ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ

author-image
Ganesh
Updated On
ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ
Advertisment
  • ಕಳೆದೊಂದು ವಾರದಿಂದ ಮಹಾ ಪ್ರವಾಹ ಉಂಟಾಗಿದೆ
  • ಸುಮಾರು 2 ಲಕ್ಷ ಮಂದಿ ಬೀದಿಗೆ ಬಂದಿರುವ ವರದಿ ಇದೆ
  • 100ಕ್ಕೂ ಹೆಚ್ಚು ಗಂಜಿ ಕೇಂದ್ರಗಳಲ್ಲಿ ಸಂತ್ರಸ್ತರ ಆರೈಕೆ

ಕೀನ್ಯಾ ಮತ್ತು ತಂಜಾನಿಯಾದಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗ್ತಿದ್ದು ರಸ್ತೆಗಳೆಲ್ಲ ನದಿಯಂತಾಗಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಹಾಗೂ ಸಾಕು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರವಾಹದಿಂದಾಗಿ ಸುಮಾರು 350ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹಕ್ಕೆ ಮನೆಗಳು, ರಸ್ತೆಗಳು ಕೊಚ್ಚಿ ಹೋಗಿದ್ದು, ಹಲವು ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಇನ್ನೂ ಭೀಕರ ಮಳೆಯಿಂದಾಗಿ ಕಿನ್ಯಾದ ಲಕ್ಷಕ್ಕೂ ಅಧಿಕ ಜನರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ:Breaking News: ರಾಯಚೂರಲ್ಲಿ ಹೃದಯ ವಿದ್ರಾವಕ ಘಟನೆ.. ಇಬ್ಬರ ಬಲಿ ಪಡೆದ ರಣ ಬಿಸಿಲು

publive-image

ಅಲ್ಲಿನ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, 100ಕ್ಕೂ ಹೆಚ್ಚು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. 90 ಜನರು ಕಾಣೆಯಾಗಿದ್ದಾರೆ. 27500 ಮಂದಿಯನ್ನು ಕ್ಯಾಂಪ್​ನಲ್ಲಿರಿಸಿ ಆರೈಕೆ ಮಾಡಲಾಗುತ್ತಿದೆ. ಸುಮಾರು 1,90,000 ಜನರು ಪ್ರವಾಹ ಮತ್ತು ಮಳೆಯಿಂದಾಗಿ ಬೀದಿಗೆ ಬಂದಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ:ಹವಾಮಾನ ಇಲಾಖೆಯಿಂದ RCB ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್​.. ಆತಂಕ ಶುರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment