ಕೆಂಡಸಂಪಿಗೆ ಸೀರಿಯಲ್​ ನಟಿಗೆ ಬಿಗ್​ ಆಫರ್​ ಕೊಟ್ಟಿದ್ದ ಯಶ್​ ತಾಯಿ; ಈ ಬಗ್ಗೆ ಕಾವ್ಯಾ ಏನಂದ್ರು?

author-image
Veena Gangani
Updated On
ಕೆಂಡಸಂಪಿಗೆ ಸೀರಿಯಲ್​ ನಟಿಗೆ ಬಿಗ್​ ಆಫರ್​ ಕೊಟ್ಟಿದ್ದ ಯಶ್​ ತಾಯಿ; ಈ ಬಗ್ಗೆ ಕಾವ್ಯಾ ಏನಂದ್ರು?
Advertisment
  • ಪಿಎ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾದ ಸಿನಿಮಾದಲ್ಲಿ ಕಾವ್ಯಾ ನಟನೆ
  • ಕೆಂಡಸಂಪಿಗೆ ಸೀರಿಯಲ್ ಮೂಲಕ ಫೇಮಸ್​ ಆಗಿದ್ದ ನಟಿ ಕಾವ್ಯ ಶೈವ
  • ಕಿರುತೆರೆಯಿಂದ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ ನಟಿ ಕಾವ್ಯ

ಇದೇ ಮೊದಲ ಬಾರಿಗೆ ಕಿರುತೆರೆಯಿಂದ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ್ದಾರೆ ಕೆಂಡಸಂಪಿಗೆ ಸೀರಿಯಲ್ ನಟಿ ಕಾವ್ಯ ಶೈವ. ಅದರಲ್ಲೂ ರಾಕಿಂಗ್​ ಸ್ಟಾರ್​ ಯಶ್​ ಅವರ ತಾಯಿ ಪುಷ್ಪ ಹಾಗೂ ಅರುಣ್​ ಕುಮಾರ್​ ಅವರು ನಿರ್ಮಿಸಿರೋ ಪಿಎ ಪ್ರೊಡಕ್ಷನ್ಸ್ ಅಡಿಯಲ್ಲಿ ಹೀರೋಯಿನ್ ಆಗಿ ಲಾಂಚ್ ಆಗಿದ್ದಾರೆ.

ಇದನ್ನೂ ಓದಿ:ಕೆಂಡ ಸಂಪಿಗೆ ಸೀರಿಯಲ್​ ನಟಿ ಕಾರ್ಯಕ್ಕೆ ಭಾರೀ ಮೆಚ್ಚುಗೆ; ಅಂಥದ್ದೇನು ಮಾಡಿದ್ರು ಕಾವ್ಯ ಶೈವ?

ಹೌದು, ಈ ಹಿಂದೆ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಟಾಪ್​ ಧಾರಾವಾಹಿ ಕೆಂಡಸಂಪಿಗೆಯಲ್ಲಿ ನಟಿ ಕಾವ್ಯಾ ನಟಿಸಿದ್ದಾರೆ. ಕೆಂಡಸಂಪಿಗೆ ಸೀರಿಯಲ್​ ಪರಿಣಿತ ಪ್ರೊಡಕ್ಷನ್ಸ್​ನಡಿ ಉದಯ್​​ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿತ್ತು. ಈ ಸೀರಿಯಲ್​ನಲ್ಲಿ ಸುಮನಾ ಪಾತ್ರದಲ್ಲಿ ಮೂಲಕವೇ​ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು ನಟಿ ಕಾವ್ಯ ಶೈವ. ಸೀರಿಯಲ್​ ಮುಗಿಯುತ್ತಿದ್ದಂತೆ ಡಿಕೆಡಿಯಲ್ಲೂ ಡ್ಯಾನ್ಸ್​ ಮಾಡಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಡಿಕೆಡಿ ವಿನ್ನರ್​ ಆಗಿ ಕೂಡ ಹೊರ ಹೊಮ್ಮಿದ್ದರು. ಈಗ ನಟ ಪೃಥ್ವಿ ಅಂಬರ್ ಜೊತೆಗೆ ನಟಿಯಾಗಿ ಕಾವ್ಯಾ ಶೈವ ಅಭಿನಯಿಸುತ್ತಿದ್ದಾರೆ.

publive-image

ರಾಕಿಂಗ್ ಸ್ಟಾರ್​ ಯಶ್​ ಅವರ ತಾಯಿ ಹಾಗೂ ತಂದೆಯವರು ಪಿಎ ಪ್ರೊಡಕ್ಷನ್ಸ್ ಶುರು ಮಾಡಿದ್ದಾರೆ. ಆ ಚಿತ್ರಕ್ಕೆ ಕೊತ್ತಲವಾಡಿ ಎಂದು ಹೆಸರನ್ನು ಇಟ್ಟಿದ್ದಾರೆ. ಈಗಾಗಲೇ ನಿನ್ನೆ  ಕೊತ್ತಲವಾಡಿ ಸಿನಿಮಾದ ಟೀಸರ್ ಲಾಂಚ್‌ ಕೂಡ ಮಾಡಲಾಗಿತ್ತು. ಇನ್ನೂ ಇದೇ ವೇಳೆ ತನಗೆ ಸಿಕ್ಕ ಆಫರ್​ ಬಗ್ಗೆ ಮಾತಾಡಿದ್ದಾರೆ ನಟಿ ಕಾವ್ಯಾ, ಮೊದಲು ನನಗೆ ಈ ಅವಕಾಶ ಕೊಟ್ಟಿರು ಡೈರೆಕ್ಟರ್​ ಸರ್​ಗೆ ಥ್ಯಾಂಕ್ಸು.. ಈ ಸಿನಿಮಾ ನಾನು ಮಾಡಬಹುದು ಅಂತ ನನಗೆ ಭರವಸೆ ಇರಲಿಲ್ಲ. ಆದ್ರೆ ಕಥೆ ಬರೆಯುವಾಗ ಒಂದು ಇಮ್ಯಾಜಿನೇಷನ್​ನಲ್ಲಿ ಬರೆದಿದ್ದೀನಿ. ಈ ಕ್ಯಾರೆಕ್ಟರ್​ಗೆ ಸೂಟ್​ ಆಗ್ತೀರಾ ಅಂತ ಅವರು ಹೇಳಿದ್ರು. ಆದ್ರೆ ನಾನು ಮಿಸ್​ ಆಗಿ ನನಗೆ ಆಗೋದಿಲ್ಲ ಸರ್ ಅಂತ ಹೇಳಿದ್ದರೇ ನಾನು ಇಲ್ಲಿ ಇರ್ತಾ ಇರಲಿಲ್ಲ ಎಂದರು.

ಇದಾದ ಬಳಿಕ ಯಶ್​ ತಾಯಿ ಅವರ ಬಗ್ಗೆ ಮಾತಾಡಿದ ನಟಿ, ಎಲ್ಲರೂ ಹೇಳ್ತಾ ಇದ್ದಾರೆ ಸರ್​ಪ್ರೈಸ್​ ಅಂತ. ಆ ಸೀಕ್ರೆಟ್​ ಹಂಗೆ ಕಾಪಾಡಿಕೊಂಡು ಬಂದಿದ್ದಾರೆ. ಸೆಟ್​ನಲ್ಲಿ ಯಾರಿಗೂ ತೊಂದರೆ ಆಗಬಾರದು, ಕೆಲಸ ಆಗಿದ್ದೇ ಗೊತ್ತಾಗಬಾರದು ಅಂತ ಹೇಳಿದ್ರು, ಅದು ಎಷ್ಟು ಬೇಗ ಬೇಗ ಮುಗಿತು ಅಂದ್ರೆ ನಂಬೋಕೆ ಆಗ್ತೀಲ್ಲ ಎಂದರು. ಆಗ ಯಶ್​ ಅವರ ತಾಯಿ ನಿರಊಪಕಿ ಅನುಶ್ರೀಗೆ ನೀವು ಅವರಿಗೆ ಕೇಳ್ತಾ ಇದ್ರಿ ಅಲ್ವಾ ಯಾವುದೋ ಸಿನಿಮಾ ಮಾಡ್ತಾ ಇದ್ದೀಯಾ ಅಲ್ವಾ, ನೋಡು ಕಾವ್ಯಾ ಇದೇ ಸಿನಿಮಾ ಮಾಡ್ತಾ ಇದ್ದಾರೆ ಅಂತ ಹೇಳದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment