/newsfirstlive-kannada/media/post_attachments/wp-content/uploads/2025/07/NIMISHA_PRIYA.jpg)
ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾಳ (Nurse from Kerala, Nimisha Priya) ಮರಣದಂಡನೆ ಪ್ರಕರಣ ತಿರುವು ಪಡೆದುಕೊಂಡಿದೆ. ನಿಮಿಷಾ ಪ್ರಿಯಾ ಕುಟುಂಬವು ‘ರಕ್ತದ ಹಣ’ (Blood Money) ನೀಡುವ ಪ್ರಸ್ತಾಪವನ್ನು ಮೃತನ ಕುಟುಂಬವು ತಿರಸ್ಕರಿಸಿದೆ. ಜೊತೆಗೆ ಮರಣದಂಡನೆ ಶಿಕ್ಷೆಯನ್ನ ಸದ್ಯಕ್ಕೆ ಮುಂದೂಡಲಾಗಿದೆ. ಹೀಗಾಗಿ ಈ ಪ್ರಕರಣ ಮುಂದೆ ಏನಾಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ನಿಮಿಷಾ ಪ್ರಿಯಾ ತನ್ನ ಬಿಸಿನೆಸ್ ಪಾರ್ಟ್ನರ್ ತಲಾಲ್ ಅಬ್ದೊಲ್ ಮೆಹದಿ (Talal Abdol Mehdi)ಕೊ*ಲೆ ಆರೋಪದಲ್ಲಿ ತಪ್ಪಿತಸ್ಥಳೆಂದು ಸಾಬೀತಾಗಿದೆ. 2018ರಲ್ಲಿ ಯೆಮೆನ್ ಕೋರ್ಟ್ ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಕಳೆದ ಜನವರಿಯಲ್ಲಿ ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ (Rashad al-Alimi) ಅವರು ಗಲ್ಲು ಶಿಕ್ಷೆಯನ್ನು ಅನುಮೋದಿಸಿದರು. ಅಂತೆಯೇ ನಿಮಿಷಾರನ್ನು ಜುಲೈ 16 ರಂದು ಗಲ್ಲಿಗೇರಿಸಬೇಕಿತ್ತು. . ಕೇರಳದ ಧರ್ಮಗುರು ಅಬು ಬಕರ್ (Sheikh Abubakr Ahmad) ಅವರ ಹಸ್ತಕ್ಷೇಪದಿಂದಾಗಿ ನೇಣು ಹಾಕುವಿಕೆಯನ್ನು ಮುಂದೂಡಲಾಗಿದೆ.
ಇದನ್ನೂ ಓದಿ: ಇಂದೋರ್ ದೇಶದ No.1 ಸ್ವಚ್ಛ ನಗರ.. ಮೈಸೂರಿಗೆ ಎಷ್ಟನೇ ಸ್ಥಾನ..?
ಇತ್ತ, ಭಾರತ ಸರ್ಕಾರ ಕೂಡ ಆಕೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಯೆಮೆನ್‌ನಲ್ಲಿ ಮರಣದಂಡನೆ ಅನುಭವಿಸ್ತಿರುವ ನಿಮಿಷಾ ಪ್ರಿಯಾರನ್ನು ಉಳಿಸಲು ‘ರಕ್ತ ಹಣ’ ಮಾತ್ರ ಏಕೈಕ ಮಾರ್ಗ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಅನೇಕ ಇಸ್ಲಾಮಿಕ್ ದೇಶಗಳಲ್ಲಿ ಪ್ರಚಲಿತದಲ್ಲಿರುವ ಷರಿಯಾ ಕಾನೂನಿನ ಅಡಿಯಲ್ಲಿ (Sharia law) ಇಂತಹ ಪಾವತಿಗಳನ್ನು ಅನುಮತಿಸಲಾಗಿದೆ.
ಷರಿಯಾ ಕಾನೂನಿನ ಅಡಿಯಲ್ಲಿ ರಕ್ತದ ಹಣ ಹೇಗೆ ಕೆಲಸ ಮಾಡ್ತಿದೆ..?
ಷರಿಯಾ ಕಾನೂನಿನಲ್ಲಿ ಖಿಸಾಸ್ (Qisas) ಎಂಬ ಷರಿಯಾ ಕಾನೂನನ್ನು ಆಧರಿಸಿದೆ. ಇದರರ್ಥ ಸಾವಿಗೆ ಮರಣದಂಡನೆ. ಕೊಲೆಯ ಬಳಿಕ ಸಂತ್ರಸ್ತ ಕುಟುಂಬವು ಅಪರಾಧಿಗೆ ಮರಣದಂಡನೆಯನ್ನು ಶಿಕ್ಷೆಯಾಗಿ ಕೋರಬಹುದು. ಇಸ್ಲಾಮಿಕ್ ಷರಿಯಾ ಕಾನೂನಿನಲ್ಲಿ, ರಕ್ತದ ಹಣವನ್ನು ದಿಯಾ ಎಂದೂ ಕರೆಯುತ್ತಾರೆ.
ಇದನ್ನೂ ಓದಿ: ಯೆಮೆನ್‌ನಲ್ಲಿ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಮುಂದೂಡಿಕೆ.. ಕಾರಣವೇನು..?
ಉದಾಹರಣೆಗೆ: ಕೊಲೆ ಅಥವಾ ಗಂಭೀರ ಅಪರಾಧದ ಮಾಡಿದ ಅಪರಾಧಿಯು ಬಲಿಪಶುವಿನ ಕುಟುಂಬಕ್ಕೆ ಆರ್ಥಿಕ ಪರಿಹಾರ ನೀಡುತ್ತಾನೆ. ಷರಿಯಾ ಕಾನೂನಿನ ಪ್ರಕಾರ, ಕೊಲೆ ಎರಡು ವಿಧವಾಗಿದೆ. ಒಂದು ಉದ್ದೇಶಪೂರ್ವಕ ಮತ್ತು ಇನ್ನೊಂದು ಆಕಸ್ಮಿಕ ಕೊಲೆ. ಉದ್ದೇಶ ಪೂರ್ವಕ ಕೊಲೆ ಮಾಡಿದ್ದರೆ ಅದಕ್ಕೆ ಶಿಕ್ಷೆ, ಮರಣ ಅಥವಾ ಅಪರಾಧ ಮಾಡಿದ ವಿಧಾನದ ಪ್ರಕಾರ ವಿಧಿಸಲಾಗುತ್ತದೆ.
ಕೊಲೆ ಆಕಸ್ಮಿಕವಾಗಿದ್ದರೆ ನಿಯಮ (4:92) ಪ್ರಕಾರ: ಶಿಕ್ಷೆಯು ಸುಲಿಗೆ ಅಥವಾ ರಕ್ತದ ಹಣವಾಗಿರುತ್ತದೆ. ಆದರೆ ಮೃತರ ಉತ್ತರಾಧಿಕಾರಿಗಳು ಸ್ವ-ಇಚ್ಛೆಯಿಂದ ಶಿಕ್ಷೆ ಬೇಡ ಎಂದು ಹೇಳಬೇಕು. ಆಗ ಬಲಿಪಶುವಾದ ಕುಟುಂಬವು ಒಪ್ಪಿದ ಮೊತ್ತವನ್ನು ಸರಿಯಾದ ರೀತಿಯಲ್ಲಿ ಪಾವತಿ ಮಾಡಬೇಕು. ಇದು ಕೊಲೆಗಾರನ ಕರ್ತವ್ಯ. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸುವುದಾಗಿದೆ.
ಈ ಹಿಂದೆ ಇಂಥ ಪ್ರಕರಣ ನಡೆದಿದೆ..
ಈ ಹಿಂದೆ ಅಪರಾಧಿಯೊಬ್ಬರ ವಿರುದ್ಧದ ಮರಣದಂಡನೆ ಪ್ರಕರಣವನ್ನು ಕೈಬಿಡಲಾಗಿದೆ. ಅದು ಕೇರಳದ ಅಬ್ದುಲ್ ರಹೀಮ್ ಪ್ರಕರಣ. ಅಬ್ದುಲ್ ರಹೀಮ್ ತನಗೆ ಉದ್ಯೋಗ ನೀಡಿದ್ದ ವ್ಯಕ್ತಿಯ ಮಗನನ್ನು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಸೌದಿ ಅರೇಬಿಯಾದಲ್ಲಿ ಅಬ್ದುಲ್ ರಹೀಮ್ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ. ಬಲಿಪಶುವಿನ ಕುಟುಂಬವು ದೊಡ್ಡ ಮೊತ್ತವನ್ನು ಪಾವತಿಸಿದ ನಂತರ ರಹೀಮ್ನನ್ನು ಕ್ಷಮಿಸಿದೆ. ಅದಾದ ನಂತರವೂ ಪ್ರಕರಣ ಅಲ್ಲಿಗೆ ಮುಗಿದಿರಲಿಲ್ಲ. 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು. ಈಗಾಗಲೇ ಆತ ಹಲವು ವರ್ಷ ಜೈಲಿನಲ್ಲಿದ್ದ ಕಾರಣ, ಆ ಸಮಯವನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಈ ಪ್ರಕರಣವು 2006 ರಲ್ಲಿ ನಡೆದಿದ್ದು, 2018ರಲ್ಲಿ ಆತನಿಗೆ ಕ್ಷಮಾದಾನ ನೀಡಲಾಯಿತು. 2019ರಲ್ಲಿ ಜೈಲಿನಿಂದ ಬಿಡುಗಡೆಯಾದ.
ಇದನ್ನೂ ಓದಿ: ರಕ್ತ ಹಣ ಬೇಡ ಎಂದ ಸಂತ್ರಸ್ತ ಕುಟುಂಬ; ನಿಮಿಷಾಳ ಉಳಿಸಿಕೊಳ್ಳಲು ಎಷ್ಟು ಕೋಟಿ ನೀಡಲು ಸಿದ್ಧವಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ