಣ ಆಗುತ್ತೆ. ಪೂರ್ಣವನ್ನ ಕೇದಾರನಾಥ ಮಾಡ್ತಾನೆ ಎಂದು ಜಗದ್ಗುರುಗಳು ಹೇಳಿದ್ದಾರೆ. ಡಿಸಿಎಂ ಆಗಿದ್ದೀರಿ, ಸಿಎಂ ಆಗುತ್ತೀರಾ ಎಂದು ಜಗದ್ಗುರು ಭೀಮಾಶಂಕರ ಲಿಂಗ ಶಿವಾಚಾರ್ಯ ಶ್ರೀ ಅಭಯ ನೀಡಿರೋದು ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಈಗ ಅರ್ಧ ಆಗಿದೆ, ಇನ್ನೊಂದು ವರ್ಷದಲ್ಲಿ ಪೂರ್ಣ ಆಗುತ್ತೆ’- ಡಿಕೆಶಿಗೆ ಕೇದಾರನಾಥ ಮಠದ ಸ್ವಾಮೀಜಿ ಕೊಟ್ಟ ಅಭಯ ಏನು?

https://newsfirstlive.com/wp-content/uploads/2023/07/DCM-DK-Shivakumar-1.jpg

Load More