/newsfirstlive-kannada/media/post_attachments/wp-content/uploads/2024/10/Union-Home-Minister-Dakshata-Medal.jpg)
ಕೇಂದ್ರ ಸರ್ಕಾರದ ಗೃಹ ಇಲಾಖೆಯಿಂದ ನೀಡಲಾಗುವ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕವನ್ನು ಈ ಬಾರಿ 463 ಪೊಲೀಸರಿಗೆ ನೀಡಲಾಗಿದೆ. ಈ ಪೈಕಿ ಕರ್ನಾಟಕದ 6 ಜನರಿಗೆ ಈ ಪ್ರಶಸ್ತಿ ಲಭ್ಯವಾಗಿದೆ. ಬೆಂಗಳೂರಿನ ವೈಟ್​ಫೀಲ್ಡ್​ ಟ್ರಾಫಿಕ್​​ ಎಸಿಪಿ ರಮೇಶ್​ ವಿ.ಎಲ್​, ಡಿವೈಎಸ್​ಪಿ ಕೆ.ಬಸವರಾಜ್​ ಸೇರಿದಂತೆ ಸೇರಿದಂತೆ ಒಟ್ಟು ಆರು ಜನರಿಗೆ ಈ ಗೌರವ ದೊರೆತಿದೆ.
[caption id="attachment_94722" align="aligncenter" width="800"]
ಎಸಿಪಿ ರಮೇಶ್​ ವಿ.ಎಲ್​ ಹಾಗೂ ಡಿವೈಎಸ್​ಪಿ ಕೆ.ಬಸವರಾಜ್[/caption]
ರಮೇಶ್​ ವಿ.ಎಲ್​. ಅವರು ಅಪ್ರಾಪ್ತ ಬಾಲಕಿಯೊಬ್ಬಳ ಅತ್ಯಾಚಾ*ರ ಪ್ರಕರಣ ಹಾಗೂ ಕೊ*ಲೆ ಪ್ರಕರಣವೊಂದರಲ್ಲಿ ಆರೋಪಿಗಳ ಬಂಧಿಸುವುದಷ್ಟೇ ಅಲ್ಲದೇ ಅತ್ಯಂತ ಕಡಿಮೆ ಅವಧಿಯಲ್ಲೇ ತನಿಖೆ ಮುಗಿಸಿ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದರು.
ಫೀಲ್ಡ್​ನಲ್ಲಿ ನಡೆಸುವ ಸ್ಪೆಷಲ್​ ಆಪರೇಷನ್​​, ಅಪರಾಧ ಪ್ರಕರಣಗಳ ತನಿಖೆ, ಫೋರೇನ್ಸಿಕ್​ ಸೈನ್ಸ್​ ಸೇರಿದಂತೆ ವಿವಿಧ ವಿಭಾಗಳಲ್ಲಿ ಅತ್ಯುತ್ತಮ ಸಾಧನೆ ಹಾಗೂ ವೃತ್ತಿಪರತೆ ತೋರಿರುವ ಪೊಲೀಸ್​​ ಅಧಿಕಾರಿಗಳಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ.
ಸರ್ದಾರ್​ ವಲ್ಲಭಬಾಯಿ ಅವರ ಜನ್ಮದಿನವನ್ನು ಏಕತಾ ದಿವಸ್​ ಹೆಸರಿನಲ್ಲಿ ಪ್ರತಿವರ್ಷವೂ ಆಚರಣೆ ಮಾಡಲಾಗುತ್ತಿದ್ದು. ಇದೇ ದಿನ ಅಂದರೆ, ಪ್ರತಿ ವರ್ಷ ಅಕ್ಟೋಬರ್​ 31 ರಂದು ಈ ಪದಕಗಳನ್ನ ಘೋಷಿಸುವುದು ರೂಢಿಯಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us