/newsfirstlive-kannada/media/post_attachments/wp-content/uploads/2025/07/Haunted-by-guilt.jpg)
ಕರ್ಮ ಯಾರನ್ನೂ ಬಿಡಲ್ಲ, ಮಾಡಿದ ತಪ್ಪಿಗೆ ಪ್ರಾಯಶ್ಚಿತ ಆಗಿಯೇ ತೀರುತ್ತದೆ ಅನ್ನೋ ಮಾತೊಂದು ಇದೆ. ಕೇರಳದ ವ್ಯಕ್ತಿಯೊಬ್ಬ ಅಪರಾಧ ಕೃತ್ಯ ನಡೆಸಿ ಬರೋಬ್ಬರಿ 40 ವರ್ಷಗಳು ಕಳೆದ ಬಳಿಕ ಯಾರಿಗೂ ಗೊತ್ತಿರದ ‘ನಿಗೂಢ ರಹಸ್ಯ’ವನ್ನು ಪೊಲೀಸರ ಮುಂದೆ ಅವಲತ್ತೊಕೊಂಡಿದ್ದಾನೆ. 14ನೇ ವಯಸ್ಸಿನಲ್ಲಿದ್ದಾಗ ತನ್ನಿಂದಾದ ತಪ್ಪನ್ನು ಹೇಳಲು ಠಾಣೆಗೆ ಓಡೋಡಿ ಬಂದು ಕಣ್ಣೀರಿಟ್ಟಿದ್ದಾನೆ. ಇಷ್ಟಕ್ಕೆಲ್ಲ ಕಾರಣ, ತಾನು ಮಾಡಿದ ತಪ್ಪಿಗೆ ಕಾಡುತ್ತಿರುವ ಪಶ್ಚಾತಾಪ ಭಾವ ಮತ್ತು ಈಗ ಆತನ ಬದುಕಿನಲ್ಲಿ ಆಗುತ್ತಿರುವ ದುರಂತಗಳು!
ಇದನ್ನೂ ಓದಿ: ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್​.. ಅತೀ ಕಡಿಮೆ ಬಾಲ್​ಗೆ ಶತಕ ಬಾರಿಸಿ ದಾಖಲೆ..!
ಏನಿದು ಪ್ರಕರಣ..?
ಕತೆಯ ಮೂಲ ಕೇರಳದ ಕೋಝಿಕೊಡೆ ಜಿಲ್ಲೆ. ಮುಹಮ್ಮದಾಲಿ (Muhammadali). ಆತ ಪೊಲೀಸರ ಎದುರು ಹೇಳಿದ ಅಸಲಿ ರಹಸ್ಯ ಹೀಗಿದೆ.. ನಾನು ಕೋಝಿಕೊಡೆ ಜಿಲ್ಲೆಯ ಕೂಡರಂಜಿ ಎಂಬಲ್ಲಿಯ (ಥಿರುವಂಬಡಿ (Thiruvambady police) ಠಾಣೆಯ ವ್ಯಾಪ್ತಿಯ) ದೇವಸ್ಯ ಅನ್ನೋರ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ.. ಆಗ ನನಗೆ ಬರೀ 14 ವಯಸ್ಸು. ಅದು 1986ನೇ ಇಸವಿ. ಹೀಗೆ ಒಂದು ದಿನ ಕೆಲಸ ಮಾಡುತ್ತಿದ್ದೆ. ಈ ವೇಳೆ ಅಲ್ಲಿಗೆ ಬರುವ ವ್ಯಕ್ತಿಯೊಬ್ಬ ನನಗೆ ಕಿರುಕುಳ ನೀಡಲು ಶುರು ಮಾಡಿದ. ಆತ, ಯಾರು ಅಂತಾನೂ ಗೊತ್ತಿಲ್ಲ. ನನಗೆ ಕೋಪ ಬಂತು, ಆತನಿಂದ ನಾನು ಬಚಾಚ್ ಆಗಬೇಕಿತ್ತು. ಹೀಗಾಗಿ ಆತ್ಮರಕ್ಷಣೆಗಾಗಿ ಕಾಲಿನಿಂದ ಒದ್ದುಬಿಟ್ಟೆ. ಆತ ಅಲ್ಲೇ ಪಕ್ಕದಲ್ಲಿದ್ದ ಹೊಳೆಗೆ ಬಿದ್ದುಬಿಟ್ಟ!
ನಾನು ಗಾಬರಿಯಾದೆ, ಅಲ್ಲಿಂದ ಓಡಿದೆ. ಎರಡು ದಿನಗಳ ನಂತರ ಮತ್ತೆ ಅಲ್ಲಿಗೆ ಬಂದು ನೋಡಿದೆ. ಆತನ ಶವ ಅನಾಥವಾಗಿ ನೀರಿನಲ್ಲಿ ಬಿದ್ದಿತ್ತು. ಮತ್ತಷ್ಟು ಭಯ ಶುರುವಾಯ್ತು. ಮುಂದೆ ಏನಾಗುತ್ತೋ ಅನ್ನೋ ಭಯದಲ್ಲಿ ಯಾರಿಗೂ ಹೇಳದೇ ಸುಮ್ಮನಿದ್ದುಬಿಟ್ಟೆ ಎಂದಿದ್ದಾನೆ.
ಮುಂದೇನಾಯ್ತು..?
ಕೊನೆಗೆ ಅದು ಸ್ಥಳೀಯರ ಕಣ್ಣಿಗೆ ಕಂಡಿದೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಲ್ಲಿಗೆ ಬಂದು ಪರಿಶೀಲನೆ ನಡೆಸಿದ್ದರು. ಆ ವ್ಯಕ್ತಿಯ ಮೃತದೇಹವನ್ನು ಗುರುತಿಸಲು ಸ್ಥಳೀಯರಿಂದಲೂ ಸಾಧ್ಯವಾಗಲಿಲ್ಲ. ಸಂಬಂಧಿಕರ ಸುಳಿವು ಕೂಡ ಸಿಗಲಿಲ್ಲ. ಹೀಗಾಗಿ ಆ ಪ್ರಕರಣ ಅಲ್ಲಿಗೆ ತಣ್ಣಗಾಗಿತ್ತು. ನಾನೂ ಕೂಡ ಸತ್ಯ ಹೇಳಲು ಮುಂದೆ ಹೋಗಿಲ್ಲ ಅಂತಾ ಹೇಳಿಕೆ ಕೊಟ್ಟಿದ್ದಾನೆ. ಅಂದು ಸಹಜ ಸಾವು ಅಂತಾ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಕೊನೆಗೆ ಸುಮ್ಮನಾಗಿದ್ದರು ಎನ್ನಲಾಗಿದೆ.
ಈಗ ಏನಾಗಿದೆ..?
ಇದೀಗ ಮುಹಮ್ಮದಾಲಿಗೆ 50 ವರ್ಷ. ಆತನಿಗೆ ತಾನು ಮಾಡಿದ ತಪ್ಪು ಕಾಡುತ್ತಿದೆ. ತನಗೆ ಮತ್ತು ಕುಟುಂಬಕ್ಕೆ ಆಗುತ್ತಿರುವ ಸಂಕಷ್ಟಗಳಿಗೆ ಮರುಗುತ್ತಿದ್ದಾನೆ. ಇಷ್ಟಕ್ಕೆಲ್ಲ ಕಾರಣ ಅಂದು ನಾನು ಮಾಡಿದ ಆ ತಪ್ಪು ಎಂಬ ಭಾವ ಆತನ ಕಾಡಿದೆಯಂತೆ.
ಮನೆಯಲ್ಲಿ ಏನೆಲ್ಲ ಆಗಿದೆ?
ಈತನ ಹಿರಿಯ ಮಗ ಈಗಾಗಲೇ ತೀರಿಕೊಂಡಿದ್ದಾನೆ. ಕಿರಿಯ ಮಗ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ದುರಂತ ಪ್ರಕರಣಗಳಿಂದ ರಾತ್ರಿ ಮನೆಯಲ್ಲಿ ಮಲಗಲು ಆಗುತ್ತಿಲ್ಲ ಅಂತಾ ಪೊಲೀಸರ ಮುಂದೆ ಕಣ್ಣೀರು ಇಟ್ಟಿದ್ದಾನೆ.
ಇದನ್ನೂ ಓದಿ: ‘ನಾನು ಯಾಕೆ ಹೆಣ್ಣಾಗಿ ಹುಟ್ಟಿದೆ’.. ಪವರ್​ ಫುಲ್​ ದೇವಿಯ ಮೊರೆ ಹೋದ ನಟಿ ಭೂಮಿ ಶೆಟ್ಟಿ
40 ವರ್ಷಗಳ ಹಿಂದೆ ನಡೆದ ಘಟನೆಯನ್ನು ಕೇಳಿದ ಕೇರಳ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಆತನ ಹೇಳಿಕೆ ದಾಖಲಿಸಿಕೊಂಡ ಮಲಪ್ಪುರಂ ಜಿಲ್ಲೆಯ ವೆಂಗರಾ ಪೊಲೀಸರು, 1986ರಲ್ಲಿ ನಡೆದ ಪ್ರಕರಣದ ಸ್ಥಳಕ್ಕೆ ಆರೋಪಿಯನ್ನು ಕರೆದುಕೊಂಡು ಹೋಗಿದ್ದರು. ಮೃತದೇಹ ಬಿದ್ದ ಜಾಗವನ್ನು ತೋರಿಸುವಂತೆ ತಿಳಿಸಿದ್ದಾರೆ. ನಂತರ ಅಲ್ಲಿನ ಪೊಲೀಸರು, ಅಂದಿನ ಘಟನೆ ಬಗ್ಗೆ ದಾಖಲಾದ ಫೈಲ್​​ಗಳನ್ನ ಕೆದಕಿದ್ದಾರೆ.
ಆದರೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಒಂದು ಪತ್ರಿಕೆಯ ಚಿಕ್ಕದಾದ ತುಣುಕು ಮಾತ್ರ ಸಿಕ್ಕಿದೆ. ಅದರಲ್ಲಿ ಕೂಡರಂಜಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಇಲ್ಲಿನ ಮಿಷನ್ ಆಸ್ಪತ್ರೆ ಬಳಿಯಿರುವ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ. ಆತನ ವಯಸ್ಸು ಸುಮಾರು 20 ಎಂದು ಬರೆಯಲಾಗಿದೆ. ಅದನ್ನು ಹೊರತುಪಡಿಸಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಸದ್ಯ ಪೊಲೀಸರು ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವೇದಿಕೆ ಮೇಲೆ ಧೂಳೆಬ್ಬಿಸಿದ ದಿವ್ಯಾಂಜಲಿ.. ಯಶ್​ ಅಮ್ಮನ ಬಾಯಿಂದ ಬಂತು ಚಿನ್ನದಂಥ ಮಾತು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ