ಕೆಂಡಸಂಪಿಗೆ ಖ್ಯಾತಿಯ ನಟಿ ಅಮೃತಾ ರಾಮಮೂರ್ತಿ ಆರೋಗ್ಯಕ್ಕೆ ಏನಾಗಿದೆ? ಆಸ್ಪತ್ರೆ ಸೇರಿದ್ದೇಕೆ?

author-image
Veena Gangani
Updated On
ಕೆಂಡಸಂಪಿಗೆ ಖ್ಯಾತಿಯ ನಟಿ ಅಮೃತಾ ರಾಮಮೂರ್ತಿ ಆರೋಗ್ಯಕ್ಕೆ ಏನಾಗಿದೆ? ಆಸ್ಪತ್ರೆ ಸೇರಿದ್ದೇಕೆ?
Advertisment
  • ಕುಲವಧು ಧಾರಾವಾಹಿ ಮೂಲಕ ಸಖತ್ ಫೇಮಸ್​ ಆಗಿರುವ ಸ್ಟಾರ್ ಕಿರುತೆರೆ ನಟಿ
  • ಕೆಂಡಸಂಪಿಗೆ ಸೀರಿಯಲ್‌ನಲ್ಲಿ ಸಾಧನ ಎಂಬ ನೆಗೆಟಿವ್ ಪಾತ್ರ ಮಾಡುತ್ತಿರುವ ಅಮೃತಾ
  • ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋ ಶೇರ್ ಮಾಡಿ ನಟಿ ಏನಂದ್ರು?

ಬ್ಯೂಟಿ ವಿತ್​ ಬ್ರೈನ್​ ಅಂತರಲ್ಲ ಅದಕ್ಕೆ ಪರ್ಫೆಕ್ಟ್​ ಎಕ್ಸಾಂಪಲ್​ ಎಂದರೆ ಅದು ನಟಿ ಸಾಧನಾ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕೆಂಡ ಸಂಪಿಗೆ ಸೀರಿಯಲ್​ನಲ್ಲಿ ನಟಿ ಖಡಕ್​ ಆಗಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ನಟಿ ಸಾಧನಾ ಪಾತ್ರ ಸೈಲೆಂಟ್​ ಆಗಿದ್ದುಕೊಂಡೇ ನಾಯಕಿಯನ್ನು ಬುಗುರಿ ಥರ ಗಿರಿಕಿ ಹೊಡಿಸೋ ತಾಕತ್​ ಇರುವಂತಹದ್ದು. ಆದರೆ ಇದರ ಮಧ್ಯೆ ಅಭಿಮಾನಿಗಳು ನಟಿಯ ಪರಿಸ್ಥಿತಿ ನೋಡಿ ಶಾಕ್​ ಆಗಿದ್ದಾರೆ.

ಇದನ್ನೂ ಓದಿ:ಅಮೆರಿಕಾಗೆ ಹೊರಟ ಶಿವಣ್ಣ.. ಹರಕೆ ಹೊತ್ತು ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು; ಹೇಳಿದ್ದೇನು?​

ಹೌದು, ನಟಿ ಅಮೃತಾ ರಾಮಮೂರ್ತಿ ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ, ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ ನಟಿಸಿದ್ದರು. ಸದ್ಯ ಆಸೆ ಎಂಬ ಮತ್ತೊಂದು ಧಾರಾವಾಹಿಯಲ್ಲಿ ನಟಿ ಅಭಿನಯಿಸುತ್ತಿದ್ದಾರೆ. ಆದರೆ ನಟಿ ಕೆಲವು ದಿನಗಳ ಹಿಂದೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ನಟಿ ಮೂರು ದಿನಗಳ ಹಿಂದೆ ಆಸ್ಪತ್ರೆಗೂ ಕೂಡ ದಾಖಲಾಗಿದ್ದರು. ಈ ಕುರಿತು ಸ್ವತಃ ನಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು.

publive-image

ನಟಿ ಅಮೃತಾ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಆಸ್ಪತ್ರೆಯ ಬೆಡ್​ ಮೇಲೆ ಮಲಗಿಕೊಂಡಿದ್ದರು. ಅದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಅಪ್ ಡೇಟ್ ಕೊಡ ಕೊಟ್ಟಿದ್ದರು. ನಟಿ ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಾಗಿರೋದಾಗಿ ತಿಳಿಸಿದ್ದರು. ಈ ಬಗ್ಗೆ ಬರೆದುಕೊಂಡ ನಟಿ ನಮಸ್ಕಾರ ಎಲ್ಲರಿಗೂ.. ಸುಮಾರು ಜನ ಮೆಸೇಜ್ ಹಾಕುತ್ತಲೇ ಇದ್ದೀರಿ, ಏನಾಗಿದೆ ಏನಾಯ್ತು ಅಂತ. ನನಗೆ ಸಿವಿಯರ್ ಯುಟಿಐ ಆಗಿದೆ. ಯುರಿನರಿ ಟ್ರ್ಯಾಕ್ ಇನ್ ಫೆಕ್ಷನ್ ಆಗಿದೆ. ಎಕ್ಸ್‌ಟೀಮ್ ಲೆವೆಲ್‌ಗೆ ಹೋಗಿದೆ ಇನ್ ಫೆಕ್ಷನ್. ಹೀಗಾಗಿ ನಾನು ನಿನ್ನೆ ಅಡ್ಮಿಟ್ ಆಗಿದ್ದೆ. ಹೆಣ್ಮಕ್ಕೇ ಹುಷಾರಾಗಿರಿ. ಪಬ್ಲಿಕ್ ಟಾಯ್ಲೆಟ್ ಯೂಸ್ ಮಾಡುವಾಗ ತುಂಬಾ ಹುಷಾರಾಗಿರಿ. ನಮಗೆ ವಿಧಿಯಿಲ್ಲ. ಶೂಟಿಂಗ್ ಸೆಟ್‌ನಲ್ಲಿ ರೆಸ್ಟ್ ರೂಮ್ ಯೂಸ್ ಮಾಡೋಕಾಗುತ್ತದೆ. ನಮ್ಮ ಶೂಟಿಂಗ್‌ನವರು ಕ್ಯಾರವಾನ್ ತರಿಸಿದ್ರು. ಹೈಜೀನ್ ನೋಡಿಕೊಳ್ಳಬೇಕಾದ್ದು ಮುಖ್ಯ. ನಾನೀಗ ಹುಷಾರಾಗುತ್ತಿದ್ದೇನೆ ಅಂತ ಅಭಿಮಾನಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಸದ್ಯ ನಟಿ ಆಸ್ಪತ್ರೆಯಿಂದ ಡಿಸ್ಟಾರ್ಚ್ ಆಗಿ ಮತ್ತೆ ಶೂಟಿಂಗ್​ ಸೆಟ್​ಗೆ ಮರಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment