ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ‘ಕೆಂಡ ಸಂಪಿಗೆ’ ಖ್ಯಾತಿಯ ಸುಮನ.. ಏನದು?

author-image
Veena Gangani
Updated On
ಫ್ಯಾನ್ಸ್​ಗೆ ಗುಡ್​ನ್ಯೂಸ್​; ಹೊಸ ಪ್ರಾಜೆಕ್ಟ್​ಗೆ ಕೈ ಹಾಕಿದ ಕೆಂಡಸಂಪಿಗೆ ಸುಮನಾ.. ಏನದು?
Advertisment
  • ಕೆಂಡಸಂಪಿಗೆ ಸೀರಿಯಲ್​ ಬಿಟ್ಟಿದ್ದಕ್ಕೆ ಬೇಸರ ಹೊರ ಹಾಕಿದ ಫ್ಯಾನ್ಸ್​
  • ಸೀರಿಯಲ್​ ಮುಕ್ತಾಯದ ಬಳಿಕ ನಟಿಯ ಹೊಸ ಅಧ್ಯಾಯ ಶುರು
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ನಟಿಯ ಫೋಟೋಸ್

ಕೆಂಡಸಂಪಿಗೆ ಮೂಲಕ ಜನಪ್ರಿಯತೆ ಪಡೆದ ನಟಿ ಕಾವ್ಯ ಶೈವ. ಅನಾರೋಗ್ಯದ ಕಾರಣಕ್ಕೆ ಸೀರಿಯಲ್​ನಿಂದ ದೂರ ಉಳಿದಿದ್ದ ಕಾವ್ಯ ಸದ್ಯ ಚೇತರಿಸಿಕೊಂಡಿದ್ದಾರೆ. ಇತ್ತೀಚೆಗೆ ನಟಿ ಕಾವ್ಯ ಹೊಸ ಫೋಟೋಶೂಟ್​ವೊಂದನ್ನು ಮಾಡಿಸಿಕೊಂಡಿದ್ದಾರೆ.

publive-image

ಇದನ್ನೂ ಓದಿ:ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಹಳದಿ ಶಾಸ್ತ್ರ; ಬಾಲಿವುಡ್ ತಾರೆಯರ ರಂಗು ಹೇಗಿದೆ ನೋಡಿ!

ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪಕ್ಕದ್ಮನೆ ಹುಡುಗಿ ಎನ್ನುವಷ್ಟೇ ಮುದ್ದಾಗಿರೋ ಚಲುವೆ ಕಾವ್ಯ. ಬೆಳಗಿನಜಾವ ಹಳ್ಳಿ ಮನೆಯ ಹೆಣ್ಮಕ್ಕಳು ಹೇಗೆ ದಿನ ಶುರುಮಾಡ್ತಾರೆ. ಆ ವಾತಾವರಣ ಹೇಗಿರುತ್ತೆ ಅನ್ನೋ ಥೀಮ್​ನಲ್ಲಿ ಈ ಶೂಟ್​ ಮಾಡಿಸಿದ್ದಾರೆ. ಅಂದ್ಹಾಗೆ, ಕಾವ್ಯ ಈಗ ಏನು ಮಾಡ್ತಿದ್ದಾರೆ ಅನ್ನೋದಕ್ಕೂ ಉತ್ತರ ಸಿಕ್ಕಿದೆ. ಬೆಳ್ಳೆತೆರೆಯಲ್ಲಿ ಹೊಸ ಅಧ್ಯಾಯ ಶುರು ಮಾಡ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್​ನಲ್ಲಿರೋ ಕಾವ್ಯ ಕೆಲವೇ ತಿಂಗಳಲ್ಲಿ ತೆರೆಮೇಲೆ ಮಿಂಚೋಕೆ ರೆಡಿಯಾಗಿದ್ದಾರೆ.

ಕಾವ್ಯ ಕಿರುತೆರೆಯಿಂದ ದೂರ ಆದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಸದ್ಯದಲ್ಲಿ ಮತ್ತೊಂದು ಹೊಸ ಪ್ರಾಜೆಕ್ಟ್​​ ಮೂಲಕ ವೀಕ್ಷಕರ ಮುಂದೆ ಬರೋ ಸೂಚನೆ ಕೊಟ್ಟಿದ್ದಾರೆ. ಸದ್ಯ ನಟಿ ಕ್ಲಿಕ್ಕಿಸಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment