ಪೂರ್ವ ಮುಂಗಾರು ಆರ್ಭಟಕ್ಕೆ ದೇವರನಾಡು ತತ್ತರ.. ಪ್ರವಾಹ, ನದಿಗಳಂತಾದ ರಸ್ತೆಗಳು

author-image
AS Harshith
Updated On
ಪೂರ್ವ ಮುಂಗಾರು ಆರ್ಭಟಕ್ಕೆ ದೇವರನಾಡು ತತ್ತರ.. ಪ್ರವಾಹ, ನದಿಗಳಂತಾದ ರಸ್ತೆಗಳು
Advertisment
  • ಜೂನ್​ 1ರಂದು ಮುಂಗಾರು ಪ್ರವೇಶ ಮಾಡಲಿದೆ
  • ದೇವರನಾಡಲ್ಲಿ ವರುಣನ ರುದ್ರತಾಂಡವ ಶುರುವಾಗಿದೆ
  • ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಗಳೆಲ್ಲ ಜಲಾವೃತವಾಗಿವೆ

ದೇವರ ನಾಡು ಕೇರಳದಲ್ಲಿ ಮಳೆರಾಯ ಆಗಾಗ ಬಂದು ಕಣ್ಣಾ ಮುಚ್ಚಾಲೆ ಆಟ ಆಡ್ತಿದ್ದ. ಆದರೆ ಹಲವು ಕಡೆಗಳಲ್ಲಿ ಮಳೆರಾಯನ ಸಿಂಚನ ರೈತರ ಮೊಗದಲ್ಲಿ ಖುಷಿ ತರಿಸಿದ್ರೆ, ಇನ್ನೂ ಹಲವೆಡೆ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿ ಮಾಡಿದ್ದಾನೆ.

ನದಿಗಳಂತಾದ ರಸ್ತೆಗಳು.. ವಾಹನ ಸವಾರರ ಪರದಾಟ

ಜೂನ್​ 1ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಲಿದೆ. ಆದರೆ ಅದಕ್ಕೂ ಮುನ್ನ ದೇವರನಾಡಲ್ಲಿ ವರುಣನ ರುದ್ರತಾಂಡವ ಶುರುವಾಗಿದೆ. ಮುಂಗಾರು ಪೂರ್ವ ವರುಣಾರ್ಭಟಕ್ಕೆ ಕೇರಳದಲ್ಲಿ ಜಲ ಕಂಟಕ ಎದುರಾಗಿದೆ.

ಎರ್ನಾಕುಲಂ: ಧಾರಾಕಾರ ಮಳೆಗೆ ಕೆರೆಯಂತಾದ ರಸ್ತೆಗಳು

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಗಳೆಲ್ಲ ಜಲಾವೃತವಾಗಿವೆ. ರಸ್ತೆಗಳಲ್ಲಿ ಮಳೆ ನೀರು ಜೊತೆ ಮರಗಳು ಕಸ-ಕಡ್ಡಿಗಳು ರಸ್ತೆಯಲ್ಲಿ ಬಿದ್ದಿವೆ. ಅಷ್ಟೆಯಲ್ಲ ಈ ರಸ್ತೆಗಳಲ್ಲಿ ವಾಹನಗಳು ಚಲಿಸಲು ಆಗುತ್ತಿಲ್ಲ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಇನ್ನು ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, ಸಂಚಾರ ಅಸ್ತವ್ಯವಸ್ತಗೊಂಡಿದೆ.


">May 28, 2024

ಕೊಚ್ಚಿ: ರಸ್ತೆಯಲ್ಲಿ ಮೊಳಕಾಲುದ್ದ ನೀರು, ಸವಾರರ ಪರದಾಟ

ಅಬ್ಬರಿಸಿ ಬೊಬ್ಬಿರಿದ ಮಳೆಯಿಂದಾಗಿ ಕೇರಳದಲ್ಲಿ ರಸ್ತೆಗಳು ಸಂಪೂರ್ಣವಾಗಿ ಮುಳುಗಿ ಹೋಗಿವೆ. ರಸ್ತೆಯ ಮೇಲೆ ಮೊಣಕಾಲುದ್ದ ಮಳೆ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದಾಗಿದ್ದಾರೆ. ಇನ್ನೂ ಕೊಚ್ಚಿ ಬಗರದಲ್ಲಿರುವ ಲುಲು ಮಾರ್ಕೆಟ್​ ಬಳಿಯ ರಸ್ತೆ ಎತ್ತ ನೋಡಿದ್ರೂ ಜಲರಾಶಿ. ನದಿಗಳಂತಾಗಿರೋ ರಸ್ತೆಗಳೇ ಕಾಣ್ತಿದ್ವು.


">May 28, 2024

ಕೊಚ್ಚಿ ಏರ್​ಪೋರ್ಟ್​​: ಮಳೆ ಅಬ್ಬರಕ್ಕೆ ಏರ್​ಪೋರ್ಟ್ ಸಿಬ್ಬಂದಿ ಕಂಗಾಲು

ವರುಣನ ಅಬ್ಬರಕ್ಕೆ ಕೇರಳದ ಕೊಚ್ಚಿ ನಗರ ಕೆರೆಯಂತಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಏರ್ಪೋರ್ಟ್​ ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿ ನಿರಂತರವಾಗಿದ್ದರು. ಮಳೆಯ ನಡುವೆ ಕೈಯಲ್ಲಿ ಕೊಡೆ ಹಿಡಿದು ಪ್ರಯಾಣಿಕರನ್ನು ಕರೆತರುತ್ತಿದ್ದ ದೃಶ್ಯಗಳು ಕಂಡು ಬಂದ್ವು.


">May 28, 2024

ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣಾ ಕಾರ್ಯ

ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯಲ್ಲಿ ಭಾರೀ ಅವಾಂತರ ಸಂಭವಿಸಿದೆ. ಮಳೆ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿ, ಜನರು ಕಂಗಾಲಾಗಿದ್ದಾರೆ. ಇನ್ನು ಪ್ರವಾಹದಲ್ಲಿ ಸಿಲುಕಿದ್ದವರನ್ನು ಬೋಟ್​ಗಳ ಮೂಲಕ ರಕ್ಷಣೆ ಮಾಡಲಾಯ್ತು.


">May 28, 2024

ಒಟ್ಟಾರೆ, ಕೇರಳದ ಎರ್ನಾಕುಲಂ, ಕೊಚ್ಚಿ, ತಲಸೆರಿ, ಇರಟ್ಟುಪೆಟ್ಟ ಸೇರಿ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಇವತ್ತು ಕೂಡ ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜೂನ್​ 1ರವರೆಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

Advertisment