newsfirstkannada.com

ಭೀಕರ ಮಳೆಗೆ ಡ್ಯಾಂ ಕುಸಿತ.. ಅಲ್ಲಿ 155, ಇಲ್ಲಿ 40 ಮಂದಿ ಸಾವು.. ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಜನರ ಪರದಾಟ

Share :

Published April 30, 2024 at 7:07am

  ವಿಪರೀತ ಮಳೆ.. ನೀರಿನ ರಭಸಕ್ಕೆ ಪಲ್ಟಿಯಾಗ್ತಿರೋ ವಾಹನಗಳು

  ಮನೆ-ಮಠವನ್ನ ಕೊಚ್ಚಿಕೊಂಡು ಹೋಗ್ತಿರೋ ಪ್ರವಾಹ

  ಮನೆಯ ಮೇಲೇರಿ ಪ್ರಾಣ ಉಳಿಸಿಕೊಳ್ಳಲು ಪರದಾಟ

ಭೀಕರ ಮಳೆ ಹಾಗೂ ಅಣೆಕಟ್ಟು ಕುಸಿತದಿಂದ ಕಂಗಾಲಾಗಿರೋ ಕಿನ್ಯಾ ದೇಶ ಸಂಕಷ್ಟಕ್ಕೆ ಸಿಲುಕಿದೆ. ವರುಣಾರ್ಭಟಕ್ಕೆ ಕಿನ್ಯಾದಲ್ಲಿ 40 ಮಂದಿ ಪ್ರಾಣ ಕಳೆದುಕೊಂಡಿದ್ದು, ಇಡೀ ದೇಶದ ಚಿತ್ರಣವೇ ಬದಲಾಗಿಹೋಗಿದೆ. ಮಳೆರಾಯನ ಅಬ್ಬರಕ್ಕೆ ಜನರ ಬದುಕು ಮುರಾಬಟ್ಟೆಯಾಗಿದ್ದು ಪ್ರವಾಹದ ಪಾಶ ಜನರ ಜೀವ ಹಿಂಡುತ್ತಿದೆ.

ಎತ್ತ ನೋಡಿದ್ರು ನೀರು. ಜಲಾವೃತವಾಗಿರೋ ಜನವಸತಿ ಪ್ರದೇಶ. ಆಟಿಕೆಗಳಂತೆ ತೇಲಿಹೋಗ್ತಿರೋ ವಾಹನ. ಪ್ರವಾಹದಿಂದ ಪಾರಾಗಲು ಜನರ ಪರದಾಟ. ಈ ದೃಶ್ಯಗಳೇ ಹೇಳ್ತಿವೇ ಅದ್ಯಾವ ಮಟ್ಟಿಗೆ ವರುಣಾ ಇಲ್ಲಿ ಅಬ್ಬರಿಸಿ ಬೊಬ್ಬರಿದಿದ್ದಾನೆ. ಅಷ್ಟಕ್ಕೂ ಈ ದೃಶ್ಯಗಳು ಆಫ್ರಿಕಾ ಖಂಡದಲ್ಲಿರುವ ಪುಟ್ಟ ದೇಶ ಕೀನ್ಯಾದ್ದು.

ಕೀನ್ಯಾದಲ್ಲಿ ಅಣೆಕಟ್ಟು ಕುಸಿದು 40 ಜನರ ಸಾವು

ಕೀನ್ಯಾದ ರಾಜಧಾನಿ ನೈರೋಬಿಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಗ್ರೇಟ್ ರಿಫ್ಟ್ ವ್ಯಾಲಿ ಪ್ರದೇಶದ ಹಳೆಯ ಕಿಜಾಬೆ ಅಣೆಕಟ್ಟು ಕುಸಿತಗೊಂಡು ಇಂತದೊಂದು ದುರಂತ ಸಂಭವಿಸಿದೆ. ಕೀನ್ಯಾದಲ್ಲಿ ಕಳೆದೊಂದು ವಾರದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಡ್ಯಾಂಗಳು ಭರ್ತಿಯಾಗಿದೆ. ಭರ್ತಿಯಾಗಿದ್ದ ಕಿಜಾಬೆ ಅಣೆಕಟ್ಟು, ಕುಸಿದಿದೆ. ಪರಿಣಾಮ ಜಲಾಶಯದ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿ, ಸುಮಾರು 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮನೆಗಳು, ರಸ್ತೆಗಳು ಕೊಚ್ಚಿ ಹೋಗಿದ್ದು, ಹಲವು ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: ಸ್ನೇಹಿತನ ಜೊತೆಗೆ ಬೈಕ್​ ಸವಾರಿ.. ಹಿಟ್​​ ಅಂಡ್​​ ರನ್​ಗೆ ಸವಾರ ಬಲಿ

ಜಲಾಶಯ ಕುಸಿತದಿಂದ ಅಪಾರ ಪ್ರಮಾಣ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿ, ಅಲ್ಲೋಲ ಕಲ್ಲೊಲ ಸೃಷ್ಟಿಸಿದೆ. ಮನೆಗಳೆಲ್ಲ ಕೆಸರು ಮಯವಾಗಿವೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಅಂತ ರಕ್ಷಣಾ ಪಡೆಗಳು ತಿಳಿಸಿವೆ. ಇನ್ನು ಜೋರು ಮಳೆಯಿಂದಾಗಿ ಪೂರ್ವ ಆಫ್ರಿಕಾದ ಹಲವು ಪ್ರದೇಶಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಟಾಂಜಾನಿಯಾದಲ್ಲಿ ಈಗಾಗಲೇ 155 ಜನರು ಸಾವನ್ನಪ್ಪಿದ್ದಾರೆ. ಬುರುಂಡಿಯಲ್ಲಿ 2,00,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ದೇಶದ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ.

ಒಟ್ಟಿನಲ್ಲಿ ಭೀಕರ ಮಳೆ ಹಾಗೂ ಅಣೆಕಟ್ಟು ಕುಸಿತದಿಂದ ಕಿನ್ಯಾದ ಲಕ್ಷಕ್ಕೂ ಅಧಿಕ ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಅನೇಕ ಜನರು ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ.. ಎಡೆಬಿಡದೇ ಸುರಿಯುತ್ತಿರೋ ಮಳೆಯಿಂದ ಕಾಪಾಡು ದೇವರೇ ಅಂತ ಕಿನ್ಯಾ ಜನತೆ ದೇವರಲ್ಲಿ ಮೊರೆ ಇಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಮಳೆಗೆ ಡ್ಯಾಂ ಕುಸಿತ.. ಅಲ್ಲಿ 155, ಇಲ್ಲಿ 40 ಮಂದಿ ಸಾವು.. ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಜನರ ಪರದಾಟ

https://newsfirstlive.com/wp-content/uploads/2024/04/Kinya.jpg

Load More