/newsfirstlive-kannada/media/post_attachments/wp-content/uploads/2024/02/uber.jpg)
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ (Kempegowda International Airport) ನಿಲ್ದಾಣದಲ್ಲಿ ಪಿಕ್ ಅಪ್ ಲೇನ್ ವಾಹನಗಳ ಪ್ರವೇಶಕ್ಕೆ 150ರೂ ಶುಲ್ಕ ವಿಧಿಸಲಾಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಓಲಾ, ಊಬರ್ ಸೇರಿದಂತೆ ಖಾಸಗಿ ಹಾಗೂ ಕಮರ್ಷಿಯಲ್ ವಾಹನಗಳ ಎಂಟ್ರಿಗೆ 150 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ.
ವಾಹನ ದಟ್ಟಣೆ ತಪ್ಪಿಸಲು ವಿಮಾನ ನಿಲ್ದಾಣದ ಎರಡೂ ಟರ್ಮಿನಲ್​ಗಳಲ್ಲೂ ಶುಲ್ಕ ವಸೂಲಿಗೆ ನಿರ್ಧಾರ ಮಾಡಲಾಗಿದೆ. ಅಂತೆಯೇ ನಿನ್ನೆಯಿಂದಲೇ ಶುಲ್ಕ ವಸೂಲಿ ಆರಂಭವಾಗಿದೆ. ಮೊದಲ ಏಳು ನಿಮಿಷಕ್ಕೆ 150, ನಂತರದ ಏಳು ನಿಮಿಷಕ್ಕೆ 150 ರೂಪಾಯಿ ನಿಗದಿ ಮಾಡಲಾಗಿದೆ. ಬಸ್​ಗಳಿಗೆ 600 ರೂಪಾಯಿ ನಿಗದಿ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/05/bengalore-airport.jpg)
15 ನಿಮಿಷಕ್ಕೂ ಅಧಿಕ ಕಾಲ ನಿಂತಿದ್ದರೆ ಟೋಯಿಂಗ್ ಮಾಡ್ತಾರೆ. ಟೋಯಿಂಗ್ ಚಾರ್ಜ್ ಅನ್ನೂ ವಾಹನ ಮಾಲೀಕರಿಂದಲೇ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ವಿಮಾನ ನಿಲ್ದಾಣದಲ್ಲಿ ಫಲಕ ಹಾಕಿ ಆಡಳಿತ ಮಂಡಳಿ ಮಾಹಿತಿ ನೀಡಿದೆ. ವಿಮಾನ ನಿಲ್ದಾಣದ ಈ ನಡೆಗೆ ವಾಹನ ಮಾಲೀಕರ ಸಂಘ ಭಾರೀ ವಿರೋಧ ವ್ಯಕ್ತಪಡಿಸಿದೆ. ಏರ್​​ಪೋರ್ಟ್​ ರಸ್ತೆಗೆ ಟೋಲ್ ಕಟ್ಟಬೇಕು. ಮತ್ತೆ ಪಿಕ್​ಅಪ್​ಗೂ ಚಾರ್ಜ್ ಮಾಡ್ತಿದಾರೆ ಅಂದ್ರೆ ಇದು ಹಗಲು ದರೋಡೆ. ಈ ಹೆಚ್ಚುವರಿ ಹೊರೆ ಗ್ರಾಹಕರ ಮೇಲೆಯೇ ಹಾಕಬೇಕಾಗುತ್ತದೆ. ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂದು ಆಗ್ರಹಿಸಿದೆ.
ಇದನ್ನೂ ಓದಿ:Rain alert: ರಾಜ್ಯದ ಈ ಜಿಲ್ಲೆಗಳಲ್ಲಿ 2 ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us