/newsfirstlive-kannada/media/post_attachments/wp-content/uploads/2024/05/kendasampige1.jpg)
ಕಲರ್ಸ್​ ಕನ್ನಡದ ಟಾಪ್​ ಧಾರಾವಾಹಿಗಳ ಲಿಸ್ಟ್​ನಲ್ಲಿದ್ದ ಸ್ಟೋರಿ ಕೆಂಡಸಂಪಿಗೆ. ಪರಿಣಿತ ಪ್ರೊಡಕ್ಷನ್ಸ್​ನಡಿ ಉದಯ್​​ ಅವರ ನಿರ್ದೇಶನದಲ್ಲಿ 500 ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ನಾಯಕಿಯ ಬದಲಾವಣೆಯೇ ವೀಕ್ಷಕರು ಹತ್ತು ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ.
/newsfirstlive-kannada/media/post_attachments/wp-content/uploads/2024/05/kendasampige.jpg)
ಈಗಾಗಲೇ ಜನಪ್ರಿಯತೆ ಪಡೆದಿರೋ ಧಾರಾವಾಹಿಯಿಂದ ಮುಖ್ಯ ಪಾತ್ರ ಬದಲಾದ್ರೆ ಸಹಜವಾಗಿಯೇ ವೀಕ್ಷಕರಿಗೆ ಒಪ್ಪಿಕೊಳ್ಳೋಕೆ ಕಷ್ಟ ಆಗುತ್ತೆ. ಆ ಪಾತ್ರದ ಗತ್ತು ಜೊತೆಗೆ ಸೀರಿಯಲ್​ನ ಪಾಪ್ಯುಲಾರಿಟಿ ಎರಡೂ ಕುಸಿಯೋದು ಸಹಜ. ಇಷ್ಟೆಲ್ಲ ರಿಸ್ಕ್​ನೊಂದಿಗೆ ಸುಮನಾ ಪಾತ್ರವನ್ನ ಬದಲಾವಣೆ ಮಾಡೋಕೆ ಬಲವಾದ ಕಾರಣ ಇದೆಯಂತೆ. ಮೂಲಗಳ ಪ್ರಕಾರ ಸುಮನಾ ಪಾತ್ರಧಾರಿ ಕಾವ್ಯ ಶೈವ ಅವರ ಆರೋಗ್ಯ ಸಮಸ್ಯೆಯಿಂದ ಇಂತಹದೊಂದು ನಿರ್ಧಾರ ತಂಡ ತೆಗೆದುಕೊಳ್ಬೇಕಾಯ್ತಂತೆ.
ಹೌದು, ಆರೋಗ್ಯ ಸಮಸ್ಯೆಯಿಂದ ಕಾವ್ಯ ಅವರು ವಿಶ್ರಾಂತಿ ಪಡೆಯುವ ಅಗತ್ಯ ಇತ್ತಂತೆ. ಹೀಗಾಗಿ ಸೀರಿಯಲ್​ ತಂಡದ ಜೊತೆ ಮಾತುಕತೆ ನಡಿಸಿ ಫೆಬ್ರವರಿ ತಿಂಗಳಲ್ಲಿ ಧಾರಾವಾಹಿಯಿಂದ ಹೊರ ಬರಲು ನಿರ್ಧರಿಸಿದ್ದರಂತೆ. ಆದರೆ ಸಂಚಿಕೆಗಳ ಬ್ಯಾಂಕಿಂಗ್​ ಸಮಸ್ಯೆಯಿಂದ ಮತ್ತೆರಡು ತಿಂಗಳು ಅವರೇ ಸುಮನಾ ಪಾತ್ರವನ್ನ ನಿಭಾಯಿಸಿದ್ದಾರೆ. ಸದ್ಯ ಈಗ ಸುಮನಾ ಪಾತ್ರದಿಂದ ಭಾರವಾದ ಮನಸ್ಸಲ್ಲೇ ಹೊರ ಬಂದಿರೋ ಕಾವ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
/newsfirstlive-kannada/media/post_attachments/wp-content/uploads/2024/05/kendasampige2.jpg)
View this post on Instagram
ಇನ್ನು, ಸುಮನಾ ಪಾತ್ರವನ್ನ ಮಧುಮಿತಾ ಅವರು ಮುಂದುವರೆಸಲಿದ್ದಾರೆ. ಈ ಹಿಂದೆ ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಜೇನುಗೂಡು ಧಾರಾವಾಹಿಯಲ್ಲಿ ಮೊದಲ ಬಾರಿಗೆ ಮಧುಮಿತಾ ಬಣ್ಣ ಹಚ್ಚಿದ್ದರು. ಸದ್ಯ ಕೆಂಡಸಂಪಿಗೆಯ ನಾಯಕಿ ಸುಮನಾ ಆಗಿ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ತಯಾರಿ ಆರಂಭಿಸಿದ್ದಾರೆ. ಆದರೆ ಇಷ್ಟೂ ದಿನ ಸುಮನಾ ನೋಡಿದ ವೀಕ್ಷಕರು ನಾವು ಇನ್ಮುಂದೆ ಈ ಸೀರಿಯಲ್​ ನೋಡೋದಿಲ್ಲ. ನಮಗೆ ಹಳೆ ಸುಮನಾನೇ ಬೇಕು ಅಂತಾ ಬೇಸರ ಹೊರ ಹಾಕುತ್ತಿದ್ದಾರೆ. 500 ಸಂಚಿಕೆಗಳನ್ನ ಪೂರೈಸಿರೋ ಕೆಂಡಸಂಪಿಗೆ ಮುಕ್ತಾಯವಾಗ್ತಿದೆ ಎಂಬ ಸುದ್ದಿ ಕೂಡ ಹರಿದಾಡ್ತಿದೆ. ಮೂಲಗಳ ಪ್ರಕಾರ ಇನ್ನು ಒಂದು ವರ್ಷಕ್ಕೆ ಆಗುವಷ್ಟು ಸ್ಟೋರಿಯನ್ನ ಬಿಲ್ಡ್​ ಮಾಡಿ ಇಟ್ಕೊಂಡಿದೆ ಅಂತೆ ಸೀರಿಯಲ್​ ತಂಡ. ವೈಂಡಪ್​ ಸುದ್ದಿ ಸುಳ್ಳು ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಫ್ರೆಶ್​ ಕತೆ ಜೊತೆಗೆ ಕಾಲಿಟ್ಟ ಕೆಂಡಸಂಪಿಗೆ ನಟಿ ಅಮೃತಾ ರಾಮಮೂರ್ತಿ, ಕಾವ್ಯ ಶೈವ, ಆಕಾಶ್​, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಹಲವು ಹೊಸ-ಹಳೆ ಕಲಾವಿದರ ಅಭಿನಯದ ಸವಿ ನೀಡಿದ ಧಾರಾವಾಹಿ ಅಂದ್ರೆ ತಪ್ಪಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us