ದುಡ್ಡಿಗಾಗಿ ಮತ್ತೊಬ್ಬನನ್ನು ಮದುವೆ ಆಗೋ ಆಸೆ; ಪ್ರೀತಿಸಿದ ಹುಡುಗನ ಜೀವವನ್ನೇ ತೆಗೆದ ಯುವತಿ

author-image
Ganesh Nachikethu
Updated On
ದುಡ್ಡಿಗಾಗಿ ಮತ್ತೊಬ್ಬನನ್ನು ಮದುವೆ ಆಗೋ ಆಸೆ; ಪ್ರೀತಿಸಿದ ಹುಡುಗನ ಜೀವವನ್ನೇ ತೆಗೆದ ಯುವತಿ
Advertisment
  • ಜಾತಕ ದೋಷ ಅಂತ ಪ್ರಿಯಕರನಿಗೆ ಕತೆ ಕಟ್ಟಿದ್ದಳು ಗ್ರೀಷ್ಮ
  • ಏನೇ ಆದರೂ ನಿನ್ನ ಕೈಬಿಡಲ್ಲ ಅಂತ ಹಠ ಹಿಡಿದಿದ್ದ ಆತ..!
  • ಎರಡು ವರ್ಷಗಳ ಬಳಿಕ ತೀರ್ಪು, ಮರಣದಂಡನೆ ಪ್ರಕಟ

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿ ಅಪ್ಪ-ಅಮ್ಮ ನೋಡಿದ ಹುಡುಗನನ್ನೇ ಮದುವೆ ಆಗಲು ಮನಸ್ಸು ಮಾಡಿದ ಯುವತಿಯೊಬ್ಬಳು ತನ್ನ ಪ್ರೀತಿಗೆ ಎಳ್ಳು ನೀರು ಬಿಡೋಕೆ ರೆಡಿ ಆಗಿದ್ದಳು. ಆದ್ರೆ ತನ್ನ ಪ್ರಿಯಕರನಿಂದ ದೂರ ಆಗಲು ಆಕೆ ಮಾಡಿದ ಐಡಿಯಾ ಮಾತ್ರ ಭಿನ್ನ. ಇದೇ ಕಾರಣಕ್ಕೆ ಆಕೆ ಸದ್ಯ ದೇಶವ್ಯಾಪಿ ಸುದ್ದಿಯಾಗಿಬಿಟ್ಟಿದ್ದಾಳೆ.

ಆಕೆ 23 ವರ್ಷದ ರೇಡಿಯಾಲಜಿ ವಿದ್ಯಾರ್ಥಿನಿ. ಹೆಸರು ಗ್ರೀಷ್ಮ, ನೋಡೋಕೆ ಸುಂದರವಾಗಿರುವ ಈಕೆ ಶರೋನ್​ ಎಂಬ ಯುವಕನ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಪ್ರೀತಿ, ಪ್ರೇಮ ಅಂತ ಒಂದು ವರ್ಷದಿಂದ ಕೇರಳದ ತಿರುವನಂತಪುರಂನ ಪಾರ್ಕ್​, ಥಿಯೇಟೆರ್​ಗಳನ್ನ ಸುತ್ತಾಡಿದ್ದರು. ಈ ಮಧ್ಯೆ ಮನೆಯಲ್ಲಿ ಬೆಳೆದು ನಿಂತ ಮಗಳನ್ನ ದಡ ಸೇರಿಸೋ ಕನಸು ಕಟ್ಟಿದ್ದ ಗ್ರೀಷ್ಮ ಪೋಷಕರು ಆಕೆಗೆ ವರ ಹುಡುಕುವ ಕೆಲಸಕ್ಕೆ ಕೈಹಾಕಿದ್ದರು. ಆದರೆ ಶರೋನ್​ನನ್ನ ಪ್ರೀತಿ ಮಾಡ್ತಿದ್ದ ಗ್ರೀಷ್ಮ ಪೋಷಕರು ತೋರಿಸಿದ ವರನನ್ನ ಒಲ್ಲೆ ಎನ್ನದೆ ಆತನನ್ನೇ ಮದುವೆಯಾಗುವುದಾಗಿ ತಲೆಯಾಡಿಸಿದ್ದಳು. ಅಪ್ಪ-ಅಮ್ಮ ಸೆಲೆಕ್ಷನ್​ ಮಾಡಿದ್ದ ವರನ ಬ್ಯಾಗ್​ ಗ್ರೌಂಡ್​ಗೆ ಮನಸೋತಿದ್ದ ಯುವತಿ ಆತನನ್ನ ಮದುವೆ ಆಗಿ ಲಗ್ಸುರಿ ಜೀವನ ನಡೆಸುವ ಹಂಬಲದಲ್ಲಿದ್ದಳು.

publive-image

ಜಾತಕ ದೋಷ ಅಂತ ಪ್ರಿಯಕರನಿಗೆ ಕತೆ ಕಟ್ಟಿದ್ದಳು ಗ್ರೀಷ್ಮ

ಅಪ್ಪ-ಅಮ್ಮ ನೋಡಿದ ವರನನ್ನ ಮದುವೆ ಆಗೋಕೆ ತುದಿಗಾಲಲ್ಲಿ ನಿಂತಿದ್ದ ಗ್ರೀಷ್ಮ ಶರೋನ್ ಜೊತೆಗಿನ ಒಂದು ವರ್ಷದ ಪ್ರೀತಿಗೆ ಎಳ್ಳು ನೀರು ಬಿಡೋಕೆ ಪ್ಲಾನ್​ ಮಾಡಿದ್ದಳು. ಶರೋನ್​ನಿಂದ ದೂರಾಗಲು ಜಾತಕ ದೋಷದ ಕತೆ ಕಟ್ಟಿದ ಗ್ರೀಷ್ಮ ನೀನು ನನ್ನ ಮದುವೆ ಆದರೆ ಸಾಯ್ತಿಯಾ, ನನ್ನ ಜಾತಕದಲ್ಲಿ ದೋಷ ಇದೆ ಅಂತ ಶರೋನ್​ನನ್ನ ಯಾಮಾರಿಸೋಕೆ ಮುಂದಾಗಿದ್ದಳು. ಆದರೆ ಗ್ರೀಷ್ಮಳನ್ನ ಮನಸಾರೆ ಮೆಚ್ಚಿದ್ದ ಶರೋನ್ ಆದೇನೆ ಆದ್ರೂ ನಾ ಮಾತ್ರ ನಿನ್ನ ಕೈ ಬಿಡಲ್ಲ ಅಂತ ಹಠ ಹಿಡಿದಿದ್ದ.

ಗ್ರೀಷ್ಮ ನೀಡಿದ ಜ್ಯೂಸ್​ ಸವಿದ ಶರೋನ್​ಗೆ ಕಾದಿತ್ತು ಸಾವಿನ ಶಾಕ್​

ಶರೋನ್​ನನ್ನ ದೂರ ಮಾಡಲು ಜಾತಕ ದೋಷದ ಪ್ಲಾನ್​ ಮಾಡಿ ಫೇಲ್​ ಆಗಿದ್ದೇ ತಡ ಗ್ರೀಷ್ಮ ಆತನ ಕತೆಯನ್ನೇ ಮುಗಿಸೋಕೆ ಖತರ್ನಾಕ್​ ಸ್ಕೆಚ್​ ಹಾಕಿದ್ದಳು. ಶರೋನ್​ನನ್ನ ಮನೆಗೆ ಆಮಂತ್ರಿಸಿದ್ದ ಗ್ರೀಷ್ಮ ವರನ ನೋಡಲು ಬಂದಾಗ ಯುವತಿ ನಾಚಿ ನೀರಾಗಿ ಜ್ಯೂಸ್​ ನೀಡುವಂತೆ ಜ್ಯೂಸ್​ ಲೋಟವನ್ನ ಶರೋನ್​ ಕೈಲಿಟ್ಟಿದ್ದಳು. ಗ್ರೀಷ್ಮ ಮೇಲೆ ಬೆಟ್ಟದಷ್ಟು ಆಸೆ ಇಟ್ಟಿದ್ದ ಶರೋನ್ ಆಕೆಯ ಮೋಸದಾಟದ ಮಾರ್ಜಾಲವನ್ನ ಅರಿಯದೇ ಜ್ಯೂಸ್​ ಅನ್ನ ಕುಡಿದು ಬಿಟ್ಟಿದ್ದ. ಆದರೆ ಜ್ಯೂಸ್​ಗೆ ಗ್ರೀಷ್ಮ ಮೊದಲೇ ಮಾಡಿದ್ದ ಪ್ಲಾನ್​ನಂತೆ ಕೀಟನಾಶಕ ಬೆರೆಸಿ ಇಟ್ಟಿದ್ದಳು. ಜ್ಯೂಸ್​​ ಸೇವಿಸಿ ನಗುಮೊಗದಿಂದ ಗ್ರೀಷ್ಮ ಜೊತೆ ಹೆರಟೆ ಹೊಡೆದು ಮನೆಗೆ ತೆರಳಿದ್ದ ಶೆರೋನ್​ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲೇ ಕೊನೆಯುಸಿರೆಳೆದಿದ್ದ.

publive-image

ಯಾರ ಮೇಲೂ ಅನುಮಾನ ಇಲ್ಲ ಎಂದಿದ್ದ ಶರೋನ್​

ಅಸ್ವಸ್ಥನಾಗಿ ತಿರುವನಂತಪುರಂ ಆಸ್ಪತ್ರೆಗೆ ದಾಖಲಾದ ಶೆರೋನ್​ ಅಲ್ಲೂ ಯಾವುದೇ ಅನುಮಾನ ಹೇಳಿಕೊಂಡಿರಲಿಲ್ಲ. ಅತಿಯಾದ ಪ್ರೀತಿಯೋ, ಇಲ್ಲಾ ಪ್ರೇಯಸಿ ಮೋಸ ಅರಿಯದೇ ಯಾಮಾರಿಯೋ.. ನನಗೆ ಯಾರ ಮೇಲೂ ಅನುಮಾನವಿಲ್ಲ ಅಂತ ಹುಡುಗ ಹೇಳಿಕೆ ನೀಡಿದ್ದ. ಇದಾದ ಕೆಲವೇ ನಿಮಿಷಗಳಲ್ಲಿ ಆತ ಕೊನೆಯುಸಿರೆಳೆದಿದ್ದ. ಆದರೆ ವಿಷ ಸೇವಿಸಿದ್ದು ಯಾಕೆ ಎಂಬ ಪ್ರಶ್ನೆ ಪೊಲೀಸರನ್ನ ಕಾಡತೊಡಗಿತ್ತು. ಕಡೆಗೆ ಗ್ರೀಷ್ಮಳನ್ನ ಕರೆದು ತೀವ್ರವಾದ ವಿಚಾರಣೆ ನಡೆಸಿದಾಗ ಪೊಲೀಸರ ಮುಂದೆ ಮೊದ ಮೊದಲು ನನಗೇನು ಗೊತ್ತಿಲ್ಲ ಎಂದಳು. ಕೊನೆಗೂ ಕೊಲೆ ಮಾಡಿರುವ ಸತ್ಯವನ್ನ ಒಪ್ಪಿಕೊಂಡಿದ್ದಳು.

ಪ್ರೀತಿ ಅಂತ ಒಂದು ವರ್ಷದಿಂದ ಶೆರೋನ್​ ಹಿಂದೆ ಸುತ್ತಿದ್ದ ಗ್ರೀಷ್ಮ ಆಡಂಬರದ ಸಾಂಸಾರಿಕ ಬದುಕಿಗೆ ಮಾರುಹೋಗಿ ಕೊಲೆಗಾತಿ ಆಗಿ ಜೈಲು ಪಾಲಾಗಿದ್ದಾಳೆ. ಇತ್ತ ಪ್ರೇಮವೇ ದೈವ್ಯ ಅಂತ ನಂಬಿದ್ದ ಶರೋನ್​ ಗ್ರೀಷ್ಮಳ ಮೋಸದ ಸಂಚಿಗೆ ಬಲಿಯಾಗಿ ಸಮಾಧಿ ಸೇರಿದ್ದಾನೆ. ಇದ್ದೊಬ್ಬ ಮಗನನ್ನ ಕಳೆದುಕೊಂಡ ಶರೋನ್​ ಪೋಷಕರು ಪುತ್ರ ಶೋಕದಲ್ಲಿ ಮುಳಗಿ ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ:ಜ್ಯೂಸ್ ಕುಡಿತಿಯಾ.. ಅತಿ ಕಿರಿಯ ಯುವತಿಗೆ ಮರಣದಂಡನೆ ಶಿಕ್ಷೆ ಪ್ರಕಟ; ಏನಿದು ಪ್ರಕರಣ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment