Advertisment

ಸಂಸತ್ತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದವರ ಮೇಲೆ ಫೈರಿಂಗ್.. ಐವರು ಸಾವು

author-image
Ganesh
Updated On
ಸಂಸತ್ತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದವರ ಮೇಲೆ ಫೈರಿಂಗ್.. ಐವರು ಸಾವು
Advertisment
  • ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಗುಂಡಿನ ದಾಳಿ
  • ತೆರಿಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಯುತ್ತಿತ್ತು
  • ಪ್ರತಿಭಟನೆ ವೇಳೆ ಹಿಂಸಾಚಾರ, ಹಲವರು ಗಾಯಗೊಂಡಿದ್ದಾರೆ

ಕೀನ್ಯಾ ಸಂಸತ್ತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು ಕನಿಷ್ಠ ಐವರು ಪ್ರತಿಭಟನಾಕಾರರು ಸಾವಿಗೀಡಾಗಿದ್ದಾರೆ. ಈ ಹಿಂಸಾಚಾರದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಪರಿಸ್ಥಿತಿ ಉಲ್ಬಣಗೊಂಡಿದೆ.

Advertisment

ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಫೈನಲ್ ಹೇಗಿರುತ್ತೆ..? ಯಾರು ಯಾರ ವಿರುದ್ಧ ಸೆಣಸಾಟ ಮಾಡ್ತಾರೆ..?

ತೆರಿಗೆ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನಾಕಾರರು ಮಣಿಯದೆ ಸಂಸತ್ತಿನ ಆವರಣಕ್ಕೆ ಮುತ್ತಿಗೆ ಹಾಕುವ ವೇಳೆ ಅಲ್ಲಿ ತಡೆಯಲು ಬಂದ ಪೊಲೀಸರನ್ನೇ ಓಡಿಸಿದ್ದಾರೆ. ಸಂಸತ್ ಕಟ್ಟಡದ ಒಳಗಿನಿಂದ ಬೆಂಕಿ ಹೊತ್ತಿ ಉರಿದಿದ್ದು, ಕಟ್ಟಡದ ವಿಭಾಗಗಳು ಸುಟ್ಟುಹೋಗಿವೆ. ಅಶ್ರುವಾಯು ಮತ್ತು ಜಲ ಫಿರಂಗಿ ಬಳಸಿ ಜನರನ್ನು ಚದುರಿಸಲು ವಿಫಲವಾದ ನಂತರ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಗುಂಡಿನ ದಾಳಿಯಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:ಹಿರಿಯರಿಗೆ ಕೊಕ್, ಗಿಲ್ ಕ್ಯಾಪ್ಟನ್.. ಇದು ನಿವೃತ್ತಿ ಕೇಳುವ ಮುನ್ಸೂಚನೆ.. ಪಾಂಡ್ಯ, ಪಂತ್​ಗೂ ಪರೋಕ್ಷ ಎಚ್ಚರಿಕೆ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment