ಕೆಂಡಸಂಪಿಗೆ ಸೀರಿಯಲ್ ನಟಿ ನಿಸರ್ಗ ಮಂಜುನಾಥ್ ಮನೆಯಲ್ಲಿ ಸಂಭ್ರಮ.. ಏನದು?

author-image
Veena Gangani
Updated On
ಕೆಂಡಸಂಪಿಗೆ ಸೀರಿಯಲ್ ನಟಿ ನಿಸರ್ಗ ಮಂಜುನಾಥ್ ಮನೆಯಲ್ಲಿ ಸಂಭ್ರಮ.. ಏನದು?
Advertisment
  • ತೀರ್ಥಂಕರ್ ತಂಗಿ ಜಾಹ್ನವಿ ಪಾತ್ರದಲ್ಲಿ ನಟಿಸಿದ್ದ ನಟಿ ನಿಸರ್ಗ
  • ನಟಿ ನಿಸರ್ಗ ಮಂಜುನಾಥ್ ಹೊಸ ಮನೆಯಲ್ಲಿ ಸಂಭ್ರಮ
  • ಈ ಸಂಭ್ರಮದಲ್ಲಿ ಸ್ಟಾರ್ ನಟ ಕೋಮಲ್ ಕುಮಾರ್ ಭಾಗಿ

ಕಲರ್ಸ್​ ಕನ್ನಡದ ಟಾಪ್​ ಧಾರಾವಾಹಿಗಳ ಲಿಸ್ಟ್​ನಲ್ಲಿತ್ತು ಕೆಂಡಸಂಪಿಗೆ. ಇದೇ ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದ ನಟಿ ನಿಸರ್ಗ ಮಂಜುನಾಥ್ ಹೊಸ ಮನೆಗೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾದ FIR ಸಿಐಡಿಗೆ ವರ್ಗಾವಣೆ -ಕಾಲ್ತುಳಿತದ ವಿರುದ್ಧ ಸರ್ಕಾರ 6 ಆದೇಶ

publive-image

ಕೆಂಡಸಂಪಿಗೆ ಧಾರಾವಾಹಿಯಲ್ಲಿ ತೀರ್ಥಂಕರ್ ತಂಗಿ ಜಾಹ್ನವಿ ಪಾತ್ರದಲ್ಲಿ ನಟಿಸಿದ್ದರು ನಟಿ ನಿಸರ್ಗ ಮಂಜುನಾಥ್.

publive-image

ಇದೀಗ ನಟಿ ನಿಸರ್ಗ ಮಂಜುನಾಥ್ ಅವರ ಹೊಸ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಏಕೆಂದರೆ ನಟಿ ನಿಸರ್ಗ ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ. ನಟಿ ನಿಸರ್ಗ ತಮ್ಮ ಹೊಸ ಮನೆಗೆ ನಿಸರ್ಗವೇ ಭಾಗ್ಯ ಅಂತ ಹೆಸರಿಟ್ಟಿದ್ದಾರೆ. ನಿಸರ್ಗ ಅವರ ಹೊಸ ಮನೆಯ ಫೋಟೋಗಳು ನ್ಯೂಸ್​ ಫಸ್ಟ್​ಗೆ ಸಿಕ್ಕಿವೆ.

publive-image

ಇನ್ನೂ, ನಟಿ ನಿಸರ್ಗ ಅವರ ಮನೆಗೆ ಗೃಹಪ್ರವೇಶಕ್ಕೆ ನಟ ಕೋಮಲ್ ಕುಮಾರ್, ಗಿಚ್ಚಿಗಿಲಿಗಿಲಿ ಖ್ಯಾತಿಯ ವಿನೋದ್ ಗೊಬ್ಬರಗಾಲ ಸೇರಿದಂತೆ ಸಾಕಷ್ಟು ಕಿರುತೆರೆ ನಟ ನಟಿಯರು ಭಾಗಿಯಾಗಿದ್ದರು. ಅದರಲ್ಲಿ ಕೆಲವೊಂದು ಫೋಟೋಗಳು ನ್ಯೂಸ್​ಫಸ್ಟ್​ಗೆ ಸಿಕ್ಕಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment