ಫ್ಯಾನ್ಸ್​ಗೆ ಗುಡ್​ನ್ಯೂಸ್​; ಹೊಸ ಪ್ರಾಜೆಕ್ಟ್​ಗೆ ಕೈ ಹಾಕಿದ ಕೆಂಡಸಂಪಿಗೆ ಸುಮನಾ.. ಏನದು?

author-image
Veena Gangani
Updated On
ಫ್ಯಾನ್ಸ್​ಗೆ ಗುಡ್​ನ್ಯೂಸ್​; ಹೊಸ ಪ್ರಾಜೆಕ್ಟ್​ಗೆ ಕೈ ಹಾಕಿದ ಕೆಂಡಸಂಪಿಗೆ ಸುಮನಾ.. ಏನದು?
Advertisment
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ನಟಿಯ ಹೊಸ ಲುಕ್​
  • ಕೆಂಡಸಂಪಿಗೆ ಸೀರಿಯಲ್​ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ನಟಿ
  • ಸುಮನಾ ಪಾತ್ರಕ್ಕೆ ಮೊದಲು ಬಣ್ಣ ಹಚ್ಚಿದವರು ನಟಿ ಕಾವ್ಯ ಶೈವ

ಕಲರ್ಸ್​ ಕನ್ನಡದಲ್ಲಿ ಟಾಪ್​ ಧಾರಾವಾಹಿಗಳ ಲಿಸ್ಟ್​ನಲ್ಲಿರೋ ಸ್ಟೋರಿ ಕೆಂಡಸಂಪಿಗೆ. ಪರಿಣಿತ ಪ್ರೊಡಕ್ಷನ್ಸ್​ನಡಿ ಉದಯ್​​ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೀರಿಯಲ್​ ಕೆಂಡಸಂಪಿಗೆ. ಈ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ಎಂದರೆ ಅದು ಕಾವ್ಯ ಶೈವ.

ಇದನ್ನೂ ಓದಿ:ಕೆಂಡಸಂಪಿಗೆ ಸೀರಿಯಲ್‌ನಲ್ಲಿ ದಿಢೀರ್‌ ಬದಲಾವಣೆ; ವೀಕ್ಷಕರು ಕೆಂಡಾಮಂಡಲ; ಅಸಲಿ ಕಾರಣ ಇಲ್ಲಿದೆ!

ಅನಾರೋಗ್ಯದ ಕಾರಣಕ್ಕೆ ಸೀರಿಯಲ್​ನಿಂದ ದೂರ ಉಳಿದಿದ್ದ ಕಾವ್ಯ ಸದ್ಯ ಚೇತರಿಸಿಕೊಂಡಿದ್ದಾರೆ. ನಟಿ ಕಾವ್ಯ ಶೈವ ಅವರು ಕೆಂಡಸಂಪಿಗೆ ಸೀರಿಯಲ್​ನಲ್ಲಿ ಸುಮನಾ ಪಾತ್ರದಲ್ಲಿ ಅಭಿನಯಿಸಿದ್ದರು. ಇದೇ ಸೀರಿಯಲ್ ಮೂಲಕ ಕಾವ್ಯ ಶೈವ ಅವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು. ಕೆಂಡಸಂಪಿಗೆ ಸೀರಿಯಲ್‌ನಿಂದ ಆಚೆ ಬಂದ ಮೇಲೆ ಕೊಂಚ ಬ್ರೇಕ್‌ನ ಬಳಿಕ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋನಲ್ಲಿ ಕಂಟೆಸ್ಟೆಂಟ್ ಆಗಿದ್ದಾರೆ.

publive-image

ಇದೀಗ ನಟಿ ಕಾವ್ಯ ಶೈವ ಸದ್ಯ ಸ್ಕೂಲ್‌ ಯೂನಿಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಶೇರ್ ಮಾಡಿಕೊಂಡ ಫೋಟೋದಲ್ಲಿ ಸ್ಕೂಲ್‌ ಯೂನಿಫಾರ್ಮ್ ಧರಿಸಿಕೊಂಡು, ಎರಡು ಜಡೆ ಹಾಕಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಇದರ ಜೊತೆಗೆ ಸ್ಕೂಲ್‌ ಯೂನಿಫಾರ್ಮ್ ಹಾಕಿದ್ದೇ ಹಾಕಿದ್ದು, ಸ್ಕೂಲ್‌ ಡೇಸ್‌ ರಪ್‌ ಅಂತ ಪಾಸ್ ಆದ್ವು ಅಂತ ಬರೆದುಕೊಂಡಿದ್ದಾರೆ. ಇದಲ್ಲದೆ, ಮುಂದಿನ ಹೊಸ ಪ್ರಾಜೆಕ್ಟ್‌ ಬಗ್ಗೆ ಕೂಡ ಕಾವ್ಯ ಶೈವ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಪ್‌ಕಮಿಂಗ್ ಪ್ರಾಜೆಕ್ಟ್‌ನಲ್ಲಿ ಸ್ಕೂಲ್‌ ಹುಡುಗಿಯಾಗಿ ಕಾವ್ಯ ಶೈವ ಕಾಣಿಸಿಕೊಳ್ಳುತ್ತಿದ್ದಾರೆ. ಯೂನಿಫಾರ್ಮ್‌ ಧರಿಸಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಲುಕ್‌ ನನ್ನ ಮುಂಬರುವ ಪ್ರಾಜೆಕ್ಟ್‌ ಗೆ ಸಂಬಂಧಿಸಿದ್ದಾಗಿದೆ. ಸದ್ಯದಲ್ಲೇ ರಿವೀಲ್ ಮಾಡ್ತೀನಿ ಅಂತ ಬರೆದುಕೊಂಡಿದ್ದಾರೆ.

ಈ ಫೋಟೋ ನೋಡಿದ ಅಭಿಮಾನಿಗಳು ಸಖತ್​ ಖುಷ್ ಆಗಿದ್ದಾರೆ. ಎಷ್ಟೇ ಎತ್ತರದ ಸ್ಥಾನಕ್ಕೆ ಹೋದರೂ ಮರಳಿ ಬಾರದು ಹಳೆಯ ನೆನಪುಗಳು. ಬಂದರು ಹಳೆಯ ನೆನಪುಗಳು ಎಷ್ಟು ಚಂದ ಅನ್ನಿಸಿಬಿಡುತ್ತೆ, ಸ್ಕೂಲ್​ ಲೈಫ್​ ಮರೆಯಲಾಗದಂತಹ ಅದ್ಭುತ ಕ್ಷಣ, ಮುಂದಿನ ಗುಡ್​ನ್ಯೂಸ್​ಗಾಗಿ ಫುಲ್ ವೈಟಿಂಗ್ ಅಂತ ಅಭಿಮಾನಿಗಳು ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment