ಕೇರಳ ಸಮುದಾಯದಿಂದ ಪಾಕ್​ ಮಾಜಿ ಕ್ರಿಕೆಟರ್ ಶಾಹಿದಿ​ ಅಫ್ರಿದಿಗೆ ಗ್ರ್ಯಾಂಡ್​ ವೆಲ್​ಕಮ್​.. ಆಕ್ರೋಶ!

author-image
Bheemappa
Updated On
ಕೇರಳ ಸಮುದಾಯದಿಂದ ಪಾಕ್​ ಮಾಜಿ ಕ್ರಿಕೆಟರ್ ಶಾಹಿದಿ​ ಅಫ್ರಿದಿಗೆ ಗ್ರ್ಯಾಂಡ್​ ವೆಲ್​ಕಮ್​.. ಆಕ್ರೋಶ!
Advertisment
  • ಕೇರಳ ಹಾಗೂ ಅಲ್ಲಿನ ಆಹಾರದ ಬಗ್ಗೆ ಅಫ್ರಿದಿ ಏನ್ ಹೇಳಿದರು?
  • ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಸ್ವಾಗತ ಮಾಡಿದ ಸಮುದಾಯ
  • ಕೇರಳ ಸಮುದಾಯದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ

ದುಬೈನಲ್ಲಿರುವ ಕೇರಳದ ಸಮುದಾಯವೊಂದು ತಮ್ಮ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಶಾಹಿದ್ ಅಫ್ರಿದಿ ಅವರನ್ನು ಕರೆಸಿ ಗ್ರ್ಯಾಂಡ್ ವೆಲ್​ಕಮ್ ಮಾಡಿದೆ. ಸದ್ಯ ಈ ಸಂಬಂಧ ಕೇರಳದ ಸಮುದಾಯವು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾಗುತ್ತಿದೆ.

ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯನ್ನು ದುಬೈನಲ್ಲಿರುವ ಕೇರಳದ ಸಮುದಾಯದವರು ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗ್ರ್ಯಾಂಡ್​ ವೆಲ್​​ಕಮ್ ಮಾಡಿದಕ್ಕೆ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಫ್ರಿದಿ ಆಗಮಿಸುತ್ತಿದ್ದಂತೆ, ಸಮುದಾಯದ ಮುಖ್ಯಸ್ಥರು, ಸದಸ್ಯರು ಹಾಗೂ ಜನರು ತಮ್ಮ ಸಾಂಸ್ಕೃತಿಕ ಪ್ರದರ್ಶನ ನಿಲ್ಲಿಸಿ ಅವರಿಗೆ ಸ್ವಾಗತ ಕೋರಿದ್ದಾರೆ ಎಂದು ಹೇಳಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಕ್ರಿಕೆಟರ್​ ಅಫ್ರಿದಿ, ನನ್ನನ್ನು ಇಂತಹ ಅದ್ಧೂರಿ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಕ್ಕೆ ಇಲ್ಲಿದ್ದ ಎಲ್ಲರಿಗೂ ಧನ್ಯವಾದಗಳು ಹೇಳಿದರು. ಬಳಿಕ ಮಾತನಾಡುತ್ತ ನನಗೆ ಕೇರಳ ಹಾಗೂ ಕೇರಳದ ಆಹಾರ ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.

ಇದನ್ನೂ ಓದಿ: 1 ಸಿಕ್ಸ್​​, 24 ಬೌಂಡರಿ, 186 ರನ್​ ಚಚ್ಚಿದ ಕರುಣ್.. ಬ್ರಿಟಿಷ್​ ನೆಲದಲ್ಲಿ ಕನ್ನಡಿಗನ ಬ್ಯಾಟಿಂಗ್ ವೈಭವ?

publive-image

ಭಾರತ ಹಾಗೂ ಪಾಕಿಸ್ತಾನದ ನಡುವೆ ಘರ್ಷಣೆ ವೇಳೆ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರಿದಿ, ಭಾರತದ ವಿರುದ್ಧವಾಗಿ ಕಠಿಣವಾಗಿ ಮಾತನಾಡಿದ್ದರು. ಪಾಕಿಸ್ತಾನವನ್ನು ಸಮರ್ಥನೆ ಮಾಡಿಕೊಂಡಿದ್ದ ಅಫ್ರಿದಿ ಭಯೋತ್ಪಾದಕರು ಪಾಕಿಸ್ತಾನದವರಾ?. ಭಾರತದ ಸೈನಿಕರು ಆ ಸ್ಥಳದಲ್ಲಿ ಇದ್ದರೂ ದಾಳಿ ಆಗಿದ್ದು ಹೇಗೆ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದರು. ​

ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಏಪ್ರಿಲ್ 22 ರಂದು 26 ಜನರನ್ನು ಭಯೋತ್ಪಾದಕರು ಬಲಿ ಪಡೆದಿದ್ದರು. ಅಲ್ಲಿದ್ದವರ ಧರ್ಮ ಕೇಳಿ ಉಗ್ರರು ಗುಂಡು ಹಾರಿಸಿ ಹತ್ಯೆಗೈದಿದ್ದರು. ಇದರಿಂದ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಿತ್ತು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಅಫ್ರಿದಿ , ಭಾರತದ ವಿರೋಧಿ ಮಾತುಗಳನ್ನಾಡಿದ್ದರು. ಹೀಗಾಗಿ ಭಾರತದ ಸರ್ಕಾರ ಶಾಹಿದ್ ಅಫ್ರಿದಿಯ ಯೂಟ್ಯೂಬ್ ಚಾನೆಲ್​ ಅನ್ನು ಭಾರತದಲ್ಲಿ ಬ್ಯಾನ್ ಮಾಡಿತ್ತು. ಈ ಎಲ್ಲ ಕಾರಣಗಳಿಂದ ಕೇರಳ ಸಮುದಾಯ ಅಫ್ರಿದಿಯನ್ನ ಆಹ್ವಾನ ಮಾಡಿ, ಸ್ವಾಗತ ಕೋರಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment